ಉಪೋದ್ಘಾತ 111 ಬಹುದು ಈ ಭರತಖಂಡದ ಮೇಲೆ ಯಾರಾದರೂ ಪರರಾಜರು ಯುದ್ಧಾರಂಭ ಮಾಡಿದರೆ, ಅಥವಾ ಬೇರೆ ಯಾವ ಸಂಗತಿಗಳಿಂದಾದರೂ ಪರದೇಶಗಳಿಂದ ಸಮುದ್ರಮಾರ್ಗವಾಗಿ ಬರುವ ವ್ಯಾಪಾರವು ನಿಂತುಹೋದರೆ, ಈ ಪಾಶ್ಚಾತ್ಯ ವೈದ್ಯರ ವೃತ್ತಿಯು ಪ್ರಾಯಶಃ ನಿಂತುಹೋಗತಕ್ಕದ್ದೇ ಪಾಶ್ಚಾತ್ಯ ಔಷಧಗಳ ಅಂಗಡಿಯಿಲ್ಲದ ಹಳ್ಳಿಯಲ್ಲಿ ಒಬ್ಬ ರೋಗಿಗೆ ಪಾಶ್ಚಾತ್ಯ ವೈದ್ಯರು ಹತ್ತರವಿದ್ದರೂ ಏನು ಮಾಡಬಲ್ಲರು? ಇದಲ್ಲದೆ, ಸೂರ್ಯ ಚಂದ್ರ ವಾಯುಗಳ ಶಕ್ತಿಗಳು ಪ್ರಾಣಿ, ನೀರು, ಮಣ್ಣು ಮುಂತಾದ ಸರ್ವಭಾವಗಳ ಮೇಲೂ ಏಕರೀತ್ಯಾ ವ್ಯಾಪಿಸಿರುವದರಿಂದ, ಆಯಾ ದೇಶದ ಜನರಲ್ಲಿ ಉಂಟಾದ ರೋಗಗಳಿಗೆ ಆಯಾ ದೇಶದ ಔಷಧಗಳಿಂದಲೇ ಹೆಚ್ಚು ಗುಣ ಸಿಕ್ಕುತ್ತದೆಂಬ ಆಯುರ್ವೇದ ತತ್ವವು ಅನೇಕ ಕಾರಣಗಳಿಂದ ನಿಜವಾಗಿ ಕಾಣುತ್ತದೆ. ಪುನಃ ವಿಚಾರಣೀಯವಾದ ಒಂದು ಸಂಗತಿ ಯಾವದೆಂದರೆ ಪಾಶ್ಚಾತ್ಯ ವೈದ್ಯದ ಮೂಲವು ವಿಲಾಯತಿಯಲ್ಲಿರುತ್ತದೆ ಅಲ್ಲಿಯ ಜನಾಂಗಗಳಿಗೂ, ಭಾರತೀಯರಿಗೂ ಆಹಾರವಿಹಾರ, ಉಡಿಗೆತೊಡಿಗೆ ಮುಂತಾದ ಸರ್ವಭಾಗಗಳಲ್ಲಿಯೂ ಬಹಳ ಭೇದಗಳಿವೆ. ಅವರಿಗೂ ನಮಗೂ ಸಂಪರ್ಕವಾಗತೊಡಗಿ ಎಷ್ಟೋ ಶತಮಾನಗಳು ಗತಿಸಿ ಹೋದರೂ, ಅವರ ಕ್ರಮಗಳು ನಮಗಾಗಲಿ, ನಮ್ಮ ಕ್ರಮಗಳು ಅವರಿಗಾಗಲಿ, ಸರಿಯಾಗಿ ತಿಳಿದ ಹಾಗೆ ಕಾಣುವದಿಲ್ಲ. ಆದ್ದರಿಂದ ರೋಗಿಗಳಿಗೆ ಅವರ ಸ್ಥಿತಿಗೂ, ರೋಗಕ್ಕೂ ತಕ್ಕವಾದ ಪಧ್ಯ, ಆಚಾರ, ಮುಂತಾದವುಗಳನ್ನು ವಿಧಿಸುವದಕ್ಕೆ ಪಾಶ್ಚಾತ್ಯ ವೈದ್ಯರಿಗೆ ಅನುಕೂಲತೆ ಇಲ್ಲ. ಇದರಿಂದ ರೋಗಗಳು ಬೇಗನೇ ವಾಸಿಯಾಗುವುದಕ್ಕೆ ಅಡ್ಡಿಯಾಗುತ್ತದೆ. ಊರ ಜನರು ಸಾಮಾನ್ಯವಾಗಿ ಆಸ್ಪತ್ರಿ ಔಷಧಕ್ಕೆ ಪಧ್ಯವಿಲ್ಲ ಎಂತ ನೆನಸುವದು ತಪ್ಪು ಇವೇ ಮೊದಲಾದ ಕಾರಣಗಳಿಂದ ಈ ಭಾರತೀಯರ ಅನಾರೋಗ್ಯಕ್ಕೆ ಪಾಶ್ಚಾತ್ಯ ವೈದ್ಯದಿಂದಲೇ ನಿವೃತ್ತಿ ಸಿಕ್ಕುವದು ಅಸಾಧ್ಯವೆನ್ನಬೇಕು. 