ಪುಟ:ಅರಮನೆ.pdf/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೬೩ ನಮಲಿದ್ದ ಅವಯ್ಯನು ಯೇಳಲಕಾದೀತಾ?... ಕೊಸರಿ ಬರಲಕಾದೀತಾ?.. ಹಿಂಗ ಬಂಧನಕ್ಕೊಳಗಾದ ಸೂರನನ್ನು... ಸಿವಸಂಕರ ಮಾದೇವಃs.. ಸದರಿ ಪಟ್ಟಣದ ಹೊರ ಮಗ್ಗುಲು ಕರುಪ್ಪಳಿ ಮಗಳು ಗಂಟೆವ್ವನ ಬಾಣಂತನವ ಸುಸೂತ್ರವಾಗಿ ಮಾಡಿ ಮುಗಿಸಿಕೊಂಡು ಅದೇ ತಾನೇ ಬಂದ್ದಂಥವಳಾದ ಜಗಲೂರೆವ್ವನ ವಡಲೊಳಗ ಅಸದಳವಾದ ಸಂಕಟ ಕಾಣಿಸಿಕೊಂಡಿತು. ತನ್ನ ಕರುಳ ನಂದನವನದೊಳಗ ಸೂರ ಅವ್ವಾ.. ಅವ್ವಾ ಯಂದನಕಂತ ಹೊಲಬುಗೆಟ್ಟು ಅಡ್ಡಾಡುತ್ತಿರುವಂತೆ ಭಾಸವಾಗತೊಡಗಿತು.. ಯಲ್ಲವನೋ ತನ್ನ ಕಂದ? ಹೆಂಗವನೋ ತನ್ನ ಕಂದ? ಜಗಲೂರಜ್ಞ ಯಿರುವ ದಿಕ್ಕಿಗೆ ಕಯ್ಕ ಮುಗುದು ಅವನ ವುಸಾಬರಿ ನಿಂದು ಯಜ್ಞಾ ಯಂದು ಬೇಡಿಕೊಂಡಳು.. ಯಿರಬೇಕಿದ್ದ ಅಮೂಕಾಣುತಾ ಯಿಲ್ಲವಲ್ಲಾ.. ಯಂದು ಆ ಅಕ್ಕತಂಗಿಯರಿಗಾಗಿ ಹುಡುಕಾಡಲಾರಂಭಿಸಿದಳು. ಯಲ್ಲೆಲ್ಲಾರ ಅದಾವೇನಂತ ಕಾಲಬುಡದಲ್ಲಿ ನೋಡಿಕೊಂಡಳು. ಅಲ್ಲೆಲ್ಲಾರ ಅದಾವೇನಂತ ಅಲ್ಲೆಲ್ಲ ಬಗ ಬಗ್ಗಿ ನೋಡಿದಳು. ಅಲ್ಲೆಲ್ಲೂ ಕಾಣುತಾ ಯಿಲ್ಲ. ಯಿಲ್ಲೊಲ್ಲೂ ಕಾಣುತಾಯಿಲ್ಲ... ಮುಚ್ಚುಳದಾಗ ಹಾಲು ಬಾನ ಕಲಸಿಟ್ಟಿದ್ದು ಯಿಟ್ಟಂಗೆ ಅಯ್ಕೆ.. ಯಾವಾಗೇನೂ ವಂದಗುಳು ಮುಟ್ಟಿಲ್ಲ.. ಯಂದನಕಂತ ಯ್ಯೋಮ್ ಚನ್ನಯ್ಯೋ!” ಚನ್ನವ್ವ ಬಾಲ ಅಲ್ಲಾಡಿಸುತ ಬರಲಿಲ್ಲ. ಯ್ಯೋಮ್ ಧರುಮವ್ಯೂ ಯಂದು ಕೂಗಿದಳು... ಧರುಮವ್ವ ಬಾಲ ಅಲ್ಲಾಡಿಸುತ ಬರಲಿಲ್ಲ.. ಯಲ್ಲೋದವಿವು? ಅಂತ ಹುಡುಕಾಡೇ ಹುಡಾಕಾಡಿದಳು.. ತನ್ನ ಮುಂಗಯ್ಯ ಗಡುತರದ ಮೂಗನ್ನು ಮೂರು ಮೊಳ ಮುಂದಕ ಚಾಚಿ ಮುಸು ಮುಸನೆ ಮೂಸಿ ನೋಡಿದಳು. ಯಲ್ಲೂ ಅವುಗಳ ಹಿಂಬಡದ ವಾಸನೆ ಮೂಗಿಗಡರಲಿಲ್ಲ... ಸಾಂಬವಿ ಹೊಳೆಗೆ ಹೊಂಡುವ ಕಾಲಕ್ಕೆ ವಂದು ನಾಯಿ ಕಣ್ಣಿಗೆ ಬೀಳಬಾರದು.. ವಂದು ಬೆಕ್ಕು ಕಣ್ಣಿಗೆ ಬೀಳಬಾರದು ಯಂದು ದಯವಸ್ತರು ಟಾಮು ಟಾಮು ಹಾಕಿಸಿದ್ದು ನಪ್ಪಿಗೆ ಬಂತು. ವಂದು ನಾಯಿ ಹಿಡಕೊಟ್ಟವರಿಗೆ ವಂದು ಬಿ... ಎಂದು ಬೆಕ್ಕು ಹಿಡಕೊಟ್ಟವರಿಗೆ ಎರಡು ಬಿಲ್ಲೆ ಯಿನಾಮು ಕೊಡುವುದಾಗಿ ಘೋಷಣಾ ಮಾಡಿದ್ದೂ ನೆಪ್ಪಿಗೆ ಬಂತು. ಯೀ ಕಾರಣಕ್ಕಾಗಿ ಪಟ್ಟಣದೊಳಗ ಬೊವ್ ಬೊವ್ ಯಂದು ಬೊಗುಳೋ ನಾಯಿ ಯಿಲ್ಲ.. ಮ್ಯಾವ್ ಮ್ಯಾವ್ ಯಂದರಚೋ ಬೆಕ್ಕೂ ಯಿಲ್ಲ.. ತನ ನಾಯಿಗಳ ಗೊಡವೆಗೆ ಬರುವ ತಾಕತ್ತು ಸದರಿ ಪಟ್ಟಣದ ಯಾವ ಗಂಡಸಿಗೂ ಯಿಲ್ಲ. ಅವು ಯಲ್ಲೋ ಹೋಗಿದ್ದಿರಬೌದು.. ಜಗಲೂರು