ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಉಪೋದ್ಘಾತ ನೀವು ನೀಲಗಿರಿಗ ಹೋದ ಪಕ್ಷದಲ್ಲಿ ನೀವು ಸಾಯುವದು ನಿಶ್ಚಯ'. ಇದನ್ನು ಕೇಳಿ ರೋಗಿಯು ಬೆರಗಾಗಿ ಸುಮ್ಮನಿದ್ದರು ಡಾಕ್ಟರರ ಮನೆ ಬಿಟ್ಟು ಹೊರಗೆ ಬಂದ ಕೂಡಲೇ, ರೋಗಿಗೆ ಧೈರ್ಯಕೊಡುವ ಹಾಗೆ ನಾವು ಹೇಳಿದ ತಾತ್ಪರ್ಯವೇನೆಂದರೆ 'ನೀವು ಧೈರ್ಯ ಕೆಟ್ಟ ಹಾಗೆ ಕಾಣುತ್ತದೆ ದಾಕ್ಟರರ ಮಾತುಗಳನ್ನು ನೀವು ಸ್ವಲ್ಪ ವಿಮರ್ಶಿಸಿರಿ. ಯಾವಾಗ ಲಾದರೊಂದು ದಿನ ಶರೀರದಲ್ಲಿ ನೀರು ತುಂಬಿ ಮಾರಣೆ ದಿನ ಸಾಯುತ್ತಿರಂಬದು ನಿಜ ವಾದರೆ, ನಿಮಗೆ ಮರಣಶಾಸನವನ್ನು ಬರದಿಡಲಿಕ್ಕೆ ಸಮಯ ಸಿಕ್ಕಬಹುದೆಂತ ಊಹಿಸ ಬಹುದು' ಅರ್ಧಸಂಬಳದಿಂದ ಈ ಊರಲ್ಲಿ(ಮದ್ರಾಸಿನಲ್ಲಿ)ಯೇ ನಿಮಗೆ ನಿಮ್ಮ ಕುಟುಂಬದ ಪೋಷಣವನ್ನು ನಡಿಸುವದು ಕಷ್ಟವೆನ್ನುತ್ತಿದ್ದೀರಿ ಹಾಗಾದ ಮೇಲೆ ಅರ್ಧಸಂಬಳದ ರಜೆ ಪಡೆದು ದೂರದೇಶಕ್ಕೆ ಹೋಗಿ ನಿಲ್ಲುವದೆಂಬದು ಅಸಾಧ್ಯ. ಔಷಧವಿಲ್ಲ, ಆದ್ದರಿಂದ ನೀಲಗಿರಿಗೆ ಹೋಗುವ ವಿಷಯ ಮಾತ್ರ ಆಲೋಚಿಸತಕ್ಕ ಅಂಶ. ನಮ್ಮ ಮಾತಿನ ವಿಶ್ವಾಸದ ಮೇಲೆ ನೀವು ನೀಲಗಿರಿಗೆ ಯಾವಾಗಲoತ ಹೋಗಬೇಕು ನಿಮ್ಮ ದುರ್ಭಾಗ್ಯದಿಂದ ರೋಗವು ವೃದ್ಧಿಯಾಗುವದು ಕಂಡ ಪಕ್ಷದಲ್ಲಿ, ನೀವು ಮೆಡಿಕಲ್ ರಜೆ ಪಡೆದು ನಮ್ಮಲ್ಲಿಗೆ ಬಂದರೆ, ನಾವು ನಿಮ್ಮನ್ನು ನಮ್ಮ ಮನೆಯಲ್ಲಿರಿಸಿಕೊಂಡು ನಿಮ್ಮ ರೋಗವನ್ನು ನಿವೃತ್ತಿ ಗೊಳಿಸಿ ಹಿಂದೆ ಕಳುಹಿಸುತ್ತೇವೆ' ಎಂತ. ಈ ಮಾತಿನ ಮೇಲೆ ಅವರು ನೀಲಗಿರಿಗೆ ಹೋದರು. ಅಲ್ಲಿ ಸೇವಿಸುವದಕ್ಕೆ ಗುಗ್ಗುಳವಟಕವನ್ನು ಮಾಡಿ ಕಳುಹಿಸಿಕೊಟ್ಟಿವು. ಅದರಿಂದ ಆ ಊರಲ್ಲಿರುವಾಗಲೇ ಅವರ ರೋಗವು ೭ಶೇಷವಾದದ್ದಲ್ಲದೆ, ಅನಂತರ ಅವರು ಸುಮಾರು ಹತ್ತು ವರ್ಷ ಬದುಕಿದ್ದಾಗ್ಯೂ, ಆ ಹತ್ತು ವರ್ಷಗಳಲ್ಲಿಯೂ ಅವರ ಮೂತ್ರದಲ್ಲಿ ಆಲ್ಬ್ಯು ಮನ್ ಕಾಣಲಿಲ್ಲ. ಅವರು ಹೃದಯರೋಗದಿಂದ ಅಕಸ್ಮಾತ್ತಾಗಿ ಇಂದಿನಿಂದ ಸುಮಾರು ಒಂಭತ್ತು ವರ್ಷಕ್ಕೆ ಹಿಂದೆ ಮೃತವಾದ್ದಾಗಿರುತ್ತದೆ. ಮೇಲೆ ಪ್ರಸ್ತಾಪಿಸಿದ ಇಬ್ಬರು ಡಾಕ್ಟರರೂ ಭಾರತೀಯರಾದರೂ, ಪಾಶ್ಚಾತ್ಯವೈದ್ಯದಲ್ಲಿ ನಿಪುಣರೆಂತ ಕೀರ್ತಿಗೊಂಡು, ಈಗಲೂ ಪ್ರಸಿದ್ದರಾಗಿದ್ದಾರೆ ಅದಲ್ಲದೆ, ಅವರಿಬ್ಬರಿಗೂ ಆ ರೋಗಿಯು ಆಪ್ತರಾಗಿದ್ದರು. ಆದ್ದರಿಂದ, ಪಾಶ್ಚಾತ್ಯವೃದ್ಯರೀತ್ಯಾಸಾಧ್ಯವಿರುವ ಪ್ರಯತ್ನಗಳನ್ನೆಲ್ಲಾ ಅವರಿಬ್ಬರೂ ಮನಪೂರ್ವಕವಾಗಿ ಮಾಡಿದ್ದಾರೆಂಬದರಲ್ಲಿ ಸಂಶಯವಿಲ್ಲ ಈ ಕಾರಣಗಳಿಂದ ಚಿಕಿತ್ಸಾನ್ಯೂನತೆಯು ಅವರನು ಸರಿಸಿದ ಶಾಸ್ತ್ರದ್ದೇ ಎಂತ ಊಹಿಸಬೇಕಾಗುತ್ತದೆ. ಇನ್ನೊಂದು ದೃಷ್ಟಾಂತವನ್ನು ಕೊಡ ಒಹುದು. ಮೇಲೆ ಪ್ರಸ್ತಾಪಿಸಿದ ರೋಗಿಯ ಪತ್ನಿಯು ಸೀಲಗಿರಿಯಲ್ಲಿ (ಇಂದಿಗೆ ಸುಮಾರು ಇಪ್ಪತ್ತನಾಲ್ಕು ವರ್ಷಗಳ ಹಿಂದೆ) ಋತುಮತಿಯಾಗುವ ಕಾಲದಲ್ಲಿ, ಅವಳಿಗೆ ಚಿತ್ರಭ್ರಮ ವುಂಟಾಯಿತು ಅದು ಗರ್ಭಕೋಶದ ಅಕ್ರಮ ಅಧವಾ 'ಹಿಸ್ಟೀರಿಯಾ' ಎಂತ ನಿದಾನಿಸಿ, ಅಲ್ಲಿಯ ದಾಕ್ಟರರು, ಅನಂತರ ಮದ್ರಾಸಿನ ಡಾಕ್ಟರರು, ಅದಕ್ಕೆ ಸುಮಾರು 1 ವರ್ಷಕಾಲ ಚಿಕಿತ್ಸೆಮಾಡಿದಾಗ್ಯೂ, ರೋಗದ ಪ್ರಾಬಲ್ಯವು ದಿನೇದಿನೇ ವೃದ್ಧಿಯಾಗುತ್ತಲೇ ಬಂದದ್ದನ್ನು ನೋಡಿ, ಕೊನೆಯಲ್ಲಿ ಆ ರೋಗವು ಉನ್ಮಾದ (ಹುಚ್ಚು) ಎಂತ ನಿರ್ಣಯಿಸಿ, ರೋಗಿಯನ್ನು ಹುಚ್ಚರ ಆಸ್ಪತ್ರಿಗೆ ಕಳುಹಿಸುವದು ಉತ್ತಮ ಎಂತ ಉಪದೇಶಮಾಡಿದ ಮೇಲೆ, ಆಯು ರ್ವೇದಾನುಸಾರವಾಗಿ ನಾವ್ರ ಚಿಕಿತ್ಸೆಯನ್ನಾರಂಭಿಸಿದ ಒಂದು ಪಕ್ಷದೊಳಗೆ ಹುಚ್ಚು ಇಳಿಯತೊಡಗಿತು. ಕ್ರಮೇಣ ಆ ರೋಗವು ವಾಸಿಯಾಗಿ ಆ ಸ್ತ್ರೀಯು ಕುಟುಂಬವಂತೆ ಯಾಗಿ ಪ್ರಾಯಸ್ಥನಾದ ಮಗನೊಂದಿಗೆ ಈಗಲೂ ಸೌಖ್ಯದಲ್ಲಿರುತ್ತಾರೆ.