ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩vv ಯುನನ ಯಾಮಿನೀ ವಿನೋದ ಎಂಬ, ಆತನಸಂಗಡ ಮಾತನಾಡುತ್ತಿರುವಾಗ, ಏಜೇಬನು ಅಯಾ ! ಇಲ್ಲಿ ಬಾ ! ಎಂದು ಕರೆಯಲು, ಬದರದೀನನು ತ್ಯಾನಂದದಿಂದಾಜನ್ನುತಟ್ಟಿಯಬy ಯಲ್ಲಿ ಕುಳಿತುಕೊಂಡು, ಆತನನ್ನು ಆಲಿಂಗಿಸಿಕೊಳ್ಳುವುದಕ್ಕೆ ಹೋದನು. ಆಗ ಏಜೇಬನು ಸುಮ್ಮನಿರು, ನೀನು ದೂರವಾಗಿ ಕುಳಿತು ಮಾತನಾಡು ವುದೇ ಸಾಕೆಂದು ಹೇಳುತ್ತಾ ತಾನೆ ಮಾಡಿದ್ದ ಮೊದಲಿಗಿಂತಲೂ ರುಚಿಕರ ನಾಗಿದ್ದ ವಿಠಾಯಿ ಮೊದಲಾದ ಭಕ್ಷ್ಯಗಳನ್ನು ಅವರಿಬ್ಬರೂ ತಿಂದು ಸಂತೋಷಯುಕ್ತರಾಗಿ ಕೈತೊಳೆದುಕೊಂಡು ಕುಳಿತರು. ಆಗ ಬದರೋ ದೀನನು, ಅತ್ಯುತ್ತಮವಾದ ಗುಲಾಬಿಹೂವಿನ ಸರಬತ್ತಿಗೆ ತಂಪಾದ ಮಂಜಗಡ್ಡೆಯನ್ನು ಸೇರಿಸಿ, ತೆಗೆದುಕೊಂಡುಬಂದು, ಅಯಾs ! ರಾಜ ಪುತ್ರ ! ಈ ದೇಶದಲ್ಲಿ ಇದು ಅತ್ಯುತ್ಕೃಷ್ಮವಾದ ಪಾನಕವಾಗಿರುವುದು. ಇಂಥಾದ್ದನ್ನು ನೀನು ಯಾವಾಗಲೂ ಕುಡಿದವನಲ್ಲ. ಇದನ್ನು ಕುಡಿದು ನೋಡೆಂದು ಕೊಡಲು, ಆತನು ಅದನ್ನು ಕುಡಿದಬಳಿಕ ಬದರೋದೀನನು ಆ ಬಟ್ಟಲನ್ನು ತೆಗೆದುಕೊಂಡು, ಅದರತುಂಬ ಸರಬತ್ತನ್ನು ಹಾಕಿ, ನಪುಂಸಕಸಿಗೆ ಕೊಟ್ಟು, ಆತನು ಕುಡಿದಬಳಿಕ ತಾನು ಸ್ವಲ್ಪವನ್ನು ಕುಡಿದು ತೃಪ್ತನಾದನು. ಏಜೇಬನು ಮತ್ತು ಆತನ ಕಾವಲಗಾರನೂಸಹ, ಬದರದೀ ನನು ತನಗೆ ಮಾಡಿದ ಉಪಚಾರಕ್ಕಾಗಿ, ಆತನನ್ನು ಬಹಳವಾಗಿ ವಂದಿಸಿ, ಸ್ವಲ್ಪ ಹೊತ್ತು ಅಲೆ ಕುಳಿತುಕೊಂಡಿದ್ದು, ಆತನಿಂದಪ್ಪಣೆಯನ್ನು ತಗೆ ದುಕೊಂಡು, ತಮ್ಮ ಗುಡಾಗದಬಳಿಯನ್ನು ಸೇರಿದರು. ಕೂಡಲೇ ಏಜೀ ಬನು ರಾಣಿವಾಸದವರಿರುವ ಡೇರೆಗೆ ಬರಲು, ಅವನ ಅಮ್ಮನು ತನ್ನ ಮಗನಾದ ಬದರೋದೀನನನ್ನು ನೆನಸಿಕೊಂಡು ವ್ಯಥೆಪಡುತ್ತಿದ್ದುದನ್ನು ತೊರೆದು, ಏಜೇಬನನ್ನು ಆನಂದದಿಂದ ಆಲಿಂಗಿಸಿ ಮುತ್ತಿಟ್ಟುಕೊಂಡು, ನಿನ್ನ ತಂದೆಯನ್ನು ಆಲಿಂಗಿಸಿಕೊಂಡರೆ, ನನ್ನ ಮನೋರಥವು ಪೂರ್ತಿ ಯಾಗುವುದೆಂದು ಹೇಳಿದಳು. ಏಜೀಬನಾದರೂ ತನ್ನ ನಪುಂಸಕ ಸರದಾರ ನನ್ನು ಹತ್ತಿರ ಕುಳಿಸಿಕೊಂಡು, ಬದರೋದೀನನು ತಮಗಮಾಡಿದಉಪ ಚಾರವನ್ನು ಕುರಿತು ಮಾತನಾಡುತ್ತಿರುವಾಗ, ಸರ್ವರೂ ಭೋಜನಕ್ಕೆ, ಹೂರಟರು, ಏಜೇಬನು ತನ್ನ ಜೀಯಸಂಗಡ, ತನಗೆ ಹಸಿವಿಲ್ಲವೆಂದು