ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಳ ನಿಯಮ


ಕಾಸ್‌ಕಾಶ್ ಮತ್ತೊಂದು ಕಟ್ಟಿಗೆಯನ್ನು ಬೆಂಕಿಗೆ ಹಾಕಿ ಬಹು ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಲು ಪ್ರಯಾಸಪಟ್ಟನು....ಹೌದು; ಆಗ ಭಯಂಕರ ಕ್ಷಾಮದ ದಿನಗಳು. ಹಸಿದ ಹೊಟ್ಟೆಯ ವೃದ್ಧರು ಬೆಂಕಿಯ ಸುತ್ತ ಕುಳಿತು ವಿಚಿತ್ರ ಹರಟೆ ಹೊಡೆಯುತ್ತಿದ್ದ ಕಾಲ. ಯುಕಾನ್ ನದಿ ಮೂರು ತಿಂಗಳು ಹೆಪ್ಪುಗಟ್ಟಿದರೆ ಮಾಡುವುದೇನು? ಆ ಬರಗಾಲದಲ್ಲೇ ತನ್ನ ತಾಯಿ ತೀರಿಹೋದದ್ದು. ಬೇಸಗೆಯಲ್ಲಿ ನೀರೇನೋ ಬಂತು. ಆದರೆ ಸಾಮಾನ್ ಮಾನು ಒಂದೂ ಸಿಗಲಿಲ್ಲ. ಹಾಗೆಯೇ ಚಳಿಗಾಲದಲ್ಲಿ ಒಂದು ಪ್ರಾಣಿಯ ಸುಳಿವೂ ಇಲ್ಲ. ನಾಯಿಯಂತೂ ಎಲುಬಿನ ಹಂದರವಾಗಿತ್ತು. ನಿಶಾಚರ ರಾಗಿ ಹೆಂಗಸರು, ಮಕ್ಕಳು, ದೊಡ್ಡವರು ಎಲ್ಲರೂ ನರಳಾಡಿದರು. ನವ ಋತು ವಿನ ಸೂರ್ಯ ಮೂಡಿದಾಗ ನೋಡುವ ಭಾಗ್ಯ ಯಾವ ಜೀವಂತ ವ್ಯಕ್ತಿಗೂ ಇರಲಿಲ್ಲ. ಅದಲ್ಲವೇ ಹೆಸರನ್ನು ಸಾರ್ಥಕ ಪಡಿಸಿದ ಕ್ಷಾಮ !....

ಸುಭಿಕ್ಷದ ಕಾಲವನ್ನೂ ಕಾಸ್‌ಕೂಶ್ ಕಂಡಿದ್ದಾನೆ....ಆಗ ಮಾಂಸ ರಾಶಿಗೆ ಮಿತಿಯೇ ಇರಲಿಲ್ಲವಂತೆ. ನಾಯಿಗಳು ತಿಂದು ತೇಗಿ ಕೊಬ್ಬಿದ್ದವು ; ಬೇಟೆಯನ್ನು ಸಂಪೂರ್ಣಗೊಳಿಸದೆ ಹಿಂದಿರುಗಿ ಬರುತಿದ್ದವು. ಹೆಂಗಸರ ಭಾಗ್ಯವಿರಬೇಕು ! ಮನೆ ತುಂಬ ಗಂಡು ಮಕ್ಕಳ, ಬೆಳೆಯುತ್ತಿತ್ತು. ಬೊಜ್ಜು ಮೈ ಎಲ್ಲರಿಗೂ ಬರುತಿತ್ತು. ಹೆಣ್ಣು ಮಕ್ಕಳ ಸಂತಾನ ಆದ್ದರಿಂದಲೇ ಜನ ಹಿಂದಿನ ಹಗೆಗಳನ್ನು ನೆನೆಸಿಕೊಂಡು, ನದಿಯಾಚೆ ಹೋಗಿ, ತಾವಾಗಿಯೇ ಕಾಲುಕೆರೆದು ಹೋರಾಡುತ್ತಿದ್ದರು. ಚಳಿ ಹೋಗಲಾಡಿಸಲು ಸತ್ತವರ ಉರಿಯೇ ಸಾಕಾಗಿತ್ತು. ಆ ಸುಭಿಕ್ಷದ ಕಾಲದಲ್ಲಿ, ತಾನು ಬಾಲಕನಾಗಿದ್ದಾಗ ನಡೆದ ಒಂದು ಪ್ರಸಂಗ ಜ್ಞಾಪಕವಿದೆ. ಏಕಾಂಗಿಯಾದ ಹಿಮಪಶುವನ್ನು ತೋಳಗಳ ಹಿಂಡು ಹಿಡಿದೆಳೆದಿತ್ತು. ಆ ದೃಶ್ಯವಂತೂ ಆಶ್ಚರ್ಯಕರವಾಗಿತ್ತು. ಆಗ ಜಿಂಗ್-ಹಾ ಕೂಡ ತನ್ನ ಜೊತೆಯಲ್ಲಿದ್ದ ಹೌದು ; ಜಿಂಗ್-ಹಾನ ನೆನಪಾಗುತ್ತೆ. ಮುಂದೆ ಅತ್ಯುತ್ತಮ ಬೇಟೆಗಾರನಾದವನು ಅವನೇ, ಪಾಪ ; ಕಡೆಗೆ ಯೂಕಾನ್ ಕೊರಕಲಲ್ಲಿ. ಬಿದ್ದು ಸತ್ತನು. ಆದಾದ ಒಂದು ತಿಂಗಳ ಮೇಲೆ ಮರಗಟ್ಟಿದ ದೇಹ ಪತ್ತೆಯಾಯಿತು.

ಹಿಮಪಶುವಿನ ಮಾತಿಗೆ ಬರೋಣ. ಇಬ್ಬರೂ ಆ ದಿನ ಬೇಟೆಗೆ ಹೊರಟಿದ್ದೆವು. ಒಂದು ಕೊರಕಲಲ್ಲಿ ಹಿಮಪಶುವೊಂದು ಆಗತಾನೆ ದಾಟಿ ಹೋದಂಥ ಹೆಜ್ಜೆ ಗುರುತು ಕಂಡಿತು. ಅದರ ಹಿಂದೆಯೇ ಅನೇಕ ತೋಳಗಳೂ ಹೋದಂತೆ ಚಿನ್ನೆಗಳಿದ್ದವು. ಆ ಸುಳಿವನ್ನು ತಕ್ಷಣ ಗ್ರಹಿಸಿದ