ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೪೩ ದಿನದ ಅಂತರದಲ್ಲಿ ಪುನಃ ಎಣ್ಣೆ ಎರೆದು ಸರಸಿಗೆ ಸ್ನಾನ ಮಾಡಿಸಿದ್ದು: ಸರಸಿಗೆ ಸಜ್ಜಿಗೆಯನ್ನು ಎಷ್ಟು ದಿನವೂ ತಟ್ಟೆಯಲ್ಲಿಟ್ಟು ಅವಳು ತಿಂದಷ್ಟು ತಿನ್ನಲಿ ಎಂದು ಬಲವಂತ ಮಾಡಲು ಹೋಗಿದ್ದವಳು, ಸರಸಿಯನ್ನು ಪ್ರೀತಿಯಿಂದ ತನ್ನ ತೊಡೆಯ ಮೇಲೇರಿಸಿ ತಿನ್ನು ತಿನ್ನು ಎಂದು ಒತ್ತಾಯ ಪೂರ್ವಕ ತಿನ್ನಿಸಿದ್ದ; ಆ ಬಳಿಕ ಮಧ್ಯಾಹ್ನದ ಊಟಕ್ಕೆ ಹಬ್ಬಕ್ಕೆ ಮಾಡುವ ವಿಶೇಷ ಅಡಿಗೆ ಮಾಡಿದ್ದುದುಒಂದೊಂದೂ ಅವರ ಕಣ್ಮುಂದೆ ಚಕಚಕನೆ ಸುಳಿದುಹೋಗಿ ಅವಳು ತಮ್ಮಿಬ್ಬರನ್ನೂ ತೊರೆದು ಹೋಗುವ ಮುನ್ನ, ತನ್ನ ಋಣ ತೀರಿಸಲು ಹಾಗೆ ವರ್ತಿಸಿದಳೊ ಏನೊ, ಎನ್ನಿಸಿತು... ಯಾಕೊ ಅ ವೇಳೆಯಲ್ಲಿ ನನಗೆ ಮಂಕು ಕವಿದು ಇದೊಂದರ ಅರ್ಥವೂ ಸ್ಪುರಿಸದೆ, ಅನರ್ಥ ನಡೆದುಹೋಯಿತುಎಂದು ಕಂಬನಿಗರೆಯುತ್ತ ಪಶ್ಚಾತ್ತಾಪ ಪಟ್ಟರು..... ಅವಳೆಲ್ಲೊ ಕೆರೆಗೊ ಬಾವಿಗೆ ರಾತ್ರಿಯೆ ಬಿದ್ದಿರಬೇಕೆಂದು ಬಗೆದು, ಸರಸಿ ಇನ್ನೂ ಯಾಕೆ ಎದ್ದಿಲ್ಲ, ಎಂದು ಅವಳು ಮಲಗುವ ಕೋಣೆಗೆ ಧಾವಿಸಿದರು. “ಸರಸು, ಸರಸು-ಏಳಮ್ಮ, ನೋಡು ಅಗ್ಗೆ ಎಷ್ಟು ಹೊತ್ತಾಗಿದೆ?” ಎಂದು ಮೈ ಮುಟ್ಟಿದರು. ಮಗುವಿನ ಜ್ವರ ಬಂದು ಮೈ ಕುಡಿದುಹೋಗುತ್ತಿತ್ತು. ಸರಸಿಯನ್ನು ಮೆಲ್ಲನೆ ಎತ್ತಿಕೊಂಡರು. ವೆಂಕಣ್ಣಜೋಯಿಸರ ಮೂವರು ಹೆಣ್ಣುಮಕ್ಕಳೂ ಸರಸಿಯನ್ನು ಬಹುವಾಗಿ ಪ್ರೀತಿಸುತ್ತಾರೆ. ಇವಳನ್ನು ಅವರ ವಶಕ್ಕೊಪಿಸಿ, ಅನಂತರ ರುಕ್ಕಿಣಿಯ ಶೋಧಕ್ಕೆ ಹೊರಡುವುದೆಂದು ನಿಶ್ಚಯಿಸಿದರು. ಜೊತೆಗೆ ಅಜ್ಜನ ಕಾಲದಿಂದಲೂ ತಮ್ಮಲ್ಲಿದ್ದ ಸರ್ವರೋಗಗಳಿಗೂ ಉಪಯುಕ್ತವಾದ ಕುಪ್ಪಿ ಮಾತ್ರೆಯನ್ನು ಕೈಗೆತ್ತಿಕೊಂಡರು. - ಅವರು ಹಜಾರಕ್ಕೆ ಬಂದಾಗ ಸರಸಿ, “ಅಕ್ಕ-ಅಕ್ಕ ಎಲ್ಲಿ?” ಕೇಳಿದಳು. “ಯಾವ ಮನೆಗೆ ಹೋಗಿದ್ದಾಳೆ. ಇನ್ನೇನು ಬತ್ತಾಳೆ. ಅಷ್ಟರಲ್ಲಿ ನಿನಗೆಜ್ವರ ಬಂದಿದೆವೆಂಕಣ್ಣಜೋಯಿಸರ ಮನೆಗೆ ಹೋಗೋಣ. ಅಲ್ಲಿ ಅವರ ಮಕ್ಕಳಿದ್ದಾರಲ್ಲ-ನಾಗಲಕ್ಷ್ಮಿ, ವಸಂತ, ಶಾಂತಿ ಅವರು ಇಲ್ನೋಡು ಈ ಕುಪ್ಪಿ ಮಾತೇನ ಜೇನುತುಪ್ಪದಲ್ಲಿ ತೆದು ನಿನಗೆ ತಿನ್ನಿಸಿದರೆ, ನಿನ್ನ ಜ್ವರ ಸಾಯಂಕಾಲದೊಳಗೆ ಚೆಟ್ ಆಗಿ ಹೋಗುತ್ತೆ” ಎಂದು ಜ್ವರದ ತಾಪದಲ್ಲಿ, ಆ ಮಾತು ಸರಸಿಗೆ ಬೇಕಾಗಿರಲಿಲ್ಲ. ಅವಳು ಜ್ವರದ ತಾಪದಲ್ಲಿ, “ಅಕ್ಕ ಎಲ್ಲಿ?- ನನಗೆ ಅಕ್ಕಬೇಕು.....” ಎಂದು ಕೇಳುತ್ತಿರುವಂತೆ ಆಗಾಗ ಸ್ವಲ್ಪ ಬೆಚ್ಚುತ್ತಿದ್ದಳು. ಪಂಚಾಯಿತಿಕಟ್ಟೆಗೆ ಈ ಕೂಸನ್ನು ಬಿಡಬಾರದಾಗಿತ್ತು. ಅಲ್ಲಿ