{ ಉಪೋದ್ಘಾತ LXXXl11 ಕಾಣುತ್ತವೆ. ಆದ್ದರಿಂದ ಶಾರ್ಙ್ಗಧರನ ಕಾಲದಲ್ಲಿ ಗೊತ್ತಿಲ್ಲದ ವಾತಾದಿಗಳ ಸ್ಥಾನಭೇದವ ಭಾವಪ್ರಕಾಶದ ಕಾಲದೊಳಗೆ ದೃಢಪಟ್ಟಿತ್ತು ಎಂಬ ಊಹೆ ಸಹಜವಾಗಿ ಉಂಟಾಗುತ್ತದೆ. ಭಾವಪ್ರಕಾಶದನಂತರ ಹೊರಟ ಪ್ರಸಿದ ಗ್ರಂಧಗಳೆಲ್ಲಾ ಆ ಭೇದವನ್ನು ಅನುಮೋದಿಸಿಯವೆ. ಭಾವಪ್ಪಕಾಶವನ್ನು ರಚಿಸಿದವನು ಮಹಾಪಂಡಿತನಾಗಿದ್ದನೆಂಬದು ಸರ್ವಸಮ್ಮತವಾದ ಸಂಗತಿ. ಫರಂಗಿರೋಗದ ನಿದಾನ – ಲಕ್ಷಣಾದಿಗಳನ್ನು ಸರಿಯಾಗಿ ವಿವರಿಸಿ, ಅದಕ್ಕೆ ಪ್ರತಿ ಕ್ರಿಯೆಯಾಗಿ ರಸಕರ್ಪೂರ ಎಂಬ ವಿಷದ್ರವ್ಯವನ್ನು ಬಾಧಕಬಾರದ ರೀತಿಯಿಂದ ಹೊಟ್ಟೆಗೆ ಕೂಡುವ ವಿಧಾನವನ್ನು ಈ ಭಾವಪ್ರಕಾಶವೇ ಆರಂಭಿಸಿದ್ದೆಂತ ಪ್ರ. ಚ. ರಾಯರವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರ. ಅಂಧಾ ಮಹಾಪಂಡಿತನು ನಾಡೀಪರೀಕ್ಷೆಯ ಎಷಯ ದಲ್ಲಿ ಸಿದ್ದಾಂತವಲ್ಲದ ಅಂಶವನ್ನು ತನ್ನ ಗ್ರಂಥದಲ್ಲಿ ಸೇರಿಸಲಕ್ಕೆ ಕಾರಣವಿಲ್ಲ ನಮ್ಮ ವೃದ್ದಾರಂಭದ ಅನೇಕ ವರ್ಷಗಳ ವರಗೆ ನಾಡಿಯ ವಾತಾದಿ ಸ್ನಾನಭೇದಗಳಲ್ಲ. ಅಪನಂಬಿಕೆಯುಳ್ಳವರಾಗಿ ಈಗಿನ ಪಾಶ್ಚಾತ್ಯ ದಾಕ್ಟರರಂತೆಯೇ ನಾಡಿಯ ಬಡಿತಗಳನ್ನು ಗಡಿಯಾರ ಹಿಡಿದು ಲೆಕ್ಕಮಾಡುತ್ತಿದ್ದೆವು ಭಾವಪ್ರಕಾಶಾದಿ ಆಧರಣೀಯ ಗ್ರಂಧಗಳನ್ನು ಓದಿದ ಮೇಲೆ ಸ್ವಾಭಾವಿಕವಾಗಿ ನಮ್ಮ ಲಕ್ಷ ವ ನಾಡಿಯ ಸ್ನಾನಭೇದಗಳ ಮೇಲೆ ಬಿದ್ದು, ಪರೀಕ್ಷಿಸುತ್ತಾ ಬಂದ ಹಾಗೆ ಆ ಛೇದಗಳ ತದ್ಧವು ಖಚಿತವಾಗುತ್ತಾ ಬಂತು. ಈಗ ಸುಮಾರು ಇಪ್ಪತ್ತೈದು ವರ್ಷಗಳ ಕಾಲದಲ್ಲಿ ಎಷ್ಟೋ ಸಹಸ್ರ ರೋಗಿಗಳ ನಾಡಿಯನ್ನು ಸುಕ್ಷಿಸಿ, ಆ ಭೇದಗಳು ನಿಜವಾದವು ಎಂತ ಪೂರ್ಣ ಸಮಾಧಾನ ಪಟ್ಟಿದ್ದೇವೆ ವಾತಾದಿ ದೋಷಗಳಿಗೆ ಲಕ್ಷವಿಟ್ಟು ರೋಗಕ್ಕೆ ಚಿಕಿತ್ಸೆ ಮಾಡತಕ್ಕ ವೈದ್ಯರಿಗೆ ಆ ನಾಡೀಸ್ಥಾನಭೇದ ಗಳು ಅತಿಪ್ರಯೋಜನಕರವಾಗಿವೆಸಾಧಾರಣವಾಗಿ ವಾತದಲ್ಲಿ ಸರ್ಪನ ಅಧವಾ ಬಿಗ ಳೆಯ ಗತಿ, ಪಿತ್ತದಲ್ಲಿ ಕಪ್ಪಯ ಗತಿ, ಕಫದಲ್ಲಿ ಹಂಸದ ಅಧವಾ ಪಾರಿವಾಳದ ಗತಿ, ಮತ್ತು ಇಂಧಿಂಧಾ ರೋಗದಲ್ಲಿ ಇಂಧಿಂಧಾ ಗತಿ ಕಾಣುವದೆಂತ ಹೇಳಲ್ಪಟ್ಟ ವಿವರಗಳ ವಿಚಾರದಿಂದ ಮಹತ್ವ ಯೋಜನವನ್ನು ಪಡೆಯುವದು ಪಂಡಿತರುಗಳಿಗೆ ಸಹ ಪ್ರಾಯಶಃ ಅಸಾಧ್ಯವೆನ್ನ ಬಹುದು. ಆದರೆ ಮೂರು ಬೆರಳುಗಳ ಅಡಿ ಪ್ರತ್ಯೇಕವಾಗಿ ಕಾಣುವ ವಾತ-ಪಿತ್ತ-ಕನ ಗಳೊಳಗೆ ಯಾವದರಲ್ಲಿ ದೋಷ ಕಾಣುತ್ತದೆಂಬದನ್ನು ತಿಳಿಯುವದು ಸಾಮಾನ್ಯ ಜನರಿಗೆ ಸಹ ಅಲ್ಲ ಯತ್ನದಿಂದ ಸಾಧ್ಯವಾದೀತು. ವಿಡಿಲನ್ನು ಕಲಿಯಲಿಚ್ಚಿಸುವ ವಿದ್ಯಾರ್ಥಿಗೆ ರಿ-ಗ- ಮ-ಧ-ಸಿ-ಸ ಎಂಬ ಸ್ವರಗಳು ಹುಟ್ಟುವದಕ್ಕೆ ಯಾವ ಯಾವ ಸ್ಥಾನದಲ್ಲಿ ಬೆರಳನ್ನಿಡ ಬೇಕಂಬದನ್ನು ತಿಳಿಸುವದಕ್ಕೆ ಆರಂಭದಲ್ಲಿ ವಿಡಿಲಿನ ಮೇಲೆ ಸುಣ್ಣದ ಬೊಟ್ಟುಗಳಸಿಟ್ಟು ಕೂಡುವದು ಅಗತ್ಯವಾಗಬಹುದಾದರೂ, ಕೆಲವು ದಿನಗಳ ಅಭ್ಯಾಸದಿಂದ ಸಿಡಿಲನ್ನು ಕಣ್ಣಿ ನಿಂದ ನೋಡದೆನೇ, ಸ್ವರಕ್ಕೆ ತಕ್ಕವಾದ ಸ್ಥಾನದಲ್ಲಿ ಬೆರಳನ್ನಿಡುವದಕ್ಕೆ ಆ ವಿದ್ಯಾರ್ಥಿಯು ಹಾಗೆ ಸವರ್ಧನಾಗುತ್ತಾನೋ, ಹಾಗೆಯೇ ಪ್ರತಿಯೊಬ್ಬನು ತನ್ನ ಕೈಯ ಹೆಬ್ಬೆಟ್ಟಿನ ಬುಡ ದಲ್ಲಿ, ಸೌಖ್ಯವಿರುವಾಗಲೇ, ತನ್ನ ಎರಡನೆ ಕೈಯ ತರ್ಜನ್ಯಾದಿ ಮೂರು ಬೆರಳುಗಳನ್ನು ನಾಡೀ ಪೆಟ್ಟುಗಳು ಅವುಗಳಿಗೆ ತಗಲುವ ಹಾಗೆ ಇಟ್ಟು, ಕೆಲವು ದಿವಸ ಅಭ್ಯಾಸ ಮಾಡಿದರೆ, ಬೆರಳುಗಳನ್ನು ಒಂದಕ್ಕೊಂದು ಎಷ್ಟು ಹತ್ತಿರವಾಗಿ ಇಡತಕ್ಕದ್ದೆಂಬದನ್ನು ತಿಳಿಯಬಹುದು. ಹಾಗೆ ಸರಿಯಾಗಿ ಬೆರಳುಗಳನ್ನಿಟ್ಟಲ್ಲಿ ಒಂದೊಂದು ಬೆರಳಿನ ಅಡಿಯಲ್ಲಿ ಒಂದೊಂದು ವಿಧವಾಗಿ ನಾಡಿಯು ಬಡಿಯುತ್ತಿರುವದು ಕಾಣುತ್ತದೆ. ಒಂದು ತನ್ನ ಸ್ಥಾನದಲ್ಲಿಯೇ ಮಿಕ್ಕ ಎರಡ 11
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೫
ಗೋಚರ