ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 LII ಉಪೋದ್ಘಾತ ಪ್ರಕಟವಾಗುತ್ತಾ ಇವೆ, ಮತ್ತು ಏಕಕಾಲದಲ್ಲಿ ಅವರೊಳಗೆನೇ ಪಕ್ಷಾಂತರಗಳು ಅನೇಕ ಅಂಶಗಳಲ್ಲಿ ಇದ್ದೇ ಇವೆ ಇದೆಲ್ಲಾ ಶಾಸ್ತ್ರವರ್ಧನದ ಸಹಜವಾದ ಲಕ್ಷಣವಾದ್ದರಿಂದ, ಸ್ತುತ್ಯವಲ್ಲದೆ ಸಿಂದ್ಯವಲ್ಲ ಎಂತ ಕೆಲವರು ಹೇಳಿಕೊಳ್ಳುವದೂ ಉಂಟು. ಆದರೆ ಆ ಸಂಸ್ಕಾರಾವರ್ತನಗಳ ಮಧ್ಯದಲ್ಲಿ ಆಯಾಕಾಲದ ಅಶುದ್ಧ ಅಧವಾ ಮಿಧ್ಯಾ ನಿರ್ಣಯಗಳ ಪ್ರಕಾರ ಚಿಕಿತ್ಸೆ ನಡಿಸಿದ್ದರಿಂದ ಎಷ್ಟು ಜನರಿಗೆ ಎಷ್ಟು ಕೆಡಕು ಉಂಟಾಗಿದೆ? ಹಾಗೆ ಕೆಡಕು ದಪ್ಪಗಿನ ಅಕ್ಷರಹೊಂದಿದ ರೋಗಿಗಳ ದುರ್ಭಾಗ್ಯಕ್ಕೆ ಈ ಶಾಸ್ತ್ರೀಯವೆನ್ನುವ ಪಾಂಡಿತ್ಯವೇ ಕಾರಣವಾಗಿರಲಿಲ್ಲವೇ? ಈ ಅಂಶವನ್ನು ನಮ್ಮ ಅನುಭವಸಿದ್ದವಾದ ಕೆಲವು ದೃಷ್ಟಾಂತಗಳಿಂದ ನಮ್ಮ ವಾಚಕರಿಗೆ ಎಶದಪಡಿಸಬಹುದು. ನಮ್ಮ ಸ್ನೇಹಿತರೊಳಗೆ ಒಬ್ಬ ರಲ್ಲಿ ಕುತ್ತಿಗೆಯ ಹಿಂಬದಿಯಲ್ಲಿ ನರಗಳ ದೋಷದಿಂದ ನೋವು ಉಂಟಾಗಿ, ಕುತ್ತಿಗೆಯನ್ನು ತಿರುಗಿಸಲಾರದ ಹಾಗಿನ ಸ್ಥಿತಿ ಒದಗಿದ್ದಕ್ಕೆ ಡಾಕ್ಟರರಿಂದ ಚಿಕಿತ್ಸೆ ಮಾಡಿಸುತ್ತಿರುವ ಕಾಲದಲ್ಲಿ, ಅವರ ಮೂತ್ರದಲ್ಲಿ ಆಲ್ಲು, ಮೊನ್' ಎಂಬ ವಸ್ತು ಉಂಟೆಂತ ಕಂಡುಹಿಡಿದರು. ಅದು ಕೆಟ್ಟ ವ್ಯಾಧಿಯೆಂಒದರಿಂದ ಅದಕ್ಕೆ, ಕುತ್ತಿಗೆಯ ದೋಷವು ಬೇಗದಲ್ಲಿ ಪರಿಹಾರವಾದಾಗ್ಯೂ, ಬಹು ಶ್ರಮಪಟ್ಟು ಚಿಕಿತ್ಸೆ ಮಾಡಿದರು ಈ ಚಿಕಿತ್ಸಾ ಕ್ರಮದಲ್ಲಿ ರೋಗಿಯ ಮೈಯದುರದಿರುವದು ಮುಖ್ಯವಾದ ರಿಂದ, ಮಲಮೂತ್ರವಿಸರ್ಜನವನ್ನು ಸಹ ಸಾಧ್ಯಎದ್ದ ಮಟ್ಟಿಗೆ ಮಲಗಿದಲ್ಲಿಯೇ ಮಾಡು ವಂತೆ ಅನುಕೂಲಿಸಿತ್ತು. ಈ ಆಲ್ಬುಮೆನ್' ರಕ್ತದಲ್ಲಿರುವ ಮುಖ್ಯ ವಸ್ತುವಾದ್ದರಿಂದ, ಅದು ನಷ್ಟವಾಗಿ ಹೋಗಿ ರೋಗಿಗೆ ಅಪಾಯ ಬಾರದ ಹಾಗೆ, ರೋಗಿಗ ಸೆಕ ಕೊಟ್ಟು ಬೆವರಿಸು ವದು ಚಿಕಿತ್ಸೆಯ ಇನ್ನೊಂದು