ಬಾಳ ನಿಯಮ
ಆಂದೋಳನವನ್ನು ಎಬ್ಬಿಸುತ್ತವೆ. ದಿನೇ ದಿನೇ ರೂಪಲಾವಣ್ಯಗಳು ಹೆಚ್ಚಿದಂತೆ, ಕಡೆಗೊಬ್ಬ ಬೇಟೆಗಾರ ಮೋಹಗೊಂಡು ಅವಳನ್ನು ಅಡಿಗೆಗೋ, ಮನೆಯ ಕೆಲಸಕ್ಕೋ ಆಹ್ವಾನಿಸುತ್ತಾನೆ. ಅರ್ಥಾತ್ ಅವಳೇ ಮಕ್ಕಳ ತಾಯಿಯಾಗುತ್ತಾಳೆ. ತಾಯ್ತನ ಹೆಚ್ಚಿದಂತೆ ಅವಳ ದಿವ್ಯನೋಟ ಮಂಕಾಗುತ್ತದೆ. ಹೆಜ್ಜೆ ಹಾಕುವುದೂ ಕಷ್ಟವಾಗುತ್ತದೆ. ಚಿಕ್ಕಮಕ್ಕಳು ಮಾತ್ರ ತಾಯಿಯ ಬಾಡಿ ಹೋದ ಗಲ್ಲಗಳನ್ನು ಸವರಿ ಆನಂದಪಡುತ್ತಾರೆ. ಆಗ ಅವಳು ಮುದುಕಿಯಂತೆ
ಬೆಂಕಿಯ ಪಕ್ಕದಲ್ಲಿ ಕುಳಿತುಬಿಡುತ್ತಾಳೆ. ಇಲ್ಲಿಗೆ ನಿಸರ್ಗದ ಪ್ರಧಮ ಹೊಣೆ ಕರ್ತವ್ಯಪಾಲನೆ-ಮುಗಿಯಿತು. ಸ್ವಲ್ಪ ಕಾಲಾನಂತರ ಕಾಮದ ಹೊಡೆತದಿಂದಲೋ, ಅಥವಾ ಬೇಟೆಗಾರರ ದೂರ ಸಂಚಾರದ ನೆವದಿಂದಲೋ ಆಕೆ ಒಬ್ಬಂಟಿಗಳಾಗಿ ಉಳಿಯುತ್ತಾಳೆ. ತನ್ನಂತೆ ಅವಳಿಗೂ ಹಿಮಪ್ರದೇಶದಲ್ಲಿ ಕಟ್ಟಿಗೆಯ ಹೊರೆಯೊಂದು ಸಿಗಬಹುದು. ಅದೇ ನಿಸರ್ಗದ ಎರಡನೆಯ ಶಾಸನ.
ಮುದುಕ ಮತ್ತೊಂದು ಕಟ್ಟಿಗೆಯನ್ನು ನಿಧಾನವಾಗಿ ಬೆಂಕಿಗೆ ಹಾಕಿದನು. ಮತ್ತೆ ಯೋಚಿಸಲಾರಂಭಿಸಿದನು....
ಮರದ ಈ ನಿಸರ್ಗ ನಿಯಮ ಎಲ್ಲ ಕಡೆಗೂ ಅನ್ವಯಿಸುತ್ತದೆ; ಅಲ್ಲವೇ ? ಮೊದಲ ಮಂಜಿನ ಧಾಳಿಗೇ ಸೊಳ್ಳೆಗಳು ಆಹುತಿಯಾಗುತ್ತವೆ. ಮೇಲಿನ ಇಣಚಿ ಜಿಗಿದಾಡಿ ಸಾವಿನ ಕಂದರಕ್ಕೆ ಜಾರಿ ಬೀಳುತ್ತದೆ. ಮೊಲಕ್ಕೆ ವಯಸ್ಸಾದಂತೆ ಮೈ ಭಾರವೇ ಜಾಸ್ತಿಯಾಗಿ ಶತ್ರುಗಳನ್ನು ಎದುರಿಸಲು ಅಸಾಧ್ಯವಾಗುತ್ತದೆ; ಮುಖ ಕಂಗೆಟ್ಟು ಕಡೆಗೆ ನಾಯಿಯ ಪಾಲಾಗುವುದರಲ್ಲಿ ಸಂದೇಹವಿಲ್ಲ. ಅಷ್ಟೇಕೆ ? ತಾನೇ ತನ್ನ ತಂದೆಗೆ ಚಳಿಗಾಲದಲ್ಲಿ ಕೈಕೊಟ್ಟು ಬರಲಿಲ್ಲವೇ! ಆ ಚಳಿಗಾಲದಲ್ಲಿ ತತ್ರೋಪದೇಶಮಾಡಲು ಒಬ್ಬ ಮಿಷನರಿಯೂ ಇದ್ದ. ಅವನ ಆಸ್ತಿಯೆಂದರೆ ಪುಸ್ತಕಗಳು ಮತ್ತು ಔಷಧಿಯ ಪೆಟ್ಟಿಗೆ.... ಕಾಸ್ ಕೂಶ್ ಎಷ್ಟೋ ವೇಳೆ ಆ ಪೆಟ್ಟಿಗೆಯೊಳಗಿದ್ದ ತಿಂಡಿಯ ನೆನಪಿಂದ ತುಟಿ ಸವರಿಕೊಳ್ಳುತ್ತಿದ್ದ. ಈಗ ಅವನ ಬಾಯಲ್ಲಿ ಸವಿ ತರುವ ನೀರಿಲ್ಲ.... ಮಿಷನರಿಯ
- ವೇದನ ವಿನಾಶಿನಿ' ಔಷಧ ಚೆನ್ನಾಗಿತ್ತು. ಆದರೆ ಅವನಿಂದ ಹಸಿವೆಂಬ
ವೇದನೆ ವಿನಾಶವಾಗದೆ, ಗುಂಪಿನಲ್ಲಿ ಅವನೊಬ್ಬ ಕಂಟಕನಾಗಿದ್ದನು. ಏಕೆಂದರೆ ಗುಂಪಿನವರಿಗೆ ಯಾವ ಆಹಾರವನ್ನೂ ಅವನು ಕೊಡುತ್ತಿರಲಿಲ್ಲ. ಮಾತ್ರ ಬೇಟೆಗಾರರ ಗೊಣಗಾಟ ಲಕ್ಷಿಸದೆ ಪುಷ್ಕಳವಾಗಿ ಹೊಡೆಯುತ್ತಿದ್ದನು. ಕಡೆಗೇನಾಯಿತು ? ಆತ ಮೇಯೋ ನದಿಯ ದಂಡೆಯಮೇಲೆ ಸತ್ತು ಅಡಗಿದಾಗ, ಅವನ ಎಲುಬಿನ ಊಟಕ್ಕಾಗಿ ನಾಯಿಗಳು ಕಲ್ಲನ್ನಗೆದು ಬಡಿದಾಡಲಿಲ್ಲವೇ ?.... ತಾನು