ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, v೬ ಮೊದಲಿನಂತೆ ವ್ಯಾಪಾರ ಮಾಡುತ್ತಿರುವುದನ್ನು ಕಂಡು, ಆತನನ್ನು ಕುರಿತು ಸಲಾಮಯಾ ! ನೀನು ನನ್ನನ್ನು ಯಾವಾಗಲಾದರೂ ನೋಡಿರುವೆಯಾ ? ನನ್ನ ಗುರುತು ನನಗಿರುವುದೇ ಎಂದುಕೇಳಲು, ಆತನು ಹಿಂದಿರುಗಿ ನೋಡಿ ಆತನನ್ನು ನೋಡಿದಕೂಡಲೆ, ತನ್ನಲ್ಲಿ ಹುಟ್ಟಿದ ಪುತ ವಾತ್ಸಲ್ಯದಿಂದ ಸ್ವಲ್ಪ ಹೊತ್ತು ಮಾತನಾಡದೆ, ಸುಮ್ಮನಿದ್ದು, ಆಯಾ ! ಪ್ರೀತಿಪಾತ್ರ ನಾದ ರಾಜಕುಮಾರನೇ ! ನೀನು ಮೊದಲಿನಂತೆ ದಯಮಾಡಿ, ನನ್ನ ಅಂಗಡಿ ಯಲ್ಲಿ ಈಗಲೂ ಸ್ವಲ್ಪ ತಿಂಡಿಯನ್ನು ತಿಂದು ಹೋಗಬೇಕೆಂದು ಬೇಡಿಕೆ ಭುವನು. ಅಲ್ಲದೆ ನಾನು, ಹಿಂದಿನಸಾರಿ ಸ್ವಲ್ಪ ಮಾದಕದ್ರವ್ಯವನ್ನು ಸೇವಿಸಿದ್ದರಿಂದ, ಯುಕ್ತಾಯಕ್ಕ ಜ್ಞಾನವಿಲ್ಲದೆ, ನಡೆಸಿದಂತೆ ಈಗೆಂದಿಗೂ ಮಾಡಲಾರನು. ಆದರೂ ನಿನ್ನಲ್ಲಿ ನನಗುಂಟಾದ ಪ್ರೀತಿವಾತ್ಸಲ್ಯದಿಂದ, ನಾನು ನಿನ್ನ ಬೆನ್ನು ಹತ್ತಿ ಬರಬೇಕಾಯಿತೇಹೊರತು, ನೀನೇ ನನ್ನನ್ನು ಕರೆದುಕೊಂಡು ಹೋದೆ ಎಂದು ಹೇಳಬೇಕಾದುದೇನೂ ಇಲ್ಲವೆಂದು ನುಡಿದ ನೆಂದು ಹೇಳಿ, ಸಹರಜಾದಿ ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಪುನಹಾ ಹೇಳಲಾರಂಭಿಸಿದಳು. - ೧೧೬ ನೆಯ ರತಿ | ಕಥೆ. ವಹರಜಾದಿ ಸುಲ್ತಾನನ್ನು ಕುರಿತು, ಪ್ರಿಯರೇ ! ಗಯವರನು ಕಟೀಫನನ