ಮುಖ್ಯ ಅಂಗವಾಗಿತ್ತು ಈ ಕ್ರಮದಲ್ಲಿ ಮಾಡೋಣಾದ ಸುಮಾರು ಮೂರು ತಿಂಗಳ ಚಿಕಿತ್ಸೆಯಲ್ಲಿ ರೋಗಿಯ ಮೂತ್ರದಲ್ಲಿ ಆಲ್ಬುಮನ್ ಅರ್ಧಾಂಶ ಕ್ಕಿಂತಲೂ ಹೆಚ್ಚು ಆಗುವಷ್ಟು ರೋಗವ್ರ ವೃದ್ಧಿಯಾದ್ದಲ್ಲದೆ, ಮಲಮೂತ್ರಗಳೊಂದಿಗೆ ರಕ್ತ ಹೋಗುವದು ಮತ್ತು ಚಳಿಜ್ವರ ಉಂಟಾದ್ದನ್ನು ಕಂಡು, ಆ ಚಿಕಿತ್ಸೆಯನ್ನು ನಿಲ್ಲಿಸಿ, ಆಯುರ್ವೇದಾನುಸಾರವಾಗಿ ನಾವ್ರ ಚಿಕಿತ್ಸೆ ಮಾಡತೊಡಗಿದೆವು, ರಕ್ತಸ್ರಾವ ಮತ್ತು ಚಳಿಜ್ವರ ಒಂದೇ ದಿನದಲ್ಲಿ ನಿಂತದ್ದಲ್ಲದೆ, ಮೂರನೇ ದಿನ ಮೂತ್ರವನ್ನು ಪರೀಕ್ಷಿಸುವಾಗ್ಗೆ, ಅದರಲ್ಲ ಆಲ್ಕು ಮೆನ್' ಬಹಳ ಕಡಿಮೆಯಾಗಿದೆ ಎಂತಲೂ, ಐದನೇ ದಿನ ಮೂತ್ರದಲ್ಲಿ ( ಆಲ್ಲು ಮೆನಿನ' ಲಾಂಛನ ಮಾತ್ರ ಉಂಟೆಂತಲೂ ಡಾಕ್ಟರರೇ ಹೇಳಿದರು. ಸರಕಾರ ಉದ್ಯೋ ಗಸ್ಥರಾಗಿದ್ದ ಆ ರೋಗಿಯ ರಜೆಯು ಅಂತ್ಯವಾದ್ದರಿಂದ, ಆರನೇ ದಿನದಲ್ಲಿ ಅವರು ತಮ್ಮ ಉದ್ಯೋಗಕ್ಕೆ ಪುನಃ ಸೇರುವ ಅಗತ್ಯವಾಯಿತು. ಕೆಲವು ದಿನಗಳನಂತರ ಮೊದಲು ಚಿಕಿತ್ಸೆ ಯನ್ನು ನಡೆಸುತ್ತಿದ್ದ ಇಬ್ಬರು ಡಾಕ್ಟರರಲ್ಲಿ ಹೆಚ್ಚಿನ ಅನುಭವ ಮತ್ತು ಕಲಿಯುವಿಕೆಯುಳ್ಳ ಒಬ್ಬರು ಡಾಕ್ಟರರು ರೋಗಿಯ ಮೂತ್ರವನ್ನು ಪರೀಕ್ಷಿಸಿ, ಅದರಲ್ಲಿ ಕಿಂಚಿತ್ ಆಲ್ಬುಮನ್ ಇದ್ದದ್ದನ್ನು ಕಂಡು, ರೋಗಿಗೆ ನಮ್ಮ ಮುಂದೆಯೇ ಹೇಳಿದ್ದರ ತಾತ್ಪರ್ಯವೇನಂದರೆ “ನೀವ್ರ ನಿಮ್ಮ ಜೀವದೊಂದಿಗೆ ಆಟ ಆಡುತ್ತಿದ್ದೀರಿ. ಇದು ಕುಟುಂಬವಂತರಾದ ನಿಮಗೆ ನೀತಿಯಲ್ಲ ಈ ನಿಮ್ಮ ರೋಗಕ್ಕೆ ಔಷಧವಿಲ್ಲ. ಯಾವಾಗಲಾದರೊಂದು ದಿನ ನಿಮ್ಮ ಶರೀರದಲ್ಲಿ ನೀರು ತುಂಬಿ ಮಾರಣೆ ದಿನ ಸಾಯುವಿರಿ. ನೀವು ಮಾಡತಕ್ಕದ್ದೇನಂದರೆ, ದೀರ್ಘಕಾಲದ ರಜೆ ಯನ್ನು ಪಡೆದು ಹವೆಯಲ್ಲಿ ತ್ಯಾವ ಕಡಿಮೆಯಾದ ಮತ್ತು ಉಷ್ಣವಾದ (ಯಾವದೋ ಎರಡು ಪಟ್ಟಣಗಳ ಹೆಸರು ಹೇಳಿ) ಇಂಧಾ ಪಟ್ಟಣಕ್ಕೆ ಹೋಗಿ ವಾಸಿಸತಕ್ಕದ್ದು. ಹಾಗೆ ಮಾಡದೆ,