ಪುಟ:ನನ್ನ ಸಂಸಾರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ 33 ಗಳನ್ನು ಗಂಡನ ಮನೆಗೆ ಹೋಗುವಾಗ ಅವರ ವಶಕ್ಕೆ ಕೊಡುವ ರೂಢಿ ಇರುವುದರಿಂದಲೂ ಈ ಊಹೆಯಿಂದ ನನ್ನನ್ನು ಯಜಮಾನರು ಹಣವನ್ನು ಕೇಳಿದರು. ಆ ಸಮಯಗಳಲ್ಲಿ ನಾನು ನನ್ನಲ್ಲಿ ಹಣವೆಲ್ಲಿಂದ ಬರಬೇಕು ? ಎಂದು ಉತ್ತರವನ್ನು ಹೇಳಿಬಿಟ್ಟೆನು. ಅವರು ಸುಮ್ಮನಾಗಿ ಬಿಟ್ಟಿದ್ದರು. ಹೀಗಿರುವಲ್ಲಿ ನನ್ನ ಪೆಟ್ಟಿಗೆಯಲ್ಲಿ ಈಗ 56 ರೂಪಾಯಿಗಳಿರುವುದೂ ಮತ್ತು ಭಾವನವರ ಪೆಟ್ಟಿಗೆಯಲ್ಲಿ 60 ರೂಪಾಯಿಗಳು ಮಾಯವಾಗಿರುವುದೂ ಪೆಟ್ಟಿಗೆಯನ್ನು ಶೋಧಿಸಬೇಕೆಂದು ಹೇಳಿದಾಗ ನಾನು ಹಣದ ಭರಣಿಯನ್ನು ಮುಚ್ಚಿಟ್ಟುಕೊಂಡು ಬರೀಪೆಟ್ಟಿಗೆಯನ್ನು ಕಳುಹಿಸಿದುದೂ, ತದುತ್ತರಕ್ಷಣದಲ್ಲಿಯೇ ನನ್ನ ಹಣದ ಭರಣಿಯು ಈಚಿಗೆಬಂದು ಎಲ್ಲರಿದಿರಿಗೂ ಹಣವು ಸುರಿಯಲ್ಪಟ್ಟುದೂ, ಇತ್ಯಾದಿ ವಿಷಯಗಳು ನಾನು ಕದ್ದವಳೆಂದು ತೋರ್ಪಡಿಸಲು ಸಾಕ್ಷೀಭೂತವಾಗಿದ್ದುವು. ಇಂತಹ ಮಹದಪರಾಧವು ನನ್ನಿಂದ ಮಾಡಲ್ಪಟ್ಟಿತೆಂದು ತಿಳಿದಮೇಲೆ ನಮ್ಮ ಯಜಮಾನರ ಮನಸ್ಸಿನಲ್ಲಿ ಇಂತಹ ಭಾವವು ಉತ್ಪನ್ನವಾಗಿರಬಹುದು ? ಅಲ್ಲದೆ ನಾನು ಅವರನ್ನು ಆಗಿಂದಾಗ್ಗೆ,ಒಡವೆ, ಸೀರೆಗಳಿಗಾಗಿ ಬಹುವಾಗಿ ಪೀಡಿಸುತ್ತಿದ್ದುದನ್ನು ಅವರು ಸ್ಮರಿಸಿಕೊಂಡು, ಬಹು ತೆರನಾಗಿ ನಾನು ಹಣವನ್ನು ಧಾರ್ಷ್ಟ್ಯದಿಂದ ಕದ್ದಿರಬಹುದೆಂದೇ ನಿರ್ಧರಿಸಿ, ಇಂತಹ ಕುಲಗೇಡಿಯಾದ ಹೆಂಡತಿ ಇದ್ದರೇನು ? ಸತ್ತರೇನು ? ಎಂದು ಮನಸಾ ಚಿಂತಿಸಿ, ಸಿಂಹವು ಘರ್ಜಿಸುವಂತೆ, ಆಹ್ನಿಕಮಾಡುತ್ತಿದ್ದ ಸ್ಥಳದಿಂದೆದ್ದು ನನ್ನ ಬಳಿಗೆ ಬಂದು, ಥು ! ದುಷ್ಟಳೆ ; ನಮ್ಮ ಕುಲಕ್ಕೂ ನಮ್ಮ ಮರ್ಯಾದೆಗೂ ನನಗೂ ಕಳಂಕವನ್ನು ತಂದೆಯಾ ! ನೀನು ಈ ಕ್ಷಣ ನಾಶವಾಗಿ ಹೋಗು, ಎಂದು ಆರ್ಭಟಿಸಿ ತಮ್ಮ ವಾಮಪಾದದಿಂದ ನನ್ನನ್ನು ಬಲವಾಗಿ ತಾಡನಮಾಡಿಬಿಟ್ಟರು. ನಾನು ಆಕ್ಷಣವೇಅಚೇತನಳಾಗಿ ಬಿದ್ದು ಬಿಟ್ಟೆನು.

   ನಾನು ಬಿದ್ದುದನ್ನು ನೋಡಿ ಮನೆಯವರೆಲ್ಲರೂ ಗಾಬರಿಯಾಗಿ ನನ್ನ ಹತ್ತಿರ ಎಂದು ನನ್ನ ಸ್ಥಿತಿಯನ್ನು ನೋಡಿ ನನ್ನನ್ನು ಪಚರಿಸ ತೊಡಗಿದರು. ಮತ್ತು ನಮ್ಮ ಯಜಮಾನರು ನನ್ನ ಬಳಿಗೆಬಂದು ಎಲ್ಲರನ್ನೂ ತಡೆದು ಪುನಃ ನನ್ನನ್ನು ಹೊಡೆದು ಇಹ ಲೋಕಚ್ಯುತಳನ್ನಾಗಿ ಮಾಡಿಬಿಡಬೇಕೆಂದು ನಿರ್ಧರಿಸಿದರು. ಆದರೆ ಅವರಾಲೋಚನೆಯನ್ನು ನಮ್ಮ ಮನೆಯವರು ಸಾಗಗೊಡಲಿಲ್ಲ. "ಕೋಪದಲ್ಲಿ ಕುಯ್ದ ಮೂಗುಶಾಂತಿಯಲ್ಲಿ ಹತ್ತೀತೇ ?” ಆದುದರಿಂದ ಈ ಹಣವನ್ನು ಅವಳ ತಾಯಿಯು ಇವಳ ವಶಕ್ಕೆ ಕೊಟ್ಟಿದ್ದುದು ನಿಜವೇ ಎಂಬುದನ್ನು ತಿಳಿದಬಳಿಕ ನೀನು ಮುಂದಿನ ಕೆಲಸವನ್ನು ಮಾಡಬಹುದೆಂದು ನಮ್ಮ ಯಜಮಾನರೊಡನೆ ಎಲ್ಲರೂ ಹೇಳಿದರು. ಇಷ್ಟಾದಮೇಲೆ ಅವರು