________________
೩೭೮ ವೈಶಾಖ ಅವನ ಮೊಕ ಕ್ವಾಡಿದಾಗ್ಲೆಲ್ಲ ಲಕ್ಕಂಗೆ, ಅವದೂತಪ್ಪ ವಳಗೇ ನಕ್ಕೂತ ಅನೆ ಅನ್ನುತ್ತಿತ್ತು.... ಅವದೂತಂಗೆ ಎಡತಿ, ಮಕ್ಕಳಿಲ್ಲ? ಅಕ್ಕ ತಂಗಿ, ಅಣ್ಣ ತಮ್ಮ ಇಲ್ವ?- ಅಪ್ಪ ಅಮ್ಮ ತೀರಿಕಂಡ್ರ? ಸಮ್ಮಂದೀಕರು ಅನ್ನೋರು ಯಾವ ಊರಲ್ಲೂ ಇಲ್ಲವೆ ಇಲ್ವ?- ಈವಯ್ಯ ಲಗ್ದಾನೆ ಆಗಿಲ್ವ?- ಅತ್ವಾ ಲಗ್ಗಾಗಿ, ಎಡತಿ ಸತ್ತೋದ್ಧ, ಇಲ್ಲ ಇವ್ರ ಬುಟ್ಟು ಇನ್ನಾರ ಕುಟ್ಟೆ ಆದ್ರೂ ವೋಡೋದ್ಧ- ಆ ಒಂದು ಇಚಾರವೂ ಯಾರೂ ಇಳಿದಿದ್ದೇ ಇಲ್ಲ. ಲಕ್ಕ ಊರಲ್ಲಿ ತಿಳುವಳಿಕಸ್ತರು ಅನ್ನುಸಿಕೊಂಡೋರ ಯಾಲ್ಯಾರನೊ ಕೇಳಿದ್ದ. ಯಾರೊಬ್ಬರೂ ನಂಗೂತ್ತಿಲ್ಲ. ನಂಗೊತ್ತಿಲ್ಲ, ಅನ್ನೋರು... ಕೆಲವು ಇವರ “ಅವರೊಬ್ಬರು ಮಾತ್ರ” ಅಂದರೆ, ಇನ್ನೂ ಕೆಲವು “ಅವನೊಬ್ಬ ಉಚ್ಚ” ಅನ್ನೋರು... ಯಾವು ದಿಟವೊ ಯಾವು ಸಟೆಯೊ-ಲಕ್ಕಂಗಂತೂ ವೊಳೀನೆ ಇಲ್ಲ..... ಅದೇ ಚಿಂತೇಲಿದ್ದಾಗ, ಇಂದ್ಯೆ ನಡೆದ ಒಂದು ಸಂಗ್ತಿ ಗೆಪ್ತಿ ಆಯ್ತು! ಒಂದು ಜಿನ ತಮ್ಮ ಗುಡ್ಡಲ್ಲಿ ಅವ್ವ ರೊಟ್ಟಿ ಆಡ್ತಾ ಇದ್ಲು. ಅಯ್ಯ, ನಾನು ಎಲ್ಲ ಕುಂತೇ ಇವಿ. ಅವ್ವ ಬೇಬ್ಬಿ, ಒಲೆ ಉರೀಲಿ ರೊಟ್ಟಿ ಅಂಚು ಸುಟ್ಟು, ಮೊದಲೆ ರೋಟ್ಯ ಅಯ್ಯಂಗೆ ಅಂತ ತಣಿಗ್ಗೆ ಆಕಿದ್ದು. ಈ ಅವದೂತಪ್ಪ ಅದ್ಯಾವ ಮಾತ್ಸಲ್ಲಿ ಗುಡೋಳೀಕೆ ಬಂದನೊ?- ಬಂದೋನೆ, ನೆಟ್ಟಗೆ ತಣ್ಣಿಗೆ ಕೈ ಆಕಿ, ಬಿಸಿ ರೊಟ್ಟಿ ತಕ್ಕಂಡು, ಕಡಿಯಕ್ಕೆ ಮುಟ್ಟಿಕಂಡ. ಅವ್ವ “ಅಯ್ಯಯ್ಯೋ, ಇದೇನ ಬಂತು ಕೇಡು?- ಈ ಅವದೂತಪ್ಪ ಯಾಕೆ ನಮ್ಮ ಗುಡ್ಕೊಳ್ಳೋಕೆ ಬರಬೇಕು? ವೊರೀಕೆ ನಿಂತು ಕ್ಯಾಳಿದ್ರೆ, ನಾವು ಕ್ವಡದೇ ಇದ್ರ?.... ಅದೂ ಅಲ್ಲದೇಯ ಈ ಉತ್ತಮರೋನು ನಮ್ಮ ವೊಲೇರ ಗುಡೋಳೀಕೆ ನುಗ್ಗದೂ ಅಲ್ಲೆ, ನಾವು ಅಟ್ಟ ಅಡಿಗೇನು ತಿಂತಾ ಅವ್ರಲ್ಲ?...” ಎಂದು ಅಣಣೆ ಗಟ್ಟಿಸಿಕಂಡ್ಲು. ರೊಟ್ಟಿ ಕಡೀತ ಕಡೀತ, “ವೊಲೆಯ ಅನ್ನೊನೆ ಮೊಲೆಯ?...” ಅಂದು ನಗಾಡ್ರ, ನಗಾಡ್ರ ವೊಂಟೋದ, ಅವದೂತಪ್ಪ. ಆವೊತ್ತೆಲ್ಲ ಅಯ್ಯನ ಕುಟ್ಟೆ ಅವ್ವ ಯೋಳೋದು ತಪ್ಪಿಲ್ಲ: “ಉತ್ತಮರು ಇಂಗೆ ನಮ್ಮ ಗುಡೋಳೀಕೆ ಬಂದದ್ದು, ನಂಗ್ಯಾಕೊ ಇತ ಕಾಣಿಕ್ಕಿಲ್ಲ ಅಂತಾನೆ ಇದ್ಲು... ಇಸ್ವರಾಗೆ ಆ ಎಂಗಸು ಗುಂಡೀಲಿ ಇನ್ನೊಂದು ಎಂಗಸು ತಂಬಿಗೇಲಿ ಕ್ವಿಟ್ಟ ನೀರ ಉಪಯೋಗ್ಲಿ ಸುದ್ದಿಮಾಡ್ಕಂಡು ಗುಂಡಿಂದ ಮ್ಯಲೆ ಬಂದ್ಲು. ಅನಂತ್ರ ಅವರಿಬ್ಬರೂವೆ ಅವದೂತಪ್ಪನ ಬಗ್ಗೆ ಚರ್ಚಿಸ್ತ ಊರೆ ವೊಂಟರು.