ಪುಟ:ನನ್ನ ಸಂಸಾರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

36 ಕಾದಂಬರಿ ಸಂಗ್ರಹ

ನನ್ನ ತಾಯಿಯ ಹಣವು ಹೋದರೂ ಚಿಂತೆಯಿಲ್ಲ, ನೀವು ಒಮ್ಮೆ ರಂಗಪುರಕ್ಕೆ ಹೋಗಿ ಈ ವಿಷಯವನ್ನು ನಮ್ಮ ತಾಯಿಯ ಸಂಗಡ ವಿಚಾರಿಸಿರಿ, ನಮ್ಮ ತಾಯಿಯು ಇದರೊಡನೆ ಒಂದು ಕಂಠಾಭರಣವನ್ನು ಗುಪ್ತವಾಗಿ ಕೊಟ್ಟರು. ಬಳಿಕ ಅವರು « ನಾನು ಹಣವನ್ನಾಗಲೀ ಒಡವೆಯನ್ನಾಗಲೀ ಕೊಟ್ಟವಳಲ್ಲವೆಂದು ಹೇಳಿದರೆ ನನ್ನನ್ನು ತಾವು ಬೇಕಾದಹಾಗೆ ಶಿಕ್ಷಿಸಬಹುದು. ನೀವು ರಂಗಪುರಕ್ಕೆ ಹೋಗಿ ನಮ್ಮ ತಾಯಿಯವರನ್ನು ಕುರಿತು ಈ ವಿಷಯವನ್ನು ಹೇಗೆ ಕೇಳಬೇಕೋ ಹಾಗೆ ಪ್ರಶ್ನೆ ಮಾಡಿ ನಿಮ್ಮ ನಂಬಿಕೆಯನ್ನು ಸ್ಥಿರಮಾಡಿಕೊಳ್ಳಿರಿ. ಇದರಲ್ಲಿ 55 ರೂಪಾಯಿಗಳು ಮಾತ್ರ ನಮ್ಮ ತಾಯಿಯದು, ಮುಖ್ಯವಾಗಿ ನಾನು ಇದುವರೆಗೂ ಪಾದಸನ್ನಿಧಿಯಲ್ಲಿ ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ರವನ್ನು ನಿಮ್ಮ ಉತ್ತರ ಬಂದಮೇಲೆ ಮಾಡಿ ಕೊಳ್ಳುವೆನು ಎಂದು ವಿಧವಿಧವಾಗಿ ಪ್ರಾರ್ಥಿಸಿಕೊಂಡೆನು. ನಾನೆಷ್ಟು ವಿಧವಾಗಿ ಬೇಡಿಕೊಳ್ಳುತ್ತಿದ್ದರೂ ಯಜಮಾನರಿಗೆ ಆದಿನವೆಲ್ಲಾ ಸ್ವಲ್ಪವೂ ಮನಶ್ಯಾಂತಿಯಿಲ್ಲದೆ ಹೋಯಿತು, ನನ್ನನ್ನು ಆದಿನ ಅವರು ಪದೇಪದೇ ಬೆತ್ರಗಳಿಂದ ಹೊಡೆಯುತ್ತಲೂ ತಿರಸ್ಕಾರ ಪೂರ್ವಕವಾದ ಬೈಗಳನ್ನು ಬೈಯುತ್ತಲೂ ನನ್ನ ಮುಖವನ್ನು ನೋಡಿ ಹಣಹಣೆ ಚಚ್ಚಿಕೊಳ್ಳುತ್ತಲೂ ಇದ್ದರು. ರಾತ್ರಿ ಒಂಭ ತುಗಂಟೆಯಾಯಿತು. ಎಲೆಯ ಮುಂದೆ ಕುಳಿತು ಯಜಮಾನರು ತುತ್ತನ್ನೆತ್ತಿದರು. ಒಂದೆರಡು ತುತ್ತನ್ನು ತಿನ್ನುವುದರೊಳಗಾಗಿ ನಾನು ಅವರ ಮುಂದೆ ಹೋದೆನು. ಅಯ್ಯೋ ! ತಿಳಿಗೇಡಿಯೇ, ನನ್ನನ್ನು ಹಾಳುಮಾಡಿದೆಯಾ, ನನ್ನ ಸುಖಕ್ಕೆ ಮುಳ್ಳನ್ನೇ ತಂದೊಡ್ಡಿದೆಯಾ ! ಎಂದು ಹೇಳಿ ಎಲೆಯನ್ನು ಬಿಟ್ಟಿದ್ದು ಕೈತೊಳೆದುಕೊಂಡು ಮನೆ ಯವರಾರಿಗೂ ಹೇಳದೆ ಮನೆಯನ್ನು ಬಿಟ್ಟು ಎಲ್ಲಿಗೋ ಹೊರಟುಹೋದರು. ನನಗೂ ಆದಿನ ಅನ್ನವೇ ಸೇರಲಿಲ್ಲ. ರಾತ್ರಿ ನಿದ್ದೆಯೂ ಬರಲಿಲ್ಲ, ಪತಿಗೆ ವಂಚನೆಮಾಡಿ ಅವರಿಗೆ ತಿಳಿಸದೆ ಹಣವನ್ನಿಟ್ಟುಕೊಂಡಿದ್ದುದು ಇಷ್ಟು ಅನರ್ಥಕ್ಕೆ ಗುರಿಯಾಯಿತೆ ! ಈ ಹಾಳುಹಣದಿಂದ ಇಂತಹ ಭಯಂಕರ ಸಂಘಟನೆಯು ಸಂಭವಿ ಸಿತೇ ಎಂದು ಹೇಳುತ್ತಾ ಹಣವನ್ನು ಕುರಿತು ಇಂತು ವಿವರಿಸತೊಡಗಿದೆನು. ಎಲೈ ಹಣವೆ ! ನೀನೇ ಮನುಷ್ಯನ ಜೀವಿತಸಾರವೆಂದು ಹೇಳುವ ಪಕ್ಷದಲ್ಲಿ ನಿನಗೆ ಇಹಪರ ಸೌಖ್ಯವನ್ನುಂಟುಮಾಡುವ ಶಕ್ತಿ ಇರಬೇಕು. ನಿನ್ನ ಅನುಗ್ರಹವಿಲ್ಲದಿದ್ದರೆ ಮನುಷ್ಯನ ಜನ್ಮ ವ್ಯರ್ಥ, ಇಹಲೋಕದಲ್ಲಿ ಸುಖವನ್ನು ಪಡೆಯಬೇಕಾದರೆ ನೀನೇ ಸಹಾಯ ಮಾಡಬೇಕು, ಪರೋಪಕಾರ, ದಾನ, ಧರ್ಮಗಳ ಮೂಲಕ ಪರಲೋಕವನ್ನು ಹೊಂದುವುದಕ್ಕೂ ನಿನ್ನ ಸಾನ್ನಿಧ್ಯವು ಇರಬೇಕು, ಆದರೆ ನಿನ್ನಿಂದ ಎಷ್ಟು ಪ್ರಯೋಜ