ಪುಟ:ಬಾಳ ನಿಯಮ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ವ ಜಿಂಗ್-ಹಾ, “ ನೋಡು ; ಯಾವುದೋ ವೃದ್ದ ಹಿಮಪಶುವೊಂದನ್ನು ಗುಂಪಿ ನಿಂದ ಬೇರ್ಪಡಿಸಿ, ತೋಳಗಳ ಹಿಂಡು ಹಿಂಬಾಲಿಸಿದೆ. ಈ ತೋಳಗಳು ಆ ಪ್ರಾಣಿಯನ್ನು ಎಂದಿಗೂ ಬಿಟ್ಟಿರಲಾರವು.” ಎಂದನು. ನಿಜ ; ಅವು ರಾತ್ರಿ ಹಗಲೆನ್ನದೆ ಆ ಪ್ರಾಣಿಯನ್ನು ಸುತ್ತುಗಟ್ಟಿ, ಗುರುಗುಟ್ಟುತ್ತಾ, ಮುಖ ಮುರಿಯುವಂತೆ ಫಕ್ಕನೇ ಕಚ್ಚುತ್ತಾ, ಕಡೆಯ ತನಕ ಗಲಾಟೆಯೆಬ್ಬಿಸಿರು ವುದರಲ್ಲಿ ಸಂದೇಹವಿಲ್ಲ. ತನಗೂ ಜಿಂಗ್-ಹಾನಿಗೂ ಬೇಟೆಯ ಶೋಕಿ ಹೆಚ್ಚಿತು ! ಆ ಪ್ರಾಣಿಯ ಅಂತ್ಯವನ್ನು ನೋಡಲೇಬೇಕು. ಉತ್ಸಾಹದಿಂದ ಅದೇ ದಾರಿಯಲ್ಲಿ ಇಬ್ಬರೂ ಮುಂದುವರಿದೆವು. ಹಿಮಮಾರ್ಗ ವಿಶಾಲ ವಾಗಿಯೇ ಇತ್ತು. ತನ್ನಂಥ ಅನುಭವವಿಲ್ಲದವನೂ ಕೂಡ ಕಣ್ಣು ಮುಚ್ಚಿ ಹೋಗಬಹುದಾಗಿತ್ತು. ಪ್ರತಿ ಹೆಜ್ಜೆಗೂ ದುರಂತ ನಾಟಕವನ್ನು ನೋಡುವ ಕಾತುರ ಹೆಚ್ಚಾಯಿತು. ಕಡೆಗೆ ಹಿಮಪಶು ಒಂದೆಡೆ ನಿಂತಿರಬಹುದಾದ ಸ್ಥಳವನ್ನು ಪತ್ತೆ ಹಚ್ಚಿದೆವು. ಸುಮಾರು ಮನುಷ್ಯ ದೇಹದ ಮೂರರಷ್ಟು ಮಂಜಿನ ಕಣಗಳು ಎಲ್ಲ ದಿಕ್ಕಿಗೂ ಎಸೆಯಲ್ಪಟ್ಟಿದ್ದವು. ಮಧ್ಯಭಾಗದಲ್ಲಿ ಹೆಚ್ಚಿನ ಹೋರಾಟವಾದಂತೆ ಭಾಸವಾಯಿತು. ಸುತ್ತಲೂ ತೋಳಗಳ ಹೆಜ್ಜೆ ಗುರುತು ಸ್ಪಷ್ಟವಾಗಿರಲಿಲ್ಲ. ಮೃತ್ಯು ಕಾಳಗವನ್ನು ಸ್ನೇಹಿತರಿಗೆ ವಹಿಸಿ, ಕೆಲವು ತೋಳಗಳು ಮಂಜಿನ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆದಿರಬೇಕು ! ಹಿಮದಲ್ಲಿ ಆಗತಾನೆ ಬರೆಯಲ್ಪಟ್ಟಂತೆ ಅವುಗಳ ಪೂರ್ಣಾಕೃತಿಯ ಗುರುತು ಎದ್ದು ಕಾಣುತಿತ್ತು. ಮೋಸಕ್ಕೊಳಗಾದ ಪಶು ವಿಭ್ರಾಂತನಾಗಿ ಹುಚ್ಚು ಮನಸ್ಸಿನ ಬಲದಿಂದ ಒಂದು ತೋಳವನ್ನು ತುಳಿದು ಕೊಂದುಹಾಕಿತ್ತು. ಸಾಕ್ಷಿಯಾಗಿ ಅದರ ಕೆಲವು ಮೂಳೆಗಳು ಸಿಕ್ಕಿದ್ದವು. ಮುಂದೆ ಎರಡನೆಯ ಸ್ಥಳದಲ್ಲಿ ನಿಂತಾಗ, ಆ ಪ್ರಾಣಿ ಕೆಳಗೆ ಬಿದ್ದರೂ ಮೇಲೆದ್ದು ಭಯಂಕರ ಹೋರಾಟ ನಡೆಸಿ ಜಯಗಳಿಸಿತ್ತು. ತಾನು ಹಿಂದೆ ಹೇಳಿದಂತೆ ಕರ್ತವ್ಯ ಪಾಲನೆ-ನಿಸರ್ಗ ನಿಯಮದ ಮೊದಲ ಸೂತ್ರ ಹಿಮ ಪಶುವಿನಿಂದಾಗಿತ್ತು. ಪೀಳಿಗೆಯ ಬೆಳವಣಿಗೆಯಾಗಿತ್ತು. ಆದರೂ ಜೀವ ವೆಂಬುದು ಅದಕ್ಕೆ ಅತಿ ಪ್ರಿಯ ವಸ್ತುವಾಗಿತ್ತು. ಕೆಳಗೆ ಬಿದ್ದ ವೃದ್ದ ಪ್ರಾಣಿ ಮತ್ತೆ ಸ್ವತಂತ್ರವಾಗಲು ಪ್ರಯತ್ನ ಪಟ್ಟಿದ್ದು ಆಶ್ಚರ್ಯಜನಕವೆಂದು ಜಿಂಗ್-ಹಾ ಮತ್ತು ಇತರ ಬೇಟೆಗಾರರು ಹೇಳಿದರು. ಸ್ವಲ್ಪ ದೂರದಲ್ಲೇ ಹಿಮಪಶು ದಿಣ್ಣೆಯ ಮೇಲೇರಿ ಹಿಂದಿನಿಂದ ತೋಳಗಳನ್ನು ಕೊರಕಲಲ್ಲಿ ನೂಕಿತ್ತು. ಗುದ್ದಾಟ ಬಲು ಜೋರಾಗಿ ನಡೆದಿರಬೇಕು. ಆದ್ದರಿಂದಲೇ ಮಾರ್ಗ ರಕ್ತ