ಪುಟ:ಬಾಳ ನಿಯಮ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಾಳ ನಿಯಮ

ಅದೇ ಹಿಮಪಶು ; ಹರಿತಾದ ಕೋಡು, ಮುರಿದ ಪಕ್ಕೆ, ರಕ್ತಮಯ ಪಾರ್ಶ್ವ, ಕಿತ್ತಾಟದಲ್ಲಿ ಜಲ್ಲರಿಯಾಡಿದ ಚರ್ಮ ; ಹಿಂದೆ ಉತ್ಸಾಹದಿಂದ ನುಗ್ಗುತ್ತಿರುವ ತೋಳಗಳ ಹಿಂಡು ಶುಭ್ರ ಹಿಮದ ಸುತ್ತಲೂ ನಿಷ್ಕರುಣೆಯ ಕತ್ತಲೆ ಆವರಿಸಿತು. ಚಳಿಗಾಳಿಯ ಹೊಡೆತದಿಂದ ಮುದುಕನ ಆತ್ಮ ಚೇತರಿಸಿಕೊಂಡು ಹೋರಾಟಕ್ಕೆ ನಿಂತಿತು. ಅವನಿಗೆ ಆಯುಧವಿಲ್ಲವೇ ? ತಕ್ಷಣ ಉರಿಯುತ್ತಿದ್ದ ಕಟ್ಟಿಗೆಯನ್ನೇ ತೆಗೆದನು. ಆ ಕ್ಷಣ ತೋಳವೊಂದು ಹಿಂಜರಿದು ಕೂಗಿತು. ಮನುಷ್ಯನ ಹೆದರಿಕೆಯಿರಬೇಕು. ಆದರೆ ಹಿಂದೆಯೇ ಇದ್ದ ತೋಳಗಳ ಹಿಂಡು ಮುದುಕನ ಸುತ್ತಲೂ ನಿಂತಿತು. ಪಾವ; ಮುದುಕ ಒಬ್ಬಂಟಿಗ ನಾಗಿದ್ದರೂ ಹೆದರದೆ ಕೈ ಬೀಸಿದನು. ತೋಳಗಳ ಕೂಗಾಟ ಹೆಚ್ಚತೊಡಗಿತು. ಅವು ಚೆದರದೆ ಒಂದೇ ಕಡೆ ಸುತ್ತಗಟ್ಟಿದವು. ಒಂದೊಂದಾಗಿ ಮುದುಕನ ಮೇಲೆ ಬೀಳಲು ಹವಣಿಸುತ್ತಿದ್ದವು.

"ನಾನೇಕೆ ಇನ್ನೂ ಜೀವ ಹಿಡಿದಿರಬೇಕು?" ಎನ್ನುತ್ತಾ ಕಾಸ್‌ಕೂಶ್ ಕೈಯಲ್ಲಿದ್ದ ಕೊಳ್ಳಿಯನ್ನು ಬಿನಾಡಿದನು. ಕೊಳ್ಳಿ ಹಿಮದ ಮೇಲೆ ಬಿದ್ದು ಹಿಸ್ ಎನ್ನುತ್ತಾ ತಣ್ಣಗಾಯಿತು. ವೃದ್ಧ ಹಿಮಪಶುವಿನ ಕಡೆಯ ದೃಶ್ಯ ಕಣ್ಣಿಗೆ ಕಟ್ಟಿದಂತಾಯಿತು. ಅಂತೂ ಕಾನ್ ಕೂಶ್ ಭಾರ ಹೊತ್ತ ತಲೆಯನ್ನು ಆಗಲೇ ಜಡವಾಗಿದ್ದ ಕಾಲುಗಳ ಮೇಲೆಸೆದನು. ಅದರಲ್ಲಿ ತಪ್ಪೇನು? ಅದು ಬಾಳ ನಿಯಮ ತಾನೆ?....