ಪುಟ:ನನ್ನ ಸಂಸಾರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 34 ಕಾದಂಬರಿ ಸಂಗ್ರಹ

ತಮ್ಮ ಕೆಲಸಕ್ಕೆ ಹೊರಟುಹೋದರು.ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿಟ್ಟೆನು. ನಮ್ಮ ಯಜಮಾನರು ಎದ್ದು "ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?" ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ ಸಿಕೊಂಡೆನು. ಜೀವನಸರ್ವಸ್ವ ! ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ ವಾಗಿರುವುದು ಸುಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ ಅರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ ಆರತಿಗೆ ಹಾಕಿದ್ದ ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ ಕೆಲವು ಚಿಲ್ಲರೆಗಳು, ಇಷ್ಟೂಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು ನನ್ನ ವಶದಲ್ಲಿಟ್ಟುಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡುವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು ಸಂತೋಷವಾಗಿತ್ತು, ಹಣವನ್ನು ಇಟ್ಟುಕೊಂಡಿರುವವರು ಬಹು ದೊಡ್ಡ ಮನುಷ್ಯರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. ನಮ್ಮ ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