________________
೩೮೬ ವೈಶಾಖ ಲಕ್ಕಂಗೆ ಈಗ ದಾದಿಲ್ಲ, ಪಿರ್ಯಾದಿಲ್ಲ. ಈಗವನ್ನ ಯಾನು ಮಾಡಿದ್ರೆ ತಾನೆ ಯಾರು ಕ್ಯಾಳೋವಂಗಿದ್ದಾರು?... ಎಂಗಿದ್ರೂವೆ ಎಣದ ಮೈಮ್ಯಾಗಿನ ವಡವೇನೆಲ್ಲ ಕದ್ದಿರಬೇಕು! ಅಂತ ಗುಮಾನು ಅಬ್ಬಿದ್ರೆ, ಜನ ನಂಬ್ದಾರೆ. ಇಂಗೆ ದುರಾಲೋಜ್ಞೆ ಮಾಡಿ ತಮ್ಮ ತೆಪ್ಪ ನನ್ನ ಮ್ಯಾಲೆ ಎತ್ತಾಕಕ್ಕಿಲ್ಲಾಂತ ಎಂಗೆ ಯೋಳದು?... ಹೊತ್ತಾರೆ ನಂಜೇಗೌಡ ಈ ಕಡೀಕೆ ಬಂದು ಗುದ್ದದ ಮಣ್ಣು ಕೆದಕಿದಂಗಿರೊ ಅವಸ್ತಯ ನ್ಯಾಡಿದೆ, ಕಂಡ್ಯಾ ಅವಯ್ಯಂಗೆ ಅನುಮನಸು ಬಂದು, ಯಾನೊ ಅಸಂದರ್ಬ ನಡದದೇಂತ ಗುದ್ದ ಅಗಸಿ ಕ್ವಾಡ್ ಕ್ವಾಡ್ತಾನೆ. ಆಮ್ಯಾಕೆ ಯೇನಪ್ಪ ಮಡಾದು?.... ತಾವು ತಪ್ಪಿಸ್ಕಳಕ್ಕೆ ಈ ಪಟಿಂಗರು ಊರಲ್ಲಿ ನನ್ನ ಮ್ಯಾಲೆ ತೆಪ್ಪ ವೊರಿಸಿ, ತಮಾಸಿ ಕ್ವಾಡಕ್ಕೂ ಏಸಿದೋರಲ್ಲ.... ಆಗ ಊರಲ್ಲಿ ನನ್ನ ಮ್ಯಾಲೆ ಮತ್ತೊಂದು ನ್ಯಾಯ! ತೂ! ಈ ಹಾಳು ಜನದ ಸಾವಾಸವೇ ಬ್ಯಾಡ.... ಲಕ್ಕ ಗುಡ್ಡ ವೊಕ್ಕು ಕಟ್ಟಾಕಿದ್ದ ಬೊಡ್ಡ ಬಿಚ್ಚಿದ... ತಿರುಗ ಅವಂಗೆ ಯೋಚ್ಛೆ: “ಗೋಸು ಸಾಬರೇನೊ ನನ್ನ ಕಷ್ಟದಲ್ಲಿ ಉಪಕಾರ ಮಾಡರೆ, ಸರಿ. ಆದ್ರೆ, ನಾನು ಇಲ್ಲಿಂದ ವೋಂಬೋಗಕ್ಕೆ ಅವರು ಸುತರಾಂವಪ್ಪಕ್ಕಿಲ್ಲ. ನಂಗ್ವತ್ತು. ಅವರು ನನ್ ಬೋ ಪಿರೀತ ಮಾಡಾದ್ರಿಂದ, ನನಿಲ್ಲಿ ದೊಡ್ಡ ಕಟ್ಟಾಕಿದ್ದಂಗೆ, ನನಿಲ್ಲಿಂದೋಗಕ್ಕೆ ಬುಡದೆ ಬೀರುಗುಣಿಕೆ ಬಿಗುದು ನನ್ನ ಇಲ್ಲೆ ಕಟ್ಟಾಕಿಬುಡ್ತಾರೆ!... ಆದ್ರಿಂದ ಅವರೆ ಯಾವು ಸುಳುವನೂ ಕೂಡದೆ, ಗಮ್ಮನೆ ಇಲ್ಲಿಂದ ಕಾಲುಕೀಳಾದೆ ಚೆಂದ!.... ಇದೇ ಚಿಂತೇಲಿ ಚ್ಯಾಪೆ ಮ್ಯಾಲೆ ಮನಗಿ ನಾತ್ರೆ ಮೂರ್ತ ವೋಳ್ಳಾ... ಮೊದಲ ಕೋಳಿ ಜ್ವತೆ ಎದ್ದ. ಕಾವಳ ಇನ್ನೂ ಗಕುಂ ಅಂತಿತ್ತ. ಲಾಟಿನು ಕತ್ತಿ.. ದಡದಡೆ ಆದ ಇಡಕಂಡು ಕಾಡುಹಾಕಿ ಬಿದ್ದ. ಆತುರಾತ್ರಾಗಿ ಅವನು ವೋಯ್ತಿದ್ದಾಗ, ಬೊಡ್ಡ ಅವನ ಕಾಲೆ ತ್ವಡರಿಕತ್ತು. “ಅಯ್ಯಯ್ಯೋ, ಬಿದ್ದೇ ವೋಗಿದ್ದಲ್ಲ... ಇದರ ವಂಸ ಎಕ್ಕುಟ್ಟೋಗ... ಇತ್ತಾಗೋದರೂವೆ ಬಂದು ಬಂದು ಕಾಲಗೇ ತೊಡರಿಕತ್ತದಲ್ಲ!...” ಕ್ವಾಪದಿಂದ ಲಕ್ಕ ಬೋಡ್ಡ ಕಾಲ್ಕಿಂದ ಝಾಡಿಸ್ಸ. ಕುಂಯಯ್ಯೋ ಕುಂಯಯ್ಯೋ ಅಂತ ಬೊಡ್ಡ ವಟ್ಟೋರಿಕೆ ಬಿದ್ದು ಓಡ್ತು.