ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಯಾವಾಗಲೂ ಹೇಳಲಿಲ್ಲ. ಹಾಗೆ ಹೇಳಿದ್ದರೆ ಈದಿನ ನನಗೆ ಇಂತಹ ಅವಸ್ಥೆಯ ಉಂಟಾಗುತ್ತಿರಲಿಲ್ಲ.ಮತ್ತು ಮುಂದೆ ಇಂತಹ ಅನರ್ಥವುಂಟಾಗುವುದೆಂದು ನನಗೆ ತಿಳಿದೂ ಇರಲಿಲ್ಲ. ಈ ಕಾರಣದಿಂದ ನಾನು ತಮ್ಮಲ್ಲಿ ದೊಡ್ಡ ಅಪರಾಧಮಾಡಿದಂತಾ ಯಿತು. ಯಾವ ಹೆಂಗಸು ಪತಿಗೆ ವಂಚನೆಮಾಡಿ ಅವನ ಅಪ್ಪಣೆಯಿಲ್ಲದೆ.ಅವನಿಗೆ ತಿಳಿಯದಂತೆ, ಇಂತಹ ಸ್ವಾತಂತ್ರವನ್ನು ವಹಿಸುವ ಅವಳಿಗೆ ಇದೇ ವಿಧವಾದ ಗತಿಯಾಗುವುದೆಂಬುದಕ್ಕೆ ನಾನೇ ದೃಷ್ಟಾಂತಸ್ವರೂಪಳಾಗಿ ಪರಿಣಮಿಸಿದೆನು, ಮತ್ತು ತಾಯಿತಂದೆಗಳು ಹೆಣ್ಣು ಮಕ್ಕಳಿಗೆ. ಪತಿಗೆ ಪರತಂತ್ರಳಾಗಿ ಅವನ ಆಜ್ಞಾಧೀನಳಾಗಿ ಅನುವರ್ತಿಸಬೇಕೆಂದೂ ಅವನಿಗೆ ತಿಳಿಸದಂತೆ ಯಾವ ಕೆಲಸವನ್ನೂ ಮಾಡಬಾರದೆಂದೂ ಆತನ ಮನಸ್ಸಿಗೆ ಅಹಿತವಾಗುವ ಕೆಲಸವನ್ನು ಮಾಡಬಾರದೆಂದೂ ವಸ್ತ್ರಾಭರಣಗಳ ವಿಷಯದಲ್ಲಿ ಆತನನ್ನು ಬಲಾತ್ಕರಿಸಿ ಆತನ ಮನಸ್ಸಿಗೆ ಆಯಾಸವನ್ನುಂಟುಮಾಡಬಾರ ದೆಂದೂ ಮುಂತಾದ ವಿಹಿತವಾದ ಸ್ತ್ರೀಧರ್ಮಗಳನ್ನು ಕಲಿಸುವುದನ್ನು ಬಿಟ್ಟು ತದ್ವಿಪ ರೀತವಾದ ಧರ್ಮಗಳನ್ನು ಬೋಧಿಸಿದರೆ ಅಂತಹ ಮಾತಾಪಿತೃಗಳು.ಕುಲನಾಶಕ ರೆಂದೂ.ಮಕ್ಕಳನ್ನು ಹಾಳುಮಾಡಿದವರೆಂದೂ, ಲೋಕಾಪವಾದ ಪಾತ್ರರೆಂದೂ, ಹೇಳಿಕೊಳ್ಳುವರು, ನಮ್ಮ ತಾಯಿತಂದೆಗಳು ನನಗೆ ಸರಿಯಾದ ವಿವೇಕವನ್ನು ಹೇಳದೆ ಇದ್ದುದೇ ನನ್ನ ದುರವಸ್ಥೆಗೆ ಕಾರಣ, ಮತ್ತು ನಾನು ಅವರ ಬೋಧನಾರಹಿತಳಾಗಿ ನಿಮ್ಮ ಬೋಧನೆಯನ್ನು ಗೌರವಿಸದೆ, ನಿಮ್ಮನ್ನು ಆಯಾಸಪಡಿಸುತ್ತಾ ಬಂದುದು, ನಮ್ಮ ತಂದೆತಾಯಿಗಳ ತಪ್ಪಲ್ಲದೆ ನನ್ನ ತಪ್ಪಲ್ಲ. ನಾನಿಂದು ಪತಿದ್ರೋಹಿಯೆಂದೂ, ವಂಚಕಳೆಂದೂ, ದುಷ್ಟಳೆಂದೂ, ತಸ್ಕರಿಯೆಂದೂ ಅಪವಾದವನ್ನು ಹೊರಬೇಕಾಗಿ ಬಂದಿದೆ, ನಾನು ಇಂತಹ ಅಪವಾದವನ್ನು ಧರಿಸಿ ಜೀವಿಸಿದ್ದರೂ ಒಂದೇ, ಮೃತ ಳಾದರೂ ಒಂದೇ, ಆದರೆ ನಾನು ಮರಣಕ್ಕೆ ಹೆದರುವವಳಲ್ಲ, ಅಪವಾದಕ್ಕೆ ಹೆದರು ವವಳು. ನಾನು ನಿರಪರಾಧಿನಿಯೆಂಬುದನ್ನು ಈಗ ನಾನು ಮಾತ್ರ ಬಲ್ಲೆ. ಆ ವಿಧ ವಾದ ನಿರಪರಾಧಿತ್ವವು ನನಗೊಬ್ಬಳಿಗೆ ತಿಳಿದರೆ ಸಾಲದು, ನಾನು ನಿರಪರಾಧಿನಿ ಯೆಂದು ಲೋಕವಿದಿತವಾದರೆ ಆಗ ನಾನು ಜೀವಿಸಿದ್ದರೂ, ಅಥವಾ ಮೃತಳಾದರೂ ಸಾರ್ಥಕ. ಆದುದರಿಂದ ನೀವು ಈ ವಿಷಯವನ್ನು ಪರ್ಯಾಲೋಚಿಸಬೇಕು, ಹೆಂಡತಿ ಯೊಬ್ಬಳು ಅಷವಾದಗ್ರಸ್ತಳಾದರೆ ಅದು ಗಂಡನಿಗೂ ಖಂಡಿತವಾಗಿ ಸಂಬಂಧಿಸಿಯೇ ಸಂಬಂಧಿಸುವುದು, ಅಂತಹ ಹೆಂಡತಿಯ ಮೂಲಕ ಗಂಡನಾದವನಿಗೆ ಇಹಲೋಕ ದಲ್ಲಾಗಲೀ ಪರಲೋಕದಲ್ಲಾಗಲೀ ಶಾಂತಿಯಿಲ್ಲವು, ನಿಮ್ಮಿಂದ ನಾನು ಹತಳಾದರೆ ನಾನು ಪುಣ್ಯವತಿಯೇ ಸರಿ, ಆದರೆ ಸದ್ಭತಿ ನಾನು ಮರಣವನ್ನು ಬಯಸುತ್ತಿಲ್ಲ.