ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 479 - e XXVI ದ್ರವವನ್ನು ಪಾನಮಾಡಿದವ, ಅಜೀರ್ಣರೋಗದವ, ವಸ್ತಿ ಉಪಯೋಗಿಸಿಕೊಂಡವ, ಕ್ರೋಧ ಪಟ್ಟವ, ವಿಷಪೀಡಿತನಾದವ, ಬಾಯಾರಿಕೆಯುಳ್ಳವ, ಶೋಕಗ್ರಸ್ತ, ಬಳಲಿದವ, ಬಾಲಕ, ಮುದುಕ, ವೇಗವನ್ನು ತಡಕೊಂಡವ ಮತ್ತು ತಲೆಸ್ನಾನದಪೇಕ್ಷೆಯುಳ್ಳವ, ಇವರಾಗಿರು ತಾರೆ. ಋತುಸಂಬಂಧವಲ್ಲದ ಮೋಡವಿರುವ ದಿವಸದಲ್ಲಿ ನಸ್ಯವನ್ನೂ, ಧೂಮವನ್ನೂ, ಸೇವಿಸಬಾರದು. 14. 'ಪ್ರತಿಮರ್ಶಶ್ಚತುರ್ದಶಸು ಕಾಲೇಜೂಪಾದೇಯಃ | ತದ್ಧಾ | ತಲ್ಲೋ ಪ್ರತಿಮರ್ಶಕ ತೈತೇನ ಪ್ರಕ್ಷಾಲಿತದಂತೇನ ಗೃಹಾರ್ಗಕ್ಷತಾ ವ್ಯಾಯಾಮವ್ವಾ ಹದಿನಾಲ್ಕು ಯಾಧ್ವ ಪರಿಶ್ರಾಂತೇನ ಮೂತ್ರೋಚ್ಚಾರಕವಲಾಂಜನಾಂತೇ ಭುಕ್ತವತಾ ಕಾಲಗಳು - ಛರ್ದಿತವತಾ ದಿವಾನ್ವಸ್ಥಿತೇನ ಸಾಯಂ ಚೇತಿ | (ಸು. 598.) ಪ್ರತಿಮರ್ಶವನ್ನು ಹದಿನಾಲ್ಕು ಕಾಲಗಳಲ್ಲಿ ಉಪಯೋಗಿಸಬೇಕು - (1) ಹಾಸಿಗೆ ಯಿಂದೆದ್ದ ಕೂಡಲೇ, (2) ಹಲ್ಲು ತಿಕ್ಕಿ ತೊಳೆದ ಕೂಡಲೇ, (3) ಮನೆಯಿಂದ ಹೊರಗೆ ಹೊರಡುವಾಗ್ಗೆ, (4) ವ್ಯಾಯಾಮದಿಂದ ಬಳಲಿದವ, (5) ವ್ಯವಾಯದಿಂದ ಬಳಲಿದವ, (6) ಮಾರ್ಗ ನಡೆದು ಬಳಲಿದವ, (7) ಮೂತ್ರೋತ್ಸರ್ಜನದ ಅಂತ್ಯದಲ್ಲಿ , (8) ಮಲೋ ತ್ಸರ್ಜನದ ಅಂತ್ಯದಲ್ಲಿ, (9) ಕವಲದ ಅಂತ್ಯದಲ್ಲಿ, (10) ಅಂಜನದ ಅಂತ್ಯದಲ್ಲಿ, (11) ಊ ಟದನಂತರ, (12) ವಾಂತಿಯಾದ ಮೇಲೆ, (13) ಹಗಲು ನಿದ್ರೆಯಿಂದೆದ್ದ ಕೂಡಲೇ ಮತ್ತು (14) ಸಾಯಂಕಾಲ. ನರಾ ವಾ ದಲ್ಲಿ 3ನೇ ಕಾಲವನ್ನು ಬಿಟ್ಟು ಶಿರೋಭ್ಯಂಜನದ ಅಂತ್ಯ ಮತ್ತು ಹಾಸದ ಅಂತ್ಯ ಸೇರಿಸಿ 15 ಕಾಲ 5 ) ಗಳಾಗಿ ಕಾಣಿಸಿಯದೆ (ಪು 97 ) 15. ಈಷದುಚ್ಚಂಘತಃ ಸ್ನೇಹೋ ಯಾವ ಕಂ ಪ್ರಪದ್ಯತೇ || ಪ್ರತಿಮರ್ಶದ ನಸ್ಯೆ ನಿವಿಕ್ರಂ ತಂ ವಿದ್ಯಾತ್ ಪ್ರತಿಮರ್ಶ೦ ಪ್ರಮಾಣತಃ || (ಸು. 598.) ಪ್ರಮಾಣ ಮೂಗಿನ ಹೊಳ್ಳೆಯೊಳಗೆ ಬಿಟ್ಟ ನಸ್ಯಸ್ನೇಹದ ಬಿಂದುವು, ಸ್ವಲ್ಪ ಮೇಲಕ್ಕೆ ಎಳದಲ್ಲಿ, ಬಾಯಿಗೆ ಮುಟ್ಟುವದಕ್ಕೆ ಎಷ್ಟು ಬೇಕೋ, ಅದು ಪ್ರತಿಮರ್ಶದ ತಕ್ಕ ಪ್ರಮಾಣವೆಂತ ತಿಳಿಯ ತಕ್ಕದ್ದು. ಷರಾ ಮೇಲೆ ಹೇಳಿದ ಕಾಲಗಳಲ್ಲೆಲ್ಲಾ ಎರಡು ಬಿಂದುಗಳ ಪ್ರಮಾಣ ಉಪಯೋಗಿಸುವದಾಗಿ ವಾ (ಪು 97 ) ಗಳು 16. ನನ ರೋಗಾಃ ಶಾಮ್ಯಂತಿ ನರಾಣಾಮೂರ್ಧ್ವಜತ್ರುಬಾಃ || ಇಂದ್ರಿಯಾಣಾಂ ಚ ವೈಮಲ್ಯಂ ಕುರ್ಯಾದಾಸ್ಯಂ ಸುಗಂಧಿ ಚ || ನಸ್ಯದ ಗುಣ ಹನುದಂತಶಿರೋಗ್ರೀವಾತ್ರಿಕಬಾಹೂರಹಾಂ ಬಲಂ | - ಬಲೀಪಲಿತಖಾಲಿತ್ಯವ್ಯಂಗಾನಾಂ ಚಾಪ್‌ಸಂಭವಃ || (ಸು. 598-99.) ನಸ್ಯದಿಂದ ಮನುಷ್ಯರ ಕುತ್ತಿಗೆಸಂದಿನ ಮೇಲಿನ ಅಂಗಗಳಲ್ಲಿ ಹುಟ್ಟಿದ ರೋಗಗಳು ಶಮನವಾಗಿ, ಇಂದ್ರಿಯಗಳ ಶುದ್ದಿ, ಬಾಯಿಯ ಪರಿಮಳ, ದವಡೆ, ಹಲ್ಲು, ತಲೆ, ಕುತ್ತಿಗೆ,