ಪುಟ:ಬಾಳ ನಿಯಮ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮಯವಾಗಿ ಪಶುವಿನ ಹೆಜ್ಜೆ ಗುರುತು ಮುಚ್ಚಿ ಹೋಗಿತ್ತು. ನಿಜ; ಆಗಲೆ ಹೋರಾಟದ ಶಬ್ದಗಳು ಕೇಳಿಸಿದವು ! ತಾವು ಸೇರುವಷ್ಟರಲ್ಲೇ ಬೊಗಳಾಟದ ಎಲ್ಲೆ ಮಾರಿಹೋಗಿ, ಸಾವಿಗೆ ಸಮಾನವಾದ ಮಾಂಸದ ಹೋರಾಟ ನಡೆದಿತ್ತು. ತೋಳಗಳು ಪ್ರಾಣಿಯನ್ನು ಸುತ್ತುಗಟ್ಟಿದ ದೃಶ್ಯ ನೋಡಲು ಮರೆಯಿಂದ ಮೆಲ್ಲಗೆ ಹೊರಬಂದೆವು. ಇಂಥ ಯೌವನದ ಅನೇಕ ಸಾಹಸಗಳು ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿವೆ. ತಂಡದ ಮುಖ್ಯಸ್ಥನಾಗಿ ತಾನು ಮಹತ್ಕಾರ್ಯಗಳನ್ನು ಮಾಡ ಲಿಲ್ಲವೇ ? ತನ್ನ ಹೆಸರೆಂದರೆ ಹಗೆಗಳಿಗೆ ಎಲ್ಲಿಲ್ಲದ ಭಯವಿತ್ತು. ಒಂದು ಸಲ ಬಹಿರಂಗವಾಗಿಯೇ ಬಿಳಿಯವನೊಬ್ಬನನ್ನು ಕತ್ತಿಯಿಂದ ತಿವಿದು ಕೊಂದಿ ದೈನೆ.... ಆ ಮುದುಕ ಯೌವನದ ಕನಸು ಕಾಣುತ್ತಿದ್ದಂತೆ, ಬೆಂಕಿ ಆರುತ್ತಾ ಬಂತು. ಹಿಮದ ಗಾಳಿ ಹೆಚ್ಚಿತು. ಮತ್ತೆರಡು ಕಟ್ಟಿಗೆಯನ್ನೊಡ್ಡಿ, ತನ್ನ ಜೀವದ ಹಿಡಿತ ಎಷ್ಟರಮಟ್ಟಿಗೆ ಇನ್ನೂ ನಿಂತಿದೆ ! ಎಂದು ಯೋಚಿಸಿದನು....ಸಿತ್ಕಮ-ತೋಹಾ ಅಜ್ಜಿನ ಬಗ್ಗೆ ಸ್ವಲ್ಪವಾದರೂ ಗಮನವಿಟ್ಟಿದ್ದರೆ, ಜಾಸ್ತಿ ಕಟ್ಟಿಗೆ ಯನ್ನಿಟ್ಟು ತನ್ನ ಜೀವದ ಘಳಿಗೆಗಳನ್ನು ವಿಸ್ತರಿಸಬಹುದಾಗಿತ್ತು! ಆದರೆ ಅವಳು ಮೊದಲಿನಿಂದಲೂ ಯಾವ ಜವಾಬ್ದಾರಿಯನ್ನೂ ವಹಿಸಿರಲಿಲ್ಲ. ಬೀವರ್-ಜಿಂಗ್-ಹಾನ ಮೊಮ್ಮಗ ಅವಳ ಮೇಲೆ ಯಾವತ್ತು ದೃಷ್ಟಿ ಬೀರಿ ದನೋ, ಅಂದಿನಿಂದ ಅವಳಿಗೆ ಹಿರಿಯರನ್ನು ಕಂಡರೆ ಲಕ್ಷ್ಯವೇ ಇಲ್ಲ. ಅವಳ ಸ್ನೇಕೆ ಬೈಯಬೇಕು ? ಹೊಸ ಪ್ರಾಯದಲ್ಲಿ ತಾನು ಕೂಡ ಅವಳಂತೆಯೇ ಪ್ರೇಮಜಾಲದಲ್ಲಿ ಸಿಲುಕಿರಲಿಲ್ಲವೇ ?.... ಸ್ವಲ್ಪ ಹೊತ್ತು ಮೌನದಿಂದಿದ್ದು ಮತ್ತೆ ಯೋಚಿಸಿದನು. ಮಗನ ನೆನ ಪಾಯಿತು....ಅವನ ಅಂತಃಕರಣ ಕರಗಿ ನೀರಾಗಿ ತನ್ನನ್ನು ಕರೆದೊಯ್ಯಲು ನಾಯಿಗಳ ಜೊತೆ ಪುನಃ ಬರುವನೋ ಏನೊ! ಸುಭಿಕ್ಷದ ನಾಡಿಗೆ ಬಾ, ತಂಡ ದವರೊಡನೆ ಸೇರಿಕೊ ಎನ್ನದಿರುವನೇ ?.... ಸುತ್ತಲೂ ನಿಶ್ಯಬ್ದವಾಗಿರುವಾಗ ಮುದುಕನ ಕಿವಿ ಮಾತ್ರ ಯಾವುದೋ ಸವಿನುಡಿಯನ್ನು ಕೇಳಲು ಹಾತೊರೆಯಿತು. ಆದರೆ ಯಾವ ಸದ್ದೂ ಇಲ್ಲ.... ತನ್ನ ಉಸಿರೇ ದೊಡ್ಡದಾಗಿದೆ.... ಮೈ ಚಳಿಯಿಂದ ಒಂದೇ ಸಮನೆ ನಡುಗಿತು.... ಹಿಂದೆ ಪರಿಚಯವಿದ್ದಂಥ ಆರ್ತಧ್ವನಿಯೊಂದು ಹತ್ತಿರದಲ್ಲೇ ಕೇಳಿಸಿದಂತಾ ಯಿತು....ಇದೇನು ಕನಸೇ ? ಕಣ್ಣು ಕುಕ್ಕುವಂಥ ದೃಶ್ಯ ! ಬಿದ್ದು ಓಡುತ್ತಿರುವ