ಅ. XXVI - 478 - ಏಕಾಂತರಂ ದ್ವಂತರಂ ವಾ ಸಪ್ತಾಹಂ ವಾ ಪುನಃ ಪುನಃ | ವಿರೇಚನ ನಸ್ಯದ ಏಕವಿಂಶತಿರಾತ್ರಂ ವಾ ಯಾವದ್ಯಾ ಸಾಧು ಮನ್ಯತೇ || ಹೀನಾತಿಯೋಗ ಗಳಿಗೆ ಪರಿಹಾರ ಮಾರುತೇನಾಭಿಭೂತಸ್ಯ ವಾತ್ಯಂತಂ ಯಸ್ಯ ದೇಹಿನಃ || ದ್ವಿಕಾಲಂ ಚಾಪಿ ದಾತವ್ಯಂ ನಸ್ಯಂ ತಸ್ಯ ವಿಜಾನತಾ || (ಸು. 5975) ತಲೆ ಶುದ್ಧವಾದದ್ದು ಹೀನವಾದರೆ ಅಥವಾ ಅತಿಯಾದರೆ, ಕಫವಾತಹರವಾದ ಉಪಚಾರ ಗಳನ್ನು ಮಾಡಬೇಕು. ತಲೆಯು ಒಳ್ಳೇದಾಗಿ ಶುದ್ಧವಾದ್ದಲ್ಲಿ, ತುಪ್ಪವನ್ನು ನಸ್ಯ ಮಾಡಿಸ ಬೇಕು. ಈ ನಸ್ಯವನ್ನು ದಿನ ಬಿಟ್ಟು ದಿನ, ಅಧವಾ ಎರಡು ದಿನ ಬಿಟ್ಟು, ಅಧವಾ ಏಳು ದಿನ ಬಿಡದೆ, ಅಧವಾ ಇಪ್ಪತ್ತೊಂದು ರಾತ್ರಿ, ಅಧವಾ ಸುಖವಾದದ್ದು ಕಾಣುವ ವರೆಗೆ, ವಾಡ ಬೇಕು. ವಾಯುವಿನಿಂದ (ತಲೆಯಲ್ಲಿ) ಅತ್ಯಂತವಾಗಿ ಪೀಡಿತನಾದ ಮನುಷ್ಯನಿಗೆ ತಿಳಿದಂಧಾ ವೈದ್ಯನು ದಿನಕ್ಕೆ ಎರಡು ಸಾರಿ ಸಹ ನಸ್ಯ ಮಾಡಿಸಬಹುದು. ಷರಾ ತಲೆಯಲ್ಲಿ ವಾತದ ದೋಷ, ಹಿಮ್ಮ, ಅಪಾನಕ, ಮನ್ಯಾಸ್ತಂಭ, ಸ್ವರಭ್ರಂಶ, ೫ ವಿಕಾರಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಗೆ, ಇತರ ರೋಗದಲ್ಲಿ ದಿನ ಬಿಟ್ಟು ದಿನ ಏಳು ದಿನಗಳ ವರೆಗೆ, ನಸ್ಯ ಉಪಯೋಗಿಸಬೇಕಾಗಿ ವಾ (ಪ್ರ 96 ) 12. ಅವಪೀಡಸ್ತು ಶಿರೋವಿರೇಚನವದಭಿಷ್ಯಂದಸರ್ಪದಷ್ಟವಿಸಂಶ್ಲೀಲ್ಲೊ ದದ್ಯಾಕ್ಟಿರೋ ವಿರೇಚನದ್ರವ್ಯಾಣಾಮನ್ಯತಮಮವಸಿಷ್ಠಾವಪೀಡ್ಯ ಚೇ ಅವಪೀಡ ಮತ್ತು ತೋವಿಕಾರಕ್ಕಮಿವಿಷಾಭಿಪuಾನಾಂ ಚೂರ್ಣ೦ ಪ್ರಧಮೇತ್ | ಶರ್ಕ ಪ್ರಧಮನವಿಧಿ 'ಗಳು* ರೇಕುರಸಕ್ಷೀರಕೃತವಾಂಸರಸಾನಾಮನ್ಯತಮಂ ಕ್ಷೀಣಾನಾಂ ಶೋ ಇತಪಿತೇ ಚ ವಿದಧ್ಯಾತ್ | (ಸು 597.) ಅವಪೀಡ ಎಂಬದು ಶಿರೋವಿರೇಚನಕ್ಕೆ ಉಕ್ತವಾದ ದ್ರವ್ಯಗಳಲ್ಲಿ ಯಾವದಾದ ರೂಂದನ್ನು ಅರೆದು (ಮಾಡಿದ ಕಲ್ಕವನ್ನು ) ಹಿಂಡಿ, (ಆ ರಸವನ್ನು ) ಅಭಿಷ್ಯಂದದವರಿಗೆ, ಸರ್ಪ ಕಚ್ಚಿದವರಿಗೆ ಮತ್ತು ಸಂಜ್ಞೆ ತಪ್ಪಿದವರಿಗೆ, ಶಿರೋಎರೇಚನದಂತೆ, ನಸ್ಯವಾಗಿ ಉಪ ಯೋಗಿಸುವಂಧಾದ್ದಾಗಿರುತ್ತದೆ. ಅದನ್ನೇ ಕುಟ್ಟಿ ಚೂರ್ಣ ಮಾಡಿ, ಮನೋವಿಕಾರದವ ರಿಗೂ, ಕೃಮಿಷದವರಿಗೂ, ವಿಷಬಾಧೆಯುಳ್ಳವರಿಗೂ, ನಸ್ಯವಾಗಿ ಕೊಡುವಂಥಾದ್ದು ಪ್ರಧಮನ, ಕ್ಷೀಣರಾದವರಿಗೂ, ರಕ್ತಪಿತ್ತದವರಿಗೂ, ಸಕ್ಕರೆ, ಕಬ್ಬಿನ ರಸ, ಹಾಲು, ತುಪ್ಪ, ಮಾಂಸರಸ, ಇವುಗಳೊಳಗೊಂದನ್ನು ನಸ್ಯವಾಗಿ ಉಪಯೋಗಿಸತಕ್ಕದ್ದು. 13. ನನ ಪರಿಹರ್ತ ಭುಕ್ತವಾನಪಕರ್ಷಿತೋ್ರತ್ಯರ್ಧತರುಣಪ್ರತಿ ಶ್ಯಾಯಾ ಗರ್ಭಿಣೀ ಪೀತಸ್ನೇಹೋದಕಮದ್ಯದ್ರವೋSಜೀರ್ಣೀ ದತ್ತ ನಸ್ಯಕ್ಕೆ ಅನ ವಸ್ತಿ ಶ್ರದ್ದೋ ಗರಾರ್ತಸ್ತ್ರಷಿತಃ ಶೋಕಾಭಿಭೂತಃ ಶ್ರಾಂತೋ ಬಾ ಲೋ ವೃದ್ರೋ ವೇಗಾವರೋಧಿತಃ ಶಿರಃಸ್ಮಾತುಕಾಮಶೇತಿ | ಅನಾ ರ್ತವೇ ಚಾವೋ ನಸ್ಯ ಧೂಮೌ ಪರಿಹರೇತ್ | (ಸು. 597.) ನಸ್ಯಕ್ಕೆ ಅರ್ಹರಲ್ಲದವರು ಯಾರೆಂದರೆ ಉಂಡವ, ಶೋಧನೆಮಾಡಿಸಿಕೊಂಡವ, ಬಹಳ ಎಳೇ ಪೀನಸರೋಗವುಳ್ಳವ, ಗರ್ಭಿಣೀ ಸ್ನೇಹವನ್ನು, ನೀರನ್ನು, ಮದ್ಯವನ್ನು, ಅಥವಾ ಇತರ ರ್ಹರು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೮
ಗೋಚರ