ಪುಟ:ನನ್ನ ಸಂಸಾರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಕಾದಂಬರೀ ಸಂಗ್ರಹ

ವೆಂಬುದು ಕಣ್ಣಿಗೆ ಕಾಣುವ ಪದಾರ್ಥವಲ್ಲ. ಒಬ್ಬರ ಕೈಗೆ ಸಿಕ್ಕತಕ್ಕುದೂ ಅಲ್ಲ. ಆದರೆ ಒಂದುದಿನ ಕಳೆದುಹೋದರೂ ಆ ಕಾಲವು ಇನ್ನೆಂದಿಗೂ ಬರಲಾರದು. ಕಾಲದ ಯೋಗ್ಯತೆಯನ್ನೂ ಅದರ ಬೆಲೆಯನ್ನೂ ಕಂಡುಹಿಡಿಯಲಾರಿಗೂ ಸಾಧ್ಯವಿಲ್ಲ. "ವ್ಯರ್ಥ ವಾಗಿ ಕಾಲಹರಣ ಮಾಡಬಾರದು.” ಎಂದು ಪ್ರಸಿದ್ಧವಾದ ನೀತಿವಚನವು ಸರ್ವರಿಂದಲೂ ವಿಚಾರಿಸಲ್ಪಡಬೇಕು. ಮತ್ತು ಏನುಮಾಡಿದರೂ ಹೊತ್ತೇ ಹೋಗದು. ಎಂಬ ಜಡವಾಕ್ಯವು ಬಹು ಅನರ್ಥಕಾರಿಯಾದುದೆಂಬುದನ್ನು, ಉದ್ಯೋಗಶೀಲರೂ, ಒಳ್ಳೆಯ ವಿದ್ಯಾರ್ಥಿಗಳೂ, ಜಾಣರೂ, ಬಲ್ಲರು. ಅದರ ಅರ್ಧವನ್ನು ಈ ಮೂವರಿಂದ ಎಲ್ಲರೂ ತಿಳಿದುಕೊಳ್ಳಲಿ. !

             ಹುಟ್ಟಿದ ಹಬ್ಬವಾಗಿ ಈಗಲೇ ಎರಡುದಿನವಾಗಿ ಹೋಯಿತು.  ಮೂರನೆಯ ದಿನ ಬೆಳಿಗ್ಗೆ ಹತ್ತು ಗಂಟೆಯ ಸಮಯದಲ್ಲಿ ನಾನು ನಮ್ಮ ಯಜಮಾನರಿಗೆ ನೀರನ್ನು ಎರೆಯುತ್ತಿದ್ದೆನು.   ಅತ್ತಮ್ಮನವರು ಅಡಿಗೆ ಮಾಡುತ್ತಿದ್ದರು. ತಾತನವರು ಬೀದಿಬಾಗಿಲಿನಲ್ಲಿ ಕುಳಿತು ಗ್ರಂಥವನ್ನು ನೋಡುತ್ತಿದ್ದರು.      ಅಕ್ಕನೂ ಭಾವನವರೂ ಅವರ ಚಿಕ್ಕ ಮನೆ ಯಲ್ಲಿ ಕುಳಿತು ತಮ್ಮ ಪೆಟ್ಟಿಗೆಯಲ್ಲಿದ್ದ   ಹಣವನ್ನು ಲೆಖ್ಖ ಮಾಡಿ ಅದರ ಪರಿಶೀಲನೆ ಯಲ್ಲಿದ್ದರು.     ಹೀಗೆ ಒಂದೆರಡು ಘಳಿಗೆ ಕಳೆದುಹೋಯಿತು.    ಇದ್ದಕ್ಕಿದ್ದಹಾಗೆಯೇ ನಮ್ಮ ಮನೆಯಲ್ಲಿ ಬಹು ಗಲಭೆಗೆ ಕಾರಣವಾಯಿತು.      ನಮ್ಮ ತಾತನವರೂ ಅಕ್ಕನ ವರೂ ಭಾವನವರೂ ಮಹತ್ತಾದ ಆಲೋಚನೆಯಲ್ಲಿ ಮುಳುಗಿ ಹೋಗಿದ್ದರು.  ನಾನು ಬಚ್ಚಲಮನೆಯಲ್ಲಿ ನೀರನ್ನು ಕಾಯಿಸುತ್ತಿದ್ದೆನು.     ಆಗ ನಮ್ಮ ಯಜಮಾನರು ನನ್ನ ಬಳಿಗೆ,   ಅತಿವೇಗದಿಂದ ಬಂದು, ಈಗ ನಡೆದ ವಿಷಯವನ್ನು ಕೇಳಿದೆಯಾ ? ನಮ್ಮ ಅಣ್ಣನವರ  ಪೆಟ್ಟಿಗೆಯಲ್ಲಿದ್ದ ಇನ್ನೂರು ರೂಪಾಯಿಗಳಲ್ಲಿ 50-60 ರೂಪಾಯಿಗಳು ಮಾಯವಾಗಿದೆಯಂತೆ ? ಎಲ್ಲರೂ ಬಹು ಯೋಚನಾಕ್ರಾಂತರಾಗಿದಾರೆ.   ಇನ್ನು ಈ ಅಪವಾದವು ನನ್ನ ಮೇಲೆಲ್ಲಾದರೂ   ಬರುವುದೋ ಎಂದು ಭಯಪಡುತ್ತಿದೇನೆ  ಎಂದು ಹೇಳಿದರು.   ನಾನು ಅದನ್ನು ಕೇಳಿ, ನೀವು ವ್ಯರ್ಥವಾಗಿ ಇಲ್ಲದ ಚಿಂತೆಯನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇಕೆ ?   ಅವರಚಿಕ್ಕ ಮನೆಯಲ್ಲಿ----ಅದರಲ್ಲೂ   ಅವರ ಪೆಟ್ಟಿಗೆಯಲ್ಲಿದ್ದ ಹಣವು  ಹೋಗುವುದಾದರೂ ಹೇಗೆ ?  ಅವರೇ ಎಲ್ಲೋ ಗಂಡ ಹೆಂಡರಪೈಕಿ ಒಬ್ಬರು ಬಳಸಿಕೊಂಡು ಮರತಿರಬೇಕು.   ಹೊರಗಿನವರು  ಕದ್ದಿದ್ದರೆ 60 ರೂಪಾಯಿಗಳನ್ನು ತೆಗೆ ದುಕೊಂಡು ಕಡಮೆಯದನ್ನು ಬಿಟ್ಟು ಹೋಗುವುದೆಂದರೇನು ? ಇದೆಲ್ಲವೂ ವಿಸ್ಮೃತಿ ಯಿಂದುಂಟಾಗಿರಬಹುದೆಂದು ಹೇಳಿ ಅವರನ್ನು ಸಮಾಧಾನ ಪಡಿಸಿದೆನು. ಆದರೂ ಅವರಿಗೆ ಮನಶ್ಯಾಂತಿಯುಂಟಾಗಲಿಲ್ಲ.    ಹಾಗೆಯೇ   ಸ್ನಾನಾಹ್ನಿಕಗಳನ್ನು ಮಾಡಿಕೊ