6 11 - 48 - ಯವದೋಷಧಾತುಮಲಾಶಯಾನುಸಾರಿಣಿ ರಸೇ ಜಿಜ್ಞಾಸಾ ಕಿಮ ಯಂ ಸೌಮ್ಯಸ್ತೆೈಜಸ ಇತಿ | ಅತ್ರೋಚ್ಯತೇ ಸ ಖಲು ದ್ರವಾನುಸಾರೀ ಸ್ನೇಹನಜೀವನತರ್ಪಣಧಾರಣಾದಿಭಿರ್ವಿಶೇಷೈಃ ಸೌಮ್ಯ ಇತ್ಯವಗ ಮೄತೇ | ಸ ಖಲ್ವಾಪೋೄ ರಸೋ ಯಕೃತ್ ಪ್ಲೀಹಾನೌ ಪ್ರಾಪೄ ರಾಗಮುಪೈತಿ | ರಂಜಿತಾಸ್ತೇಜಸಾತ್ವಾಪಃ ಶರೀರಸ್ಥೇನ ದೇಹಿನಾಂ | ಅವ್ಯಾಪನ್ನಾಃ ಪ್ರಸನ್ನೇನ ರಕ್ತಮಿತ್ಯಭಿಧೀಯತೇ || (ಸು. 47 ಪಂಚಭೂತಗಳಿಂದುಂಟಾದ ನಾಲ್ಕು ವಿಧವಾದ (ಅಂದರೆ ನುಂಗಿದ್ದು, ಕುಡಿದದ್ದು, ನೆಕ್ಕಿದ್ದು, ತಿಂದದ್ದು) ಷಡ್ರಸಗಳುಳ್ಳ, ಎರಡು ವಿಧ (ಉಷ್ಣ, ಶೀತ), ಅಧವಾ 8 ವಿಧ (ಶೀತ, ಸ್ನಿಗ್ಧ, ರೂಕ್ಷ, ವಿಶದ, ಪಿಚ್ಚಿಲ, ಮೃದು, ತೀಕ್ಷ್ಣ, ಉಷ್ಣ) ವೀರ್ಯವುಳ್ಳ, ಅಧವಾ ಅನೇಕ ಗುಣವುಳ್ಳ (ಉಪಯೋಗಿಸಲ್ಪಟ್ಟ) ಆಹಾರವು ಚನ್ನಾಗಿ ಪಕ್ಕವಾದಾಗ್ಗೆ ತೇಜೋಭೂತವಾದ ಮತ್ತು ಅತ್ಯಂತ ಸೂಕ್ಷ್ಮವಾದ ಯಾವ ಸಾರವು ಉಂಟಾಗುತ್ತದೋ, ಅದು ರಸ ಎಂತ ಕರೆಯಲ್ಪಡುತ್ತದೆ ಮತ್ತು ಅದಕ್ಕೆ ಹೃದಯವು ಸ್ಥಾನ. ಅದು ಆ ಹೃದಯದಿಂದ ಹೊರಟು 24 ಧಮನೀನಾಡಿಗಳನ್ನು ಪ್ರವೇಶಿಸಿ, 10 ಮೇಲಕ್ಕೆ, 10 ಕೆಳಗೆ, 4 ಅಡ್ಡವಾಗಿ ಚಲಿಸಿ, ದೃಷ್ಟಿಗೋಚರವಲ್ಲದ ಹೇತುವುಳ್ಳ ಕೆಲಸದಿಂದ ಇಡೀ ಶರೀರವನ್ನು ದಿನೇ ದಿನೇ ತೃಪ್ತಿ ಹೊಂದಿಸುತ್ತದೆ, ಬೆಳಿಸುತ್ತದೆ, ಆಧರಿಸುತ್ತದೆ, ನಡಿಸುತ್ತದೆ, ಮತ್ತು ಬದುಕಿಸುತ್ತದೆ. ಶರೀರದೊಳಗೆ ಓಡಾೄಡುತ್ತಿರುವ ಆ ರಸದ ಗತಿಯನ್ನು ಕ್ಷಯ-ವೃದ್ಧಿ ವಿಕಾರಗಳಿಂದ ಅನು ಮಾನಕ್ರಮದಲ್ಲಿ ಊಹಿಸಬೇಕಾದದ್ದು ಶರೀರದ ಸರ್ವ ಅವಯವ-ದೋಷ-ಧಾತುಮಲಾಶಯಗಳನ್ನು ಅನುಸರಿಸಿ ಹೋಗುವ ಆ ರಸದ ವಿಷಯದಲ್ಲಿ ಇದೊಂದು ಜಿಜ್ಞಾಸ, ಅದು ಸೌಮ್ಯವೋ, ತೈಜಸವೋ? ಎಂಬದು ಇದಕ್ಕೆ ಉತ್ತರವೇನಂದರೆ' ಆ ರಸವು ದ್ರವ ಪದಾರ್ಧವನ್ನನುಸರಿಸಿರುವದರಿಂದಲೂ, ಸ್ನೇಹನ (ಪಸೆಮಾಡುವದು), ಜೀವನ (ಬದುಕಿಸು ವದು), ತರ್ಪಣ (ತೃಪ್ತಿಗೊಳಿಸುವದು), ಧಾರಣ (ಆಧರಿಸುವದು), ಇವೇ ಮೊದಲಾದ ವಿಶೇಷಗಳಿಂದ ಯುಕ್ತವಾದ್ದರಿಂದಲೂ ಸೌಮ್ಯ ಎಂತ ತಿಳಿದುಬರುತ್ತದೆ. ಆ ಜಲರೂಪ ವಾದ ರಸವು ಯಕೃತ್ ಪ್ಲೀಹಗಳನ್ನು ಸೇರಿ, ವರ್ಣವನ್ನು ಹೊಂದುತ್ತದೆ. ಮನುಷ್ಯರ ದೇಹ ದಲ್ಲಿನ ಪ್ರಸನ್ನವಾದ ತೇಜಸ್ಸಿನಿಂದ (ಬಿಸಿಯಿಂದ) ಆ ದ್ರವವು ಕೆಡದೆ ಇದ್ದು, ವರ್ಣ ಹೊಂದಿ, ರಕ್ತ ಎಂಬ ಹೆಸರು ಪಡೆಯುತ್ತದೆ 419. ಚರಕ ಆಹಾರಪರಿಣಾಮಕರಾಸ್ತು ಇಮೇ ಭಾವಾ ಭವಂತಿ | ತದೄಧಾ | ಉಷ್ಮಾ ವಾಯುಃ ಕ್ಲೇದಃ ಸ್ನೇಹಃ ಕಾಲಃ ಸಂಯೋಗಶ್ವೇತಿ | .. .. ಉಷ್ಮಾ ಪಚತಿ ವಾಯುರಪಕರ್ಷತಿ ಕ್ಲೇದಃ ಶೈಥಿಲ್ಯಮಾಪಾದಯತಿ ಸ್ನೇಹೋ ಮಾರ್ದವ0 ಜನಯತಿ ಕಾಲಃ ಪರ್ಯಾಪ್ತಿಮಭಿನಿರ್ವರ್ತಯತಿ ಸಂಯೋಗಸ್ತು ಏಷಾಂ ಪರಿಣಾಮಧಾತುಸಾಮ್ಯಕರಃ ಸಂಪದ್ಯತೇ | (ಚ. 347) ಪ್ರಕಾರ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೩೮
ಗೋಚರ