ಪುಟ:ಬಾಳ ನಿಯಮ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

00 ಬಾಳ ನಿಯಯ


ಮುಖ ಭಂಗ

ಅದೇ ಕೊನೆ. ಮನೋವೇಧಕವೂ, ಭಯಾನಕವೂ ಆದ ದಾರಿಯಲ್ಲಿ ಸುಬೆನ್ ಕೊವ್ ಬಹುದೂರದ ಪ್ರಯಾಣ ಮಾಡಿ ಮನೆಗೆ ಹಿಂದಿರುಗಿ ಹಾರಿ ಬರುವ ಪಾರಿವಾಳದಂತೆ ಯೂರೋಪಿನ ರಾಜಧಾನಿಗಳ ಕಡೆ ಹೊರಟಿದ್ದನು. ಈಗ ಅವನು ಎಲ್ಲಕ್ಕಿಂತಲೂ ದೂರವಾದ ರಷ್ಯನರಿಗೆ ಸೇರಿದ್ದ ಅಮೇರಿಕದ ಭೂ ಭಾಗದ ಹಿಮದಲ್ಲಿ ಕುಳಿತಿದ್ದನು. ಅವನ ಎರಡು ಕೈಗಳನ್ನೂ ಹೆಡಮುರಿ ಕಟ್ಟಲಾಗಿತ್ತು. ಮುಂದೆ ಬರಲಿರುವ ಕ್ರೂರ ಯಾತನೆಯನ್ನು ಅನುಭವಿಸಲು ಕಾದಿದ್ದನು. ಎದುರಿಗೆ ಭಾರಿ ರಾವುತನೊಬ್ಬನನ್ನು ಮಂಜಿನ ಮೇಲೆ ಕೆಳಮೊಗ ಮಾಡಿ ಮಲಗಿಸಿದ್ದರು; ಆತ ನೋವಿನಿಂದ ನರಳುತಿದ್ದುದನ್ನು ಸುಬೆನ್ ವ್ ಅಚ್ಚರಿಯಿಂದ ನೋಡಿದನು. ಆ ದೈತ್ಯನನ್ನು ಶಿಕ್ಷಿಸಿ ಹೆಂಗಸರಿಗಿಂತ ಕಡೆ ಮಾಡಿದ್ದರು. ಆ ಮನುಷ್ಯನ ರೋದನವೇ, ಆತನ ಬಗ್ಗೆ ನಡೆದ ಪೈಶಾಚಿಕ ಶಿಕ್ಷಾಕ್ರಮ ಅಸಾಮಾನ್ಯವಾಗಿತ್ತೆಂಬುದನ್ನು ವ್ಯಕ್ತಪಡಿಸುತಿತ್ತು.