14. ಪಾಶ್ಚಾತ್ಯ ವೈದ್ಯವು ಶಾಸ್ತ್ರೀಯವಾದದ್ದೆಂತಲೂ, ಆಯುರ್ವೇದ ವೈದ್ಯವು ಶಾಸ್ತ್ರೀಯವಲ್ಲವೆಂತಲೂ, ಪಾಶ್ಚಾತ್ಯ ಡಾಕ್ಟರರೊಳಗೆ ಬಹು ಪಕ್ಷದವರ ಮತವುಂಟು ಇದು ಆಶ್ಚರ್ಯವಲ್ಲ ಅವರಿಗೆ ಅನ್ಯದೇಶೀಯವಾದ ಮತ್ತು ಸುಲಭ ಬೋಧ್ಯವಲ್ಲದ ಭಾಷೆಗಳಲ್ಲಿ ಪ್ರಕಾಶಿತವಾದ ಮತ್ತು ಅನ್ಯದೇಶೀಯ ಆಚಾರ ವಿಚಾರಾದ್ಯವಸ್ಥೆಗಳನ್ನು ಆಯುರ್ವೇದದ ಜ್ಞಾನವನ್ನು ಸಂಪಾದಿಸುವದು ದುಃಸಾಧ್ಯ, ಅಸಾಧ್ಯವೆನ್ನಲೂಬಹುದು. ಆದಾಗ್ಯೂ ಅವರೊಳಗೆ ಕೆಲವರು ಶ್ರಮಪಟ್ಟು ಆಯುರ್ವೇದ ಗ್ರಂಥಗಳ ಸಾರವನ್ನು ತಿಳಿದು, ಸಂತೋಷಪಟ್ಟು ಸ್ತುತಿಸುವವರೂ ಇರುತ್ತಾರೆ. ಈ ಭಾರತೀಯರಲ್ಲಿ ಕೆಲವರು ತಮ್ಮ ಕರ್ತವ್ಯವಾದ ಆಯುರ್ವೇದಜ್ಞಾನಸಂಪಾದನದಲ್ಲಿ ಉದಾಸೀನರಾಗಿಯೂ, ಪಾಶ್ಚಾತ್ಯ ವೈದ್ಯದ ಮರ್ಮಗಳಿಗೆ ಬಹಿಷ್ಕೃತರಾಗಿಯೂ ಇದ್ದು, ಪಾಶ್ಚಾತ್ಯ ಪಂಡಿತರುಗಳ ಬಹುಮತದಲ್ಲಿ ತಮಗಿರುವ ವಿಶ್ವಾಸವನ್ನೇ ಆಧರಿಸಿಕೊಂಡು, ಆಯುರ್ವೇದವು ಅಶಾಸ್ತ್ರೀಯ ಎಂದು ಬಹಿರಂಗವಾಗಿ ಹೇಳತೊಡಗಿದ್ದಾರೆ. ಆದುದರಿಂದ ಆಯುರ್ವೇದಕ್ಕೆ ನಮ್ಮ ಸರಕಾರದ ಆಶ್ರಯವನ್ನು ಕೇಳುವದಕ್ಕೆನೇ ಸಂಕೋಚಪಡಬೇಕಾಗಿದೆ. ಇಂಥಾ ಅವಸ್ಥೆಯಲ್ಲಿ ಆ ಪ್ರತಿಜ್ಞೆಗಳನ್ನು ವಿಮರ್ಶಿಸುವದು ಅವಶ್ಯಕ. ಪ್ರಥಮತಃ ಪಾಶ್ಚಾತ್ಯ ವೈದ್ಯದ ಸ್ಥಿತಿಯನ್ನು ಆಲೋಚಿಸುವ, ಆ ವೈದ್ಯದಲ್ಲಿ ವ್ಯವಸ್ಥೆ ಹೊಂದದ ಪ್ರಮೇಯಗಳೇ ಒಹಳವಾಗಿವೆ ದಿನೇದಿನೇ ಹೊಸ ನಿರ್ಣಯಗಳ ಉತ್ಪಾದನೆ ಮತ್ತು ಹಳೇ ನಿರ್ಣಯಗಳ ಪರಿವರ್ತನ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫
ಗೋಚರ