ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ IXXX1 ಔಷಧಗಳನ್ನು ಕೂಡಿಸಿಕೊಳ್ಳದೆ ಬರೇ ದಶಮೂಲಗಳ ಕಷಾಯವನ್ನು ಜ್ವರಕ್ಕೆ ಕೊಡುವದು ಆಯುರ್ವೇದ ಕ್ರಮದಲ್ಲಿ ಅಪರೂಪ. ಮತ್ತು ದಶಮೂಲಾದಿ ಕಷಾಯಗಳು ಬೇರೆ ಅನೇಕ ರೋಗಗಳಲ್ಲಿಯೂ ಹೇಳಲ್ಪಟ್ಟಿವೆ. ಆದ್ದರಿಂದ ದಶಮೂಲಗಳ ಕಷಾಯವನ್ನು ಜ್ವರಹರ ಔಷಧಗಳ ಪಟ್ಟಿಯಲ್ಲಿ ವಿಶೇಷವಾಗಿ ಸೇರಿಸಿದ್ದು ಸುಯಲ್ಲ. 30. ಈಗ, ಒಂದೇ ನಾಡಿಯಲ್ಲಿ ವಾತ-ಪಿತ್ತ-ಕಫ ಎಂಬ ಮೂರು ಸ್ಥಾನಗಳಿವೆ ಎನ್ನು ವದು ಕೇವಲ ಅಸಂಬದ್ದವಾದ ಎಂಬ ಪ್ರಮೇಯವನ್ನು ಸ್ವಲ್ಪ ಆಲೋಚಿಸುವ, ಸಿದಿಯು ಗಾಳಿಯನ್ನು ಬಲದಿಂದ ಹೊರಗೆ ದೂಕುವಂತೆ, ಹೃದಯವು ಧಮನಿಯೊಳಗೆ ಒಡುವ ರಕ್ತವು ಬೇರೆ ಬೇರೆ ತೆರೆಗಳಾಗಿ ಪ್ರವಾಹಿಸುವಾಗ್ಗೆ ಆ ತೆರೆಗಳ ಪ್ರಾಬಲ್ಯದಿಂದುಂಟಾಗುವ ಧನುನಿಯ ಉಬ್ಬುವಿಕೆಗಳೇ ನಾಡೀ ಒಡಿತಗಳಾಗಿರುವದರಿಂದ, ಆ ಬಡಿತಗಳೊಳಗೆ ಒಂದು ವಾತ, ಒಂದು ಪಿತ್ತ, ಒಂದು ಕಫ ಎಂಬ ಭೇದಗಳುಂಟಾಗುವದು ಹ್ಯಾಗೆ? ಹೃದಯದಿಂದ ರಕ್ತವು ಹೊರಗೆ ಧಮನಿಗೆ ಒರುವಾಗಲೇ ಭೇದವಿರುತ್ತದೆನ್ನುವ ಪಕ್ಷದಲ್ಲಿ, ಒಂದು ಸರ್ತಿ ಒಂದ ರಕ್ತದ ತೆರೆಯು ಮುಂದೆ ಹೋದಲ್ಲೆಲ್ಲಾ ಒಂದೇ ವಿಧದ ಬಡಿತಗಳು ಕಾಣಬೇಕಲ್ಲದೆ, ಆಯುರ್ವೇದದ ಪಂಡಿತರು ಹೇಳುವಂತೆ, ಹೆಜ್ಜೆ ಟೈನ ಮೂಲದ ಕಳಗೆ ಇಟ್ಟ ಮೂರು ಬೆರಳು ಗಳೊಳಗೆ ತರ್ಜನಿಗೆ ಮುಟ್ಟುವಂಧಾದ್ದು ವಾತ, ಮಧ್ಯಮ ಬೆರಳಿಗೆ ತಗಲವಂಧಾದ್ದು ಪಿತ್ತ, ಅನಾಮಿಕಯ ಅಡಿಯದು ಕಫ ಎಂಬ ಮೂರು ವಿಧವಾದ ಒಡಿತಗಳು ಉಂಟಾಗುವದು ಹಾಗ? ಎಂತ ಪ್ರತಿಪಕ್ಷದವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಅಸಮರ್ಥರಾದ ಅನೇಕ ಆಯುರ್ವೇದೀಯ ಪಂಡಿತರುಗಳೇ ಆಯುರ್ವೇದದಲ್ಲಿಯೂ ಮೂರು ದೋಷಗಳಿಗೆ ನಾಡಿಯಲ್ಲಿ ಮೂರು ಬೇರೆ ಬೇರೆ ಸ್ಥಾನಗಳಿವ ಎಂತ ಇಲ್ಲ ಎಂದು ಹೇಳಿ, ಈ ವಾದಕ್ಕೆ ಎರೋಧವಾಗಿರುವ ಶಾಸ್ಕೊ ಶ್ಲೋಕಗಳನ್ನು ಬಿಟ್ಟು ಒಟ್ಟು, ಆರಂಭದ ನಾಡಿ ವಾತ, ಮಧ್ಯದ್ದು ಪಿತ್ತ, ಅಂತದ್ದು ಕಫ ಎನ್ನುವ ಶ್ಲೋಕಕ್ಕೆ ಮೂರು ಬೆರಳುಗಳ ಅಡಿಯಲ್ಲಿಯೂ ಒಂದನೇ ಸರ್ತಿದು ವಾತ, ಎರಡನೇ ಸರ್ತಿದು ಪಿತೃ, ಮೂರನೇ ಸರ್ತಿದು ಕಷ್ಟ ಎಂಬ ಅರ್ಧ ಹೇಳಲಿಕ್ಕೂ ಬರೆಯಲಿಕ್ಕೂ ಆರಂಭಿಸಿದ್ದಾರೆ ಶಬ್ದಕಲ್ಪದ್ರುಮವ ಈ ಪಕ್ಷವನ್ನು ಎತ್ತಿ ಹಿಡಿದು, ಸ್ನಾನಭೇದವು ಎಲ್ಲಿಯೂ ಹೇಳಲ್ಪಡಲಿಲ್ಲವಾದ್ದರಿಂದ ತರ್ಜನೀದು ಒಂದನೇದ ಎಂಬ ಅರ್ಧವಲ್ಲ ಎಂತಲೂ, ಒಂದನೇದು ಎಂದು ಮೊಳಕೈಯ ಬುಡವನ್ನು ತಿಕ್ಕಿದ ಎರ ಡನೇ ಕ್ಷಣದಲ್ಲಿ ಕಾಣುವಂಥಾದ್ದು ಎಂತಲೂ ಹೇಳುತ್ತದೆ ಇದೆಲ್ಲಾ ನನಗೆ ಒಹು ಶೋಚ ಸೀಯವಾಗಿ ಕಾಣುತ್ತದೆ ಅಶಾಸ್ತ್ರೀಯವಾದ್ದು ನಮ್ಮ ಶಾಸ್ತ್ರದಲ್ಲಿ ಕಾಣುತ್ತದೆಂದರೆ ನಮಗೆ ಅಪಮಾನ ಎಂಬ ಅನುಚಿತಭಾವ ಅಥವಾ ದುರ್ವಾತೃ ಈ ಉದ್ಯಮಕ್ಕೆ ಕಾರಣವಾಗಿರ ಬೇಕು ಮೂರು ಬೆರಳುಗಳ ಅಡಿಯಲ್ಲಿಯೂ ಏಕರೀತಿಯಾಗಿರುವ ಒಡಿತಗಳೊಳಗೆ ಒಂದ ನೇದು ಯಾವದು ಎಂಬದನ್ನು ಗೊತ್ತುಮಾಡುವದು ಅಸಾಧ್ಯ ಎಂಬ ಗ್ರಹಿಕೆ ಆ ಪಕ್ಷದ ಪಂಡಿತರಿಗೆ ಹುಟ್ಟದೆ, ಹುರಿಯುವ ಬಾಣಲನ್ನು ಬಿಟ್ಟು ಉರಿಯುವ ಬೆಂಕಿಗೆ ಹಾರುವ ಪ್ರಯತ್ನವನ್ನು ಅವರು ಮಾಡುವದು ಆಶ್ಚರ್ಯ ಶಬ್ದಕಲ್ಪದ್ರುಮವು ಕೊಡುವ ಸಮಾ ಧಾನವು ಹಾಸಾಸ್ಪದವಾದದ್ದು. ಯಾಕೆಂದರೆ ಮೊಳಕೈಯ ಬುಡವನ್ನು ತಿಕ್ಕಿಕೊಳ್ಳ ಬೇಕೆಂಬದು ಅಗತ್ಯವಲ್ಲ; ಅನೇಕ ಆಧರಣೀಯವಾದ ಗ್ರಂಥಗಳು ಈ ತಿಕ್ಕುವಿಕೆಯನ್ನು ಒತ್ತಲೇ ಇಲ್ಲ; ಹಾಗೆ ತಿಕ್ಕಿದನಂತರದ ಕ್ಷಣವನ್ನು ನಿಶ್ಚಂದಿಸುವದು ಅಸಾಧ್ಯ, ಒಮ್ಮೆ ತಿಕ್ಕಿದ 11 A