ಸುಬೆನ್ ಕೊವ್ ನಡುಗುತ್ತಾ ನೋಡಿದನು. ಆದರೆ ಅವನು ಸಾವಿಗೆ ಹೆದರುವವನಲ್ಲ. ವಾರ್ಸಾದಿಂದ ನ್ಯುಲಾಟೋ ತನಕ ಬೇಸರದ ಹಾದಿಯಲ್ಲಿ ಜೀವವನ್ನು ಹೊತ್ತು ತಂದವನಿಗೆ, ಸಾವು ಎಂದ ಮಾತ್ರಕ್ಕೆ ಕಂಪಿಸುವಂಥ ಸಂಭವವಿಲ್ಲ. ಆದರೆ ಅವನು ನರಕ ಯಾತನೆಯ ಅನುಭವಕ್ಕೆ ವಿರೋಧಿಯಾಗಿದ್ದನು. ಅದು ಆತ್ಮವಿಶ್ವಾಸಕ್ಕೆ ಧಕ್ಕೆಯುಂಟುಮಾಡಿತ್ತು. ನೋವಿನಿಂದುಂಟಾಗುವ ದುಃಖಮಯ ದೃಶ್ಯ ನೋವಿಗಿಂತಲೂ ನಿಂದನೀಯವಾಗಿತ್ತು. ತಾನು ಕೂಡ ಬಿಗ್ ಇವಾನ್ ಮತ್ತು ಇನ್ನೂ ಮುಂಚೆ ಸತ್ತಿರುವ ಮನುಷ್ಯರ ಹಾಗೆ ಯಾಚಿಸಿ, ಪ್ರಾರ್ಥಿಸಿ, ಮೊರೆಯಿಟ್ಟು ಕಷ್ಟ ಪಡಬೇಕಾಗಬಹುದು ಎಂಬ ಅಂಶವನ್ನು ಸುಬೆನ್‌ಕೋವ್ ತಿಳಿದಿದ್ದನು; ಅಂಥ ಮಾರ್ಗ ಒಳ್ಳೆಯದಲ್ಲ.... ಸರಿಯಾದ ಪರಿಹಾರ ಯಾವುದೆಂದರೆ ಧೈರ್ಯವಾಗಿ, ಯಾರ ಹಂಗೂ ಇಲ್ಲದೆ, ನಗುನಗುತ್ತಾ ಕಣ್ಮರೆಯಾಗುವುದು!.... ಇಲ್ಲದೆ ಶಕ್ತಿ ಕುಗ್ಗಿ, ಮಾಂಸಖಂಡಗಳ ಚುಚ್ಚು ನೋವಿನಿಂದ ತಳಮಳಗೊಂಡು, ಕೋತಿಯಂತೆ ಚೀತ್ಕಾರ ಮಾಡುತ್ತಾ, ಕಿರುಗುಟ್ಟುತ್ತಾ ಶುದ್ಧ ಮೃಗದಂತಾಗುವುದು ಅಬ್ಬಾ, ಅದೇ ಅತ್ಯಂತ ಭೀಷಣವಾದುದು....

ತಪ್ಪಿಸಿಕೊಳ್ಳಲು ಯಾವ ಉಪಾಯವೂ ಇದ್ದಿಲ್ಲ. ಎಂದು ಪೋಲೆಂಡಿನ ಸ್ವಾತಂತ್ರ್ಯದ ದಿವ್ಯ ಕನಸನ್ನು ಕಂಡನೋ, ಅಂದಿನಿಂದ ಅವನು ವಿಧಿಯ ಕೀಲುಗೊಂಬೆಯಾಗಿದ್ದನು. ಮೊದಲಿನಿಂದಲೂ ವಿಧಿಯ ಕೈವಾಡ ನಡೆದಿತ್ತು. ವಾರ್ಸಾ, ಸೇಂಟ್ ಟೈಟರ್ ಬರ್ಗ್, ಸೈಬೀರಿಯದ ಗಣಿಗಳು, ಮತ್ತು ಕಮ್ ಚಟಕ ಸ್ಥಳಗಳಿಂದ ತುಪ್ಪುಳು ಚರ್ಮಕ್ಕಾಗಿ ಬರುವ ಕಳ್ಳರೊಡನೆ ಅಲ್ಲಾಡುವ ದೋಣಿಗಳಲ್ಲಿ ಈ ತುದಿಗೆ ಅವನನ್ನು ತಂದು ನಿಲ್ಲಿಸಿದೆ. ಅವನಂಥ ಕನಸುಗಾರ, ಕಲಾವಿದ, ಸೂಕ್ಷ್ಮಮತಿಗೆ ಈ ಕೊನೆಗಾಲವೇ ? ದೂರದ ಕತ್ತಲ ಪ್ರದೇಶದಲ್ಲಿ, ಅನಾಗರಿಕರ ಮಧ್ಯೆ ಗೋಳಿಡುತ್ತಾ, ಸುಲಭವಾಗಿ ಮನೋವಿಕಾರ ಹೊಂದುತ್ತಾ