ಪುಟ:ನನ್ನ ಸಂಸಾರ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನನ್ನ ಸಂಸಾರ 31

ಳ್ಳುತ್ತ ಕುಳಿತಿದ್ದರು. ನಾನುಹಿತ್ತಲಿನಲ್ಲಿ ಬಟ್ಟೆಯನ್ನೊಗೆದು ಕೊಳ್ಳುತ್ತಿದ್ದೆನು. ನನ ಗಂತೂ ಅವರು ಹಣದ ವಿಷಯದಲ್ಲಿ ಚಿಂತಿಸುತ್ತಿರುವುದು ಸುಳ್ಳೆಂದು ತೋರಿತು. ನಾನು ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇ ಇಲ್ಲ. ಹೀಗೆಯೇ ಹನ್ನೆರಡು ಗಂಟೆಯೂ ಹೊಡೆ ಯಿತು.

           ನಮ್ಮ ಅಕ್ಕ,ಭಾವ, ವಿನಹ ಎಲ್ಲರೂ ಸ್ನಾನಮಾಡಿದ್ದರು.    ನಮ್ಮ ಅಕ್ಕನವರು ನಮ್ಮ ಬೀದಿಯಲ್ಲಿದ್ದ ಜೋಯಿಸರೊಬ್ಬರ ಬಳಿಗೆ  ಹೋಗಿ ಹಣಹೋದ  ವಿಷಯದಲ್ಲಿ ಶಾಸ್ತ್ರವನ್ನು ಕೇಳಿದರಂತೆ ? ಆ ಜೋಯಿಸರೂ ಲೆಖ್ಖ ಹಾಕಿ, ಹಣವು ನಿಮ್ಮ ಮನೆಯಲ್ಲೇ ಇದೆ.   ಇನ್ನು  ಮೂರು  ಗಂಟೆ   ಕಾಲದೊಳಗಾಗಿ ಸಿಕ್ಕಿದರೆ   ಸಿಕ್ಕಬಹುದು.   ಇಲ್ಲವಾ ದರೆ ಅದು   ಸ್ಥಳವನ್ನು ಬಿಟ್ಟು  ಕದಲಿ  ಹೋದೀತು.   ಎಂದು ಹೇಳಿದರಂತೆ !   ನಮ್ಮ ಅಕ್ಕನವರು  ಕೂಡಲೆ  ಬಂದು ಭಾವನವರೊಡನೆ,   ಶಾಸ್ತ್ರದ  ವಿಚಾರವನ್ನು  ಹೇಳಿ ಈಗಲೇ   ಮನೆಯವರೆಲ್ಲರ   ಪೆಟ್ಟಿಗೆಯನ್ನು ಶೋಧಿಸಿದರೆ  ಹಣವು ಸಿಕ್ಕಿಬಿಡುತ್ತದೆ.   ಎಂದು  ಉಲ್ಲಾಸದಿಂದ ಹೇಳಿದರು.     ಸಾಧಾರಣವಾಗಿ  ಎಲ್ಲರ   ಪೆಟ್ಟಿಗೆಯಲ್ಲೂ ಅವರವರು ಹಣವನ್ನಿಟ್ಟು ಕೊಂಡಿರಬಹುದೆಂದು   ಅವರಿಗೆ  ತಿಳಿದಿದ್ದರೂ  ಮನೆಯವ ರೆಲ್ಲರ   ಪೆಟ್ಟಿಗೆಯನ್ನು ಶೋಧಿಸಿಬಿಡಬೇಕೆಂದೂ ಯಾರ ಪೆಟ್ಟಿಗೆಯಲ್ಲಾದರೂ  ಹಣ ವಿದ್ದರೆ ಅದು ತಮ್ಮದೇ  ಎಂದೂ ಗಂಡನೊಡನೆ ಖಂಡಿತವಾಗಿ  ಹೇಳಿದರು.   ಹೆಂಡತಿ ಯಮಾತನ್ನು ಮೀರದೆ,  ನಮ್ಮ ಭಾವನವರು  ತಮಗೆ  ಇಷ್ಟವಿಲ್ಲದಿದ್ದರೂ  ಎಲ್ಲರ ಪೆಟ್ಟಿಗೆಯನ್ನೂ  ಶೋಧಿಸುವ ಕಾರ್ಯಕ್ಕೆ   ಕೈಯಿಟ್ಟರು.   ಎಲ್ಲರ  ಪೆಟ್ಟಿಗೆಯೆಂದರೆ  ಯಾರದು ? ನನ್ನದು,  ತಾತನವರದು. ನಮ್ಮ ಯಜಮಾನರದು.  ತಾತನವರ   ಪೆಟ್ಟಿಗೆಯನ್ನು ಶೋಧಿಸುವ  ಧೈರ್ಯವು  ಆರಿಗೂ ಇಲ್ಲ   ಅತ್ತಮ್ಮನವರಲ್ಲಿ ಪೆಟ್ಟಿಗೆಯೇ ಇರಲಿಲ್ಲ.   ನಮ್ಮ  ಯಜಮಾನರ ಪೆಟ್ಟಿಗೆಯಲ್ಲಿ   ಎರಡಾಣೆ  ಚಿಲ್ಲರೆ  ಮಾತ್ರವೇ ಇದ್ದಿತು.   ಉಳಿದುದು ನನ್ನ ಪೆಟ್ಟಿಗೆ,   ನನ್ನ ಪೆಟ್ಟಿಗೆಯನ್ನು   ಶೋಧನೆಗೆ  ಕಳುಹಬೇ ಕಾಯಿತು.  ನಮ್ಮ   ತಾಯಿಯು ಗುಟ್ಟಾಗಿ  ಕೊಟ್ಟಿದ್ದ 55 ರೂಪಾಯಿಗಳನ್ನೂ ನನ್ನಲ್ಲಿ   ಚಿಲ್ಲರೆಯಾಗಿದ್ದ   5-6   ರೂಪಾಯಿಗಳ  ನಾಣ್ಯವನ್ನೂ ನಮ್ಮ   ಯಜಮಾನರಿಗೂ ಸಹಾ ತಿಳಿಸಿದಂತೆ   ನಾನು ನನ್ನ  ಪೆಟ್ಟಿಗೆಯ ಒಂದು   ಭರಣಿಯಲ್ಲಿಟ್ಟಿದ್ದೇನು.   ಪೆಚ್ಚಳಾದ ನಾನು   ಆ ಭರಣಿಯು  ಎಲ್ಲಿ ಬೈಲಿಗೆ ಬರುವುದೋ, ನಮ್ಮ ತಾಯಿಯು ನನ್ನಲ್ಲಿ  ಗುಟ್ಟಾಗಿ  ಹಣವನ್ನು  ಕೊಟ್ಟಿರುವ   ವಿಷಯವೂ ಎಲ್ಲರಿಗೂ  ಎಲ್ಲಿತಿಳಿದು ಬಿಡುವುದೋ ಎಂಬ ಹೆದರಿಕೆಯಿಂದ,  ನನ್ನಲ್ಲಿದ್ದ   ಭರಣಿಯನ್ನು   ಈಚೆಗೆ   ತೆಗೆದಿಟ್ಟುಕೊಂಡು  ಬರೀಪೆಟ್ಟಿಗೆಯನ್ನು ಮಾತ್ರ ಕಳುಹಿಸಿಬಿಟ್ಟೆನು.   ನಾನು ಪೆಟ್ಟಿಗೆಯ ಬೀಗ