ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ 41

vvvvvvvvvvvvvvvvvvvvvvvvvvvvvvvvvvvvvvvvvvv

ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು. ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.

 ರಂಗಪುರೀ,           ಇತಿ ವಿಜ್ಞಾಪನಾ.
16-1-17.               H. V, SASTRY.


      ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ.
  ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ 

ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