ಪುಟ:ಬಾಳ ನಿಯಮ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ ಅವನು ಬಾಳಬೇಕೆಂಬ ವಿಧಿ ನಿಯಮ ಮೊದಲೇ ಆತನಿಗೆ ತಿಳಿಯದಂತೆ ನಿಶ್ಚಿತವಾಗಿತ್ತು. * ಸುಬೆನ್ ಕೊವ್ ನಿಟ್ಟುಸಿರುಬಿಟ್ಟನು...ತನ್ನ ಮುಂದಿದ್ದ ಬಿಗ್ ಇವಾನ್ ದೈತ್ಯಾಕೃತಿಯವನಾದರೂ ಉಕ್ಕಿನ ಮನುಷ್ಯನಾದರೂ ಎದೆಗಾರನಾಗಿದ್ದಿಲ್ಲ. ಅವನು ಮೊದಲು ರಾವುತನಾಗಿದ್ದು ಕಡಲುಗಳ್ಳನಾಗಿ ಮಾರ್ಪಾಟಾದವನು. ಈಗ ಪಶುಪ್ರಾಯನಾಗಿದ್ದನು. ನರಗಳ ಪ್ರತಿಕ್ರಿಯೆ ಬಹು ಕೆಳಮಟ್ಟದ್ದಾಗಿದ್ದು ಸಾಮಾನ್ಯರಲ್ಲಿ ಉಂಟಾಗುವ ತೀವ್ರ ನೋವು ಆತನಿಗೆ ಕೇವಲ ಕಚಕುಳಿ ಯಂತಾಗುತಿತ್ತು. ಆದರೂ ಈ ನ್ಯುಲಾಟೋ ಇಂಡಿಯನರನ್ನು ನಂಬ ಬಹುದು. ಅವರು ಬಿಗ್ ಇವಾನನ ನರವ್ಯೂಹವನ್ನೇ ಭೇದಿಸಿ ಕಂಪಿಸುತ್ತಿದ್ದ ಆತ್ಮದ ಮೂಲವನ್ನು ಹುಡುಕತೊಡಗಿದ್ದರು. ಮನುಷ್ಯನೊಬ್ಬ ಇಷ್ಟು ಯಾತನೆ ಪಡುತ್ತ ಬದುಕಿದ್ದಾನೆಂದರೆ ಊಹಿಸಲಸಾಧ್ಯ. ತನ್ನ ನರ ಕೇಂದ್ರದ ದೃಢತೆಗೆ ತಕ್ಕಂತೆ ಬಿಗ್ ಇವಾನ್ ವರ್ತಿಸಿರಬೇಕು. ಆಗಲೇ ಇತರರಿಗಿಂತ ಎರಡರಷ್ಟು ಹೆಚ್ಚಿನ ಕಾಲಾವಧಿ ಆತನು ಜೀವವನ್ನು ಹಿಡಿದಿದ್ದನು.... ಇನ್ನೂ ಬಹು ಹೊತ್ತು ಈ ನರಳಾಟವನ್ನು ನೋಡಲು ನಾಧ್ಯವಿಲ್ಲವೆಂದು ಸುಬೆನ್ಕೊವ್ ಭಾವಿಸಿದನು-ಇವಾನ್ ಏಕೆ ಸಾಯುವುದಿಲ್ಲ ? ಆ ಚೀರಾಟ ನಿಲ್ಲದಿದ್ದರೆ ತಾನು ಹುಚ್ಚನಾಗುತ್ತೇನೆ. ನಿಂತರೆ ತನ್ನ ಸರದಿ ಬರುತ್ತದೆ. ಮೊದಲೇ ಹಲ್ಲು ಕಿರಿಯುತ್ತಾ ಯಕಾಗ ತನಗಾಗಿ ಕಾದಿದ್ದಾನೆ. ಅವನನ್ನು ಒಂದು ವಾರದ ಹಿಂದೆ ಕೋಟೆಯಿಂದ ಹೊರಕ್ಕೆ ತಳ್ಳಿ, ಅವನ ಮುಖಕ್ಕೆ ನಾಯೆಚಾಟಿಯಿಂದ ತಾನೇ ಹೊಡೆದಿದ್ದನು. ಈಗ ಯಕಾಗನೇ ತನ್ನ ವಿಚಾರಣೆಗೆ ನಿಂತಿದ್ದಾನೆ. ನಿಜವಾಗಿಯೂ ಅವನು ಅತ್ಯಂತ ಕಠಿಣವಾದ ಶಿಕ್ಷಾಕ್ರಮವನ್ನು ತನಗಾಗಿ ಕಾದಿರಿಸಿದ್ದಾನೆ. ತನ್ನ ಕೀಲುಗಳನ್ನು ಸಡಿಲಿಸ ಲಿದ್ದಾನೆ. ಇವಾನ್ ನರಳಾಟವನ್ನು ನೋಡಿದರೆ ಯಕಾಗನ ಶಿಕ್ಷಾಕ್ರಮವೇ ಒಳ್ಳೆಯದಿರಬೇಕು....ಯಕಾರನಿಗೆ ಶಿರಬಾಗಿ ಇಂಡಿಯನರು ಸಂತೋಷದಿಂದ ಕೈ ಚಪ್ಪಾಳೆ ತಟ್ಟಿ ನಗುತ್ತಾ ಹಿಂದೆ ಸರಿದು ನಿಂತರು. ಅಪರಾಧ ಮಾಡಿದ ಭಯಂಕರ ವಸ್ತುವನ್ನು ನೋಡಿ ಸುಬೆನ್ ಕೊವ್ ಕೂಡ ಚಿತ್ರೋದ್ರೇಕದಿಂದ ನಗಲಾರಂಭಿಸಿದನು. ಅದನ್ನು ನೋಡಿ ಇಂಡಿಯನರಿಗೆ ಆಶ್ಚರ್ಯವಾಯಿತು. ಆದರೆ ಅವನು ಮಾತ್ರ ನಗುತ್ತಲೇ ಇದ್ದನು. ಈ ರೀತಿ ಆಗಬಾರದು ಎಂದು ತನ್ನನ್ನು ತಾನೇ ಸುಧಾರಿಸಿಕೊಂಡನು. ಸೆಳೆವಿನ ಎಳೆತ ನಿಧಾನವಾಗಿ ಕಡಿಮೆಯಾಗುತ್ತ ಬಂತು. ಬೇರೆ ವಿಷಯಗಳ