ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32

                  ಕಾದಂಬರಿ ಸಂಗ್ರಹ

ವನ್ನು ತೆರೆದು ಹಣದ ಭರಣಿಯನ್ನು ಬಚ್ಚಿಟ್ಟುದನ್ನು ನಮ್ಮ ಭಾವನವರು ನೋಡುತ್ತಲೇ ಇದ್ದರು. ಬರೀ ಪೆಟ್ಟಿಗೆಯಲ್ಲಿ ಹಣವಿದ್ದೀತೆ ? ನಮ್ಮ ಭಾವನವರು ಬಲವಂತದಿಂದ ನಮ್ಮ ಚಿಕ್ಕ ಮನೆಗೆ ಪ್ರವೇಶಿಸಿ ಅನುಮಾನದಿಂದ ನನ್ನ ಭರಣಿಯನ್ನು ತೆಗೆದುಕೊಂಡು ಅದರ ಮುಚ್ಚಳವನ್ನು ತೆರೆದು ಅದರಲ್ಲಿ ಹಣವಿರುವುದನ್ನು ನೋಡಿ ಆ ಭರಣಿಯನ್ನು ಹಾಗೆಯೇ ತಂದು ಮನೆಯವರೆಲ್ಲರಿದಿರಿಗೂ ಸುರಿದುಬಿಟ್ಟರು. ನನಗೆ ತಲೆ ತಿರುಗಿಹೋಯಿತು. ಮೈ ನಡಗಿಬಿಟ್ಟಿತು. ದಿಕ್ಕೇ ತೋಚದೆ ಹೋದುದು, ಮನೆಯವರೆಲ್ಲರೂ ನನ್ನ ವಿಷಯದಲ್ಲಿ ಬಹು ತಿರಸ್ಕಾರಭಾವವನ್ನು ಪ್ರದರ್ಶಿಸಲಾರಂಭಿಸಿದರು. ಆ ಹಣವನ್ನು ಸುರಿವುತ್ತಿದ್ದಾಗ ನಾನು ಅಳುತ್ತಾ ಬಂದು "ಇದು ನಮ್ಮ ತಾಯಿಯು ಗುಟ್ಟಾಗಿ ನನ್ನ ವಶಕ್ಕೆ ಕೊಟ್ಟಿದ್ದ ಹಣವು. ಇದನ್ನು ನಾನಾರಿಗೂ ತಿಳಿಸದಂತೆ ನನ್ನ ಬಳಿಯಲ್ಲಿಟ್ಟುಕೊಂಡಿದ್ದೆನು. ಅದನ್ನು ನನಗೇ ಕೊಡಿಸ ಬೇಕೆಂದು ” ಬಹು ದೈನ್ಯದಿಂದ ಬೇಡಿಕೊಂಡೆನು. ಆದರೆ ನನ್ನ ಮಾತನ್ನು ಆಗ ಕೇಳು ವವರಾರು ? ನನ್ನಲ್ಲಿ ಹಣವಿದ್ದ ವಿಚಾರವು ಆರಿಗೂ ತಿಳಿದಿರಲಿಲ್ಲ. ನಾನು ಆರಿಗೂ ತಿಳಿಸಿಯೂ ಇರಲಿಲ್ಲ. ನಮ್ಮ ಯಜಮಾನರು ನನ್ನ ವಶಕ್ಕೆ ಹಣವಾವುದನ್ನೂ ಕೊಡು ತ್ತಿರಲಿಲ್ಲವಾದುದರಿಂದಲೂ, ನಮ್ಮ ತಾಯಿತಂದೆಗಳು ಬಹಳ ರಿಕ್ತದೆಶೆಯಲ್ಲಿರುವ ರೆಂಬುದು ಎಲ್ಲರಿಗೂ ತಿಳಿದಿದ್ದುದರಿಂದಲೂ ನನ್ನಲ್ಲಿದ್ದ 55 ರೂಪಾಯಿಗಳೂ ಮತ್ತು ಚಿಲ್ಲರೆ ದುಡ್ಡುಗಳೂ ಕಳುವಿನ ಮಾಲೆಂದೂ, ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಇಲ್ಲದೆಯೋದ ಹಣವು ಇದೇ ಸರಿಯೆಂದೂ, ನಾನೇ ಅವರ ಪೆಟ್ಟಿಗೆ ಬೀಗವನ್ನು ಕಳ್ಳ ತನದಿಂದ ತರೆದು ಈ ಹಣವನ್ನು ಕದ್ದವಳೆಂದೂ ಮನೆಯವರೆಲ್ಲರೂ ನಿರ್ಧರಿಸಿದರು. ಹೀಗೆ ನಿರ್ಧರಿಸುವುದಕ್ಕೆ ಯಾರಿಗಾದರೂ ಸ್ವಲ್ಪವಾದರೂ ಸಂದೇಹವಿರಲಿಲ್ಲ. ನಾನು, ನಮ್ಮ ತಾಯಿಯ ಹಣವೆಂದು ಹೇಳುವುದು ಅನೃತವೂ, ಅಪಲಾಪವೂ, ಆದ ಸಂಗತಿ ಯೆಂದು ಎಲ್ಲರೂ ತಿಳಿದು ಕೊಂಡರು. ನಮ್ಮ ತಾಯಿಯು ನನ್ನಲ್ಲಿ ಇಷ್ಟು ಹಣವನ್ನು ಕೊಟ್ಟಿರುವ ವಿಷಯವನ್ನು ನಾನು ನಮ್ಮ ಯಜಮಾನರಿಗೆ ಯಾವಾಗಲೂ ತಿಳಿಸಿರಲಿಲ್ಲ. ಮತ್ತು ಅವರು ಹಿಂದೆ ಒಂದೆರಡುವೇಳೆ ಯಾವುದೋ ಒಂದೆರಡು ಸಮಯಗಳಲ್ಲಿ, “ ನಿನ್ನಲ್ಲಿ ಹಣವೇನಾದರೂ ಇದ್ದರೆ ಹದಿನೈದು ರೂಪಾಯಿಗಳನ್ನು ಕೊಟ್ಟಿರು ” ಎಂದು ಕೇಳಿದ್ದರು. ಹೀಗೆ ಅವರು ಕೇಳಲು, ಹೆಣ್ಣು ಮಕ್ಕಳಿಗೆ ತಾಯಿತಂದೆಗಳು ಏನಾದರೂ ಕೊಂಚ ದುಡ್ಡನ್ನು ಕೊಡುವ ಪದ್ಧತಿ ಲೋಕರೂಢಿಯಾದುದರಿಂದಲೂ ಮದುವೆ, ಆರತಿ, ಓದಿಸುವುದು, ಮುಂತಾದ ಸಮಯಗಳಲ್ಲಿ ಹೆಣ್ಣು ಮಕ್ಕಳಿಗೆ ಬಂದ ರೂಪಾಯಿ