ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೭೭ 3 ಅವ್ರು ಯಾರು? ಯಾತಾನ್ನಿಂದ ಬಂದ ಅಂತ ಊರಲ್ಲಿ ಯಾರೂ ತಿಳೀದು. ಯಾವಾಗಲಾರೂ ಇಂಗೆ, ಗಾಳಿ ಬೀಸ್ಟಂಗೆ ಬಂದು, ವೋಟೋಯ್ತಿದ್ದ. ಮೂರುನಾಕು ಜಿನದ ಮ್ಯಾಲೆ ನಿರಿಲ್ಲ. ಅಮ್ಮ ಯಾವ ಜಾತಿ ಅಂತ ಯಾರೂ ತಿಳೀದು. ಯಾರು ಏನು ಕ್ಯಾಳಿದರೂವೆ, ಅದ್ರೆ ಅವ್ರು ಜಬಾಬ್ ಕೈರಿಲ್ಲ. ಸುಮ್ಮಕೆ ನಕ್ಕು ಬುಡೋನು. ಒಂದೊಂದು ದಪ ಮಾತ್ರ ತನ್ನೊಟ್ಟಿಗೆ ತಾನು ಏನಾರ ಚುರುಕಾಗಿ ಅಂದುಬುಡೋನು.... ಬ್ರಾಂಬರು ಮಾತ್ರ, “ಅಮ್ಮು ನಮ್ಮೊನೇಯ ಅವದೂತಪ್ಪ ಆಗ” ಅಂತಿದ್ರು, ಅವಯ್ಯಗೆ ಯಾವ ಕಟ್ಟೂ ಇಲ್ಲ. ಯಾರೇನು ಕಟ್ಟರೂ ತಿಂದುಬುಡೋದು. ಇಲ್ಲದಿದ್ರೆ ಆಸಿಗೊಂಡು ಯಾರ ಜಗಲಿ ಮ್ಯಾಲೆ ಮರದ ಗುಡದಲ್ಲೊ ಬಿದ್ದಿರಾದು. ಅವನು ತಾನ ಮಾಡದ್ರೂ ಯಾರೂ ಕಾಣರು...” “ಅಯ್ಯಯ್ಯೋ, ಈ ಅವದೂತಪ್ಪ ಬಂದು ನನ್ನ ಸಮೀಪಾನೆ ಕುಂತುಗಂಡನಲ್ಲವ್ವ, ಲಂಗೋಟಿ ಬಿಚಾಕಿ!.... ಇನ್ನೇನವ್ವ ಗತಿ?- ನಂಗೊ ವೊಟ್ಟೆ ಕಟ್ಟಿಗಂಡು ಬ್ಯಾಗ ಬ್ಯಾಗ ಜಾಗ್ತಾನೆ ಇಲ್ಲ!- ಯಾನವ್ವ ಮಡಲಿ?... ಅರ್ದದಲ್ಲೆ ಎಂಗ ವೈ ಯೇಳಲಿ? - ಮೊಟ್ಟೆ ಬ್ಯಾರೆ ನುಲೀತಾ ಕುಂತ ದೆ...” ಗುಂಡಿಯೊಳಗಿದ್ದೋಳು ಆಡಿದ ಮಾತ ಕೇಳಿ, ಲಕ್ಕನ ಯೋಚ್ಛೆ ಮುಕ್ಕಾಗಿ, ಗುಂಡಿ ಕಡೀಕೆ ನ್ಯಾಡ್ಡ. ಈಗ ಮಾತ್ರ ಅವದೂತ ಅವಳ ಸಮೀಪದಲ್ಲೆ ವೋಟು ದೂರಕೆ ಕುಂತಿದ್ದು ಗೋಚರಾಯ್ತು. ಇಂಗೇ ಕುಂತಿದ್ದೋನು ಲಾಜಾದಲ್ಲಿ ಅಂಗೇ ಎದ್ದಿದ್ದ. ಹಕ್ಕಿ ಇಚಕಿ ಆಕೊ ತರ... ಗುಂಡಿಂದ ಎದ್ದ ಬಂದೋನು ಬಿಚ್ಚಿದ್ದ ಲಂಗೋಟಿಯ ಪುನಾ ಇಂಡೈ ಸೇರುಸ್ಥ-ನಡೀತಿದ್ದ... ವೊರಗಡೆ ನಿಂತಿದ್ದ ಎಂಗ ಗುಂಡಿ ವಳುಗಿದ್ದ ಎಂಗಸು ಕೇಳು: “ಇದ್ಯಾಕೆ ಸೋಮಿ-ಇಂಗೂ ಉಂಟ?... ಉಮ್ಮ ವೋದೋರು, ನೀರಲ್ಲಿ ತೊಳೀಬ್ಯಾಡದ? ಅಂತ ಆವಯ್ಯ ಕ್ಯಾಳಿವೆ?” “ಊ, ಅಂಗೂ ಅವನ್ನ ಕೆಣಕು, ಆಗ ಅವಯ್ಯ, ನಿಮ್ಮತ್ತು, ದನ, ಕರ, ಎಮ್ಮೆ, ಮತ್ತೆ ಬಾಕಿ ಪ್ರಾಣಿಗಳು ಮಲ ವೊರೀಕಾಕಿ, ನಿಮ್ಮಂಗೆ ನೀರು ಎರಚಿ ತಳುಕಂಡವ?” ಅಂತ ಅನ್ನೊ ಗೆಣೆಕಾರನೆಯ ಅವು “ ಅಂದ್ಲು. ಆ ಎಂಗಸು ಬೆಪ್ಪಾಗಿ, 'ಅದ್ವೀ-' ಅಂದು ನಾಚಿ, ಸೀರೆ ಸೆರಗ್ನಲ್ಲಿ ಬಾಯಿ ಮುಚ್ಚಿಕಂಡಿಗಿತ್ತು. ಅವದೂತಪ್ಪ ವೋಗೋದ್ರೆ ಲಕ್ಕ ಕ್ವಾಡ್ತಿದ್ದ. ಅವದೂತಪ್ಪ ಕಣ್ಣುತುಂಬೋವಂತೆ ಆಳು, ಅವಂಗೆ ಯಾವ ಚಿಂತೇನೂ ಇರೋವಂಗೆ ಕಾಣ್ಣಿಲ್ಲ.