ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೩೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಪಡೆದಿದಾನೆಂಬುದು ವಿಭೀಷಣನಿಗೆ ತಿಳಿದಿತ್ತು. ಹೀಗಿದ್ದುದರಿಂದ ಆತನು
ಇಂದ್ರಜಿತುವು ಪಡೆದ ವರಗಳ ಬಗ್ಗೆ ರಾಮನಿಗೆ:
ನಿಕುಂಭಿಲಾಮಸಂಪ್ರಾಪ್ತಮಕೃತಾಗಿಂ ಚ ಯೋ ರಿಪುಃ |
ತ್ವಾಮಾತತಾಯಿನಂ ಹವ್ಯಾದಿಂದ್ರಶತೋ ಸ ತೇ ವಧಃ ‖೧೪‖
ವರೋ ದತ್ತೋ ಮಹಾಬಾಹೋ ಸರ್ವಲೋಕೇಶ್ವರೇಣ ವೈ |
ಇತ್ಯೇವಂ ವಿಹಿತೋ ರಾಜನ್ವಧಸ್ತಸ್ಯೈಷ ಧೀಮಂತಃ ‖೧೫‖

“ಎಲೈ ಇಂದ್ರಜಿತುವೇ, ನೀನು ನಿಕುಂಭಿಲಾಗೆ ಹೋಗಿ ಹವನವನ್ನು
ಪೂರ್ತಿಗೊಳಿಸುವ ಮೊದಲು, ಯಾವ ಶತ್ರುವು ಶಸ್ತ್ರ ಧರಿಸಿದ ನಿನ್ನೊಡನೆ
ಯುದ್ಧ ಮಾಡುವನೋ ಆತನಿಂದ ನಿನ್ನ ವಧೆಯಾಗುವದು ಎಂಬ ವರವನ್ನು
ಸರ್ವಲೋಕಾಧಿಪತಿಯಾದ ಬ್ರಹ್ಮದೇವನು ಆತನಿಗೆ ಕೊಟ್ಟಿದ್ದಾನೆ. ಬುದ್ಧಿವಂತನಾದ
ಇಂದ್ರಜಿತುವಿನ ವಧೆಯು ಈ ರೀತಿಯಾಗಿಯೇ ನಡೆಯಬೇಕೆಂದು ಬ್ರಹ್ಮದೇವನ
ನಿಶ್ಚಯವಾಗಿದೆ” ಎಂದು ತಿಳಿಸಿದನು.
ಸ್ವಂತದ ವಧೆಯು ವರದ ವಿಷಯವಾಗಲಾರದು. ತನ್ನ ವಧೆಯಾಗಬೇಕೆಂದು
ಯಾರೂ ವರವನ್ನು ಬೇಡಿಕೊಳ್ಳುವದಿಲ್ಲ. "ನಿನ್ನ ವಧೆಯು ಈ ರೀತಿ ನಡೆಯ
ಲಿರುವದು” ಎಂಬ ಅಭದ್ರವಾಣಿಯು, ಪ್ರಸನ್ನನಾದ ದೇವತೆಯಿಂದ ಉಚ್ಚರಿಸ
ಲ್ಪಡವದಿಲ್ಲ. ಹೀಗಿರುವಾಗ ಈ ವರದ ಸಮರ್ಪಕತೆಯನ್ನು ಅರಿತುಕೊಳ್ಳುವದು
ಹೇಗೆ? ಎಂಬುದು ಸ್ವಾಭಾವಿಕ ಸಮಸ್ಯೆಯಾಗುವದು. ಇಲ್ಲಿ ಈ ವರದಂತೆ ಒಂದು
ವಿಶಿಷ್ಟ ಪರಿಸ್ಥಿತಿಯಲ್ಲಿ. ವಿಶಿಷ್ಟ ಸನ್ನಿವೇಶವಿರುವಾಗ ಮಾತ್ರ ವಧೆಯಾಗುವದು;
ಹೊರತು ವಧೆಯಾಗಲಾರದು. 'ಈ ಪರಿಸ್ಥಿತಿ ಇರದೇ ಇದ್ದಾಗ ಅಮರತ್ವ' ಎಂದು
ಅರ್ಥಮಾಡಿಕೊಳ್ಳಬೇಕು. ಬ್ರಹ್ಮದೇವನು ಇದೇ ರೀತಿಯ ಒಂದು ವರವನ್ನು
ಸುಂದೋಪಸುಂದರಿಗೆ ಕೊಟ್ಟಿದ್ದನು.
ಈ ವರದ ಬಾಬತ್ತಿನಲ್ಲಿ ಯಾಚಿತ ಇಲ್ಲವೇ ಅಯಾಚಿತ ಶಬ್ದಗಳು ಸರಿ
ಹೋಗುವದಿಲ್ಲ. ಬ್ರಹ್ಮದೇವ ಮತ್ತು ಇಂದ್ರಜಿತು ಇವರಲ್ಲಿಯ ಇಂದ್ರನ ಬಿಡುಗಡೆಯ
ಮಾತುಗಳು ಕೇವಲ ವ್ಯಾವಹಾರಿಕವಾಗಿ ಕೊಡತೆಗೆದುಕೊಳ್ಳುವ ಮಟ್ಟದವಾಗಿವೆ.
ಇಂದ್ರನನ್ನು ಬಿಟ್ಟುಕೊಡಲು ನೀನು ಏನು ಪ್ರತಿಯಾಗಿ ಬೇಡುವೆ?- ಎಂದು
ಸ್ವತಃ ಬ್ರಹ್ಮದೇವನು ಮೇಘನಾದನಿಗೆ ಬೇಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ.
ಆಗ ಮೇಘನಾದನು ಸಂಪೂರ್ಣ ಅಮರತ್ವವನ್ನು ಬೇಡಿದನು; ಆದರೆ
ಭೂಲೋಕದಲ್ಲಿ ವಾಸವಿದ್ದ ಯಾವ ಪ್ರಾಣಿಗೂ ಪೂರ್ಣ ಅಮರತ್ವವು ಸಿಗಲಾರದು