ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಕಡೆ ಪ್ರಯಾಸದಿಂದ ಯೋಚಿಸತೊಡಗಿದನು. ತನ್ನ ಜೀವನದ ಹಿಂದಿನ ಹಾಳೆಗಳನ್ನು ತಿರುವಿಹಾಕಿ ಸಿಂಹಾವಲೋಕನ ಮಾಡಿದನು ತನ್ನ ಹೆತ್ತವರ ನೆನಪಿನೊಡನೆ, ತನಗೆ ಸೇರಿದ್ದ ಚುಕ್ಕೆಗಳ ಸಣ್ಣ ಕುದುರೆಯ ಜ್ಞಾಪಕವೂ ಬಂತು. ಫ್ರೆಂಚ್ ಕಲಿಸಲು ಬರುತ್ತಿದ್ದ ಉಪಾಧ್ಯಾ ಯರು ತನಗೆ ನೃತ್ಯವನ್ನು ಅಭ್ಯಾಸಮಾಡಿಸಿದ್ದರು. ಅವರಲ್ಲಿದ್ದ ಹಳೆಯ ವಾಲ್ಟೇರ್ ಪುಸ್ತಕವನ್ನು ಅವರಿಗೆ ತಿಳಿಯದ ಹಾಗೆ ವಶಪಡಿಸಿಕೊಂಡಿದ್ದನು. ಮತ್ತೊಂದು ಸಾರಿ ಪ್ಯಾರಿಸ್, ಮಂಕು ಕವಿದ ಲಂಡನ್, ಉಲ್ಲಾಸಭರಿತ ವಿಯನ್ನ ಮತ್ತು ರೋಮ್ ದೇಶಗಳನ್ನು ಕಾಣುವಂತೆ ಭಾಸವಾಯಿತು. ತನ್ನಂತೆಯೇ ಕನಸು ಕಂಡ ಉದ್ರಿಕ್ತ ಯುವಕ ತಂಡದ ನೋಟ ಕಣ್ಣಿಗೆ ಕಟ್ಟ ದಂತಿತ್ತು. ಅವರ ಕನಸು ಪೋಲೆಂಡಿನ ಸ್ವಾತಂತ್ರ್ಯ ಮತ್ತು ವಾರ್ಸಾದಲ್ಲಿ ಪೋಲೆಂಡಿನ ರಾಜನಿಗೆ ಪಟ್ಟಾಭಿಷೇಕ. ಆ ಸ್ಫೂರ್ತಿಯಿಂದಲೇ ಈ ದೊಡ್ಡ ಪ್ರಯಾಣ ಆರಂಭವಾದುದು. ನಿಜ; ನಾನು ಎಲ್ಲರಿಗಿಂತಲೂ ಹೆಚ್ಚು ಕಾಲ ಉಳಿದಿದ್ದೇನೆ. ಸೇಂಟ್ ಪೀಟ‌ಬರ್ಗ್‌ನಲ್ಲಿ ಇಬ್ಬರು ಮರಣದಂಡನೆಗೆ ಗುರಿ ಯಾದ ಮೇಲೆ, ಒಬ್ಬೊಬ್ಬರಾಗಿ ಗತಿಸಿದ ವೀರ ಯೋಧರನ್ನು ಎಣಿಕೆ ಮಾಡ ಬೇಕು. ಒಂದು ಕಡೆ ಒಬ್ಬನು ಜೈಲರಿನಿಂದ ಪ್ರಾಣ ಹೋಗುವ ತನಕ ಏಟು ತಿನ್ನ ಬೇಕಾಯಿತು. ಮತ್ತೊಂದೆಡೆ ರಕ್ತಮಯವಾದ ದೇಶಭ್ರಷ್ಟರ ಮಾರ್ಗ! ಅಲ್ಲಿ ಎಷ್ಟೋ ತಿಂಗಳ ಕಾಲ ಪ್ರಯಾಣಮಾಡಿದ್ದ ಒಬ್ಬಾತ ಕಡೆಗೆ ರಾವುತರ ಒರಟು ಕೈಗಳಿಗೆ ಸಿಕ್ಕಿ ದಾರಿಯಲ್ಲಿ ಬಿದ್ದು ಬಿಟ್ಟನು. ಯಾವಾಗಲೂ ಈ ಮೃಗಸದೃಶವಾದ ಕಾಡುತನ ತಮ್ಮನ್ನು ಬಿಡಲಿಲ್ಲ. ಜ್ವರಪೀಡಿತರಾಗಿ, ಗಣಿ ಗಳಲ್ಲಿ, ಕಶಾಪ್ರಹಾರದಿಂದ ಎಷ್ಟೋ ಜನ ಪ್ರಾಣಬಿಟ್ಟರು. ತಪ್ಪಿಸಿಕೊಂಡು ಬಂದವರಲ್ಲಿ ಇಬ್ಬರು, ರಷ್ಯಾ ರಾಜ್ಯಕ್ಕೆ ಅಧೀನರಾದ ತುರ್ಕಿ ಜನಾಂಗದವ ರೊಡನೆ ಯುದ್ಧ ಮಾಡಿ ಸತ್ತರು. ತಾನೊಬ್ಬ ಮಾತ್ರ ಕಳುವು ಕಾಗದ ಗಳನ್ನೂ, ಹಿಮದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣವನ್ನೂ ಹೊತ್ತು ಕಮ್ಚಟಕಾ ಪ್ರದೇಶಕ್ಕೆ ನುಗ್ಗಿ ಬಂದನು. ಇದೆಲ್ಲವೂ ಅನಾಗರಿಕತೆಯ ಪರಮಾವಧಿಯಲ್ಲದೆ ಬೇರೆಯಲ್ಲ. ಚಲಚಿತ್ರ ಗಳಲ್ಲಿ, ನಾಟಕ ರಂಗಗಳಲ್ಲಿ, ನೃತ್ಯಾಲಯಗಳಲ್ಲಿ ತನ್ಮಯವಾಗಿದ್ದ ತನ್ನ ಹೃದಯವನ್ನು ಈ ದುಷ್ಟ ಶಕ್ತಿಯು ಆವರಿಸಿಬಿಟ್ಟಿತ್ತು. ತನ್ನ ರಕ್ತವನ್ನು ಅರ್ಪಿಸಿ ಜೀವವನ್ನು ಕೊಂಡುಕೊಂಡಿದ್ದನು. ಪ್ರತಿಯೊಬ್ಬರೂ ಕೊಲೆಮಾಡಿದ್ದರು. ತಾನು ಕೂಡ ರಹದಾರಿ ಪಡೆಯಲು ಆ ಪ್ರಯಾಣಿಕನನ್ನು ಕೊಲೆಮಾಡಿದ್ದ.