ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಉಪೋದ್ಘಾತ XL111 ಬೇರೆ ಮತಗಳನ್ನು ತಿರಸ್ಕರಿಸಿ, ಧನ್ವಂತರಿ ಹೇಳಿದ ಸರ್ವಾಂಗನಿರ್ವೃತಿಯು ಏಕಕಾಲದಲ್ಲಿ ಆಗುವದೆಂಬ ಅಭಿಪ್ರಾಯವು ಸರಿಯಾದ್ದೆಂತ ಅನುಮೋದಿಸಲ್ಪಟ್ಟಿದೆ. (ಶಾರೀರಸ್ಥಾನದ 6ನೇ ಅಧ್ಯಾಯ ನೋಡಿರಿ.) (7) ಚರಕಸಂಹಿತೆಯಲ್ಲಿ ವಸ್ತವಿಧಿಯು ಸಂಪೂರ್ಣವಾಗಿ ವರ್ಣಿತವಾಗಿರುವದು ಮಾ ತ್ರವಲ್ಲದೆ, ಅದರ ಪ್ರಯೋಜನವು ಬಹಳವಾಗಿ ಶ್ಲಾಘಿಸಲ್ಪಟ್ಟಿರುತ್ತದೆ. (8) ಯಾವ ಪೂರ್ವಗ್ರಂಧದಲ್ಲಿಯಾದರೂ ಚರಕಸಂಹಿತೆಯ ಹೆಸರು ಹೇಳಿ, ಸುಶ್ರುತನ ಹೆಸರನ್ನು ಬಿಟ್ಟದ್ದು ಕಾಣುವದಿಲ್ಲ. ಅಂದರೆ ಇವರಿಬ್ಬರ ಕಾಲಗಳ ಮಧ್ಯದಲ್ಲಿ ರಚಿತವಾದ ಗ್ರಂಧೆ ಕಂಡುಬರುವದಿಲ್ಲ.

  • ಈ ಸಂಗತಿಗಳನ್ನೆಲ್ಲ ಆಲೋಚಿಸುವಾಗ್ಗೆ, ಚರಕನ ಕಾಲಕ್ಕೂ ಮೊದಲು ಬಹುಮಂದಿ ಪ್ರಸಿದ್ದ ವೈದ್ಯರಿರುತ್ತಿದ್ದರು, ಅವರೊಳಗೆ ಕೆಲವರು ಶಸ್ತ್ರವೈದ್ಯದಲ್ಲಿ ಕುಶಲರು, ಕೆಲವರು ಕಾಯ ಚಿಕಿತ್ಸೆಯೆಂಬ ಔಷಧ ಮಂತ್ರಾದಿಗಳ ಉಪಯೋಗದಲ್ಲಿ ಕುಶಲರು, ಹೀಗೆ ಎರಡು ತಂಡಗಳು ಇದ್ದವು; ಶಸ್ತ್ರವೈದ್ಯಕ್ಕೆ ಮೃತಶೋಧನದಿಂದ ಪಡೆಯಬೇಕಾದ ಸೂಕ್ಷ್ಮವಾದ ಶಾರೀರ ಅನು ಭವವೂ, ಶಸ್ತ್ರಗಳನ್ನು ಉಪಯೋಗಿಸಿಯೇ ಬಲಪಡಬೇಕಾದ ಹಸ್ತಲಾಘವಾದಿ ಶಸ್ತ್ರ ಪ್ರಣಯನ ವಾಂಡಿತ್ಯವೂ ಅವಶ್ಯವಾದ್ದರಿಂದ, ಬಹುಪಕ್ಷದ ವೈದ್ಯರು ಆ ಕಷ್ಟಸಾಧ್ಯವಾದ ಪಾಂಡಿತ್ಯಕ್ಕೆ ಯತ್ನಿಸದ, ಔಷಧೋಪಚಾರಗಳಿಂದಲೇ ಚಿಕಿತ್ಸೆ ನಡೆಸುತ್ತಿದ್ದರು, ಈ ದ್ವಿಪಕ್ಷಗಳಲ್ಲಿ ಪ್ರವೀಣ ರಾದ ಚರಕ ಮತ್ತು ಸುಶ್ರುತ ತಮ್ಮ ತಮ್ಮ ಪಕ್ಷದ ಕ್ರಮಗಳನ್ನು ಬಲಪಡಿಸಿ ಮತ್ತು ಸಂಸ್ಕರಿಸಿ, ಬೇರ ಬೇರ ಗ್ರಂಧಗಳನ್ನು ಹೆಚ್ಚು ಕಾಲಾಂತರವಿಲ್ಲದೆ ರಚಿಸಿದರು, ಮತ್ತು ಆ ಎರಡು ಗ್ರಂಧ ಗಳು ಪ್ರಾಯಶಃ ಏಕಕಾಲದಲ್ಲಿ ಪ್ರಚಾರಕ್ಕೆ ಬಂದಿರಬಹುದು, ಎಂತ ಸಹ ಕಾಣುತ್ತದೆ

6 ಹ್ಯಾಗಿದ್ದರೂ, ಈಗಿನ ಕಾಲದಲ್ಲಿ ಆಯುರ್ವೇದಜ್ಞಾನಕ್ಕೆ ಚರಕಸಂಹಿತೆ ಮತ್ತು ಸುಶ್ರುತಸಂಹಿತೆ ಸೇರಿ ಬುನಾದಿಯಾಗಿ ನಿಂತವೆ ಎಂಬದರಲ್ಲಿ ಸಂದೇಹವಿಲ್ಲ ಆ ಎರಡು ಗ್ರಂಧಗಳನ್ನೇ ಮುಖ್ಯಾಧಾರವಾಗಿ ತೆಗೆದುಕೊಂಡು ಈ ಆಯುರ್ವೇದಸಾರವನ್ನು ರಚಿಸಿ ರುತ್ತದೆ. ಜಿಜ್ಞಾಸಗಳು ಉಂಟಾಗಬಹುದಾದ್ದಲ್ಲಿ, ಅವುಗಳ ಪರಿಹಾರಕ್ಕೆ ಬೇಕಾದಷ್ಟು ಅರ್ವಾಚೀನ ಗ್ರಂಧಗಳ ಸಹಾಯವನ್ನು ಪಡೆದದೆ. ಕೆಲವು ಸಂದರ್ಭಗಳಲ್ಲಿ ಪ್ರಯೋಜನಕರ ವಾಗಬಹುದಾದ ಪಾಶ್ಚಾತ್ಯ ವೈದ್ಯರ ಮತವನ್ನು ಸಂಕ್ಷೇಪವಾಗಿ ಸೂಚಿಸಿರುತ್ತದೆ 7. ಇಂಧಾ ಗ್ರಂಧವನ್ನು ರಚಿಸಿ ಪ್ರಕಟಿಸುವದರ ಪ್ರಯೋಜನವೇನು? ಆವಶ್ಯವೇನು? ಎಂಬ ಜಿಜ್ಞಾಸೆ ನಮ್ಮ ವಾಚಕರಲ್ಲಿ ಹುಟ್ಟು ವಂಧಾದ್ದು ಸಹಜ. ಈ ವಿಷಯವನ್ನು ಸ್ವಲ್ಪಮಟ್ಟಿಗೆ ಆಲೋಚಿಸುವ. ಈ ಭರತಖಂಡದವರ ಸರಾಸರಿ ಆಯುಃಪ್ರಮಾಣವು 23 ವರ್ಷ ಎಂತ ನಿರ್ಣಯಿಸಿದ್ದಾರೆ. ವಿಲಾಯತಿಯ ಅನೇಕ ರಾಜ್ಯಗಳಲ್ಲಿ ಈ ಪ್ರಮಾಣವು ಸುಮಾರು ಇದರ ದುಬಾರೆಯಷ್ಟು ಹೆಚ್ಚು ಇರುತ್ತದೆ. ಬಹು ವೃಧ್ಧರಾದ ಸ್ತ್ರೀಪುರುಷರನೇಕರನ್ನು ನಾವು ನೋಡುತ್ತಿರುವಾಗ್ಗೆ, ಸರಾಸರಿ ಪ್ರಾಯ 23 ವರ್ಷದಷ್ಟು ಕಡಿಮೆಯಾಗಿ ಉಂಟೆಂಬದರ ಅರ್ಧವೇನು? ಬಾಲ್ಯದಲ್ಲಿ ಸಾಯುವ ಮಕ್ಕಳ ಸಂಖ್ಯೆಯು ಬಹು ಹೆಚ್ಚು ಇದೆ ಎಂಬದೇ. ಈ ಖಂಡದಲ್ಲಿ ಜನನವಾಗುವ ಶಿಶುಗಳೊಳಗೆ 25 ಶತಾಂಶಗಳು (ಅಂದರೆ ನಾಲ್ಕರೊಳಗೆ ಒಂದು) ಹುಟ್ಟಿ ಹನ್ನೆರಡು ತಿಂಗಳುಗಳೊಳಗಾಗಿ ಸಾಯುತ್ತವೆ ಎಂತ ಎಣಿಸಿದ್ದಾರೆ. ಈ ಬಾಲಮರಣಾಧಿಕ್ಯವು ಬಾಲವಿವಾಹದ ಫಲ ಎಂತ ಸಾಧಾರಣವಾಗಿ ಸಮಾಧಾನ ಹೇಳು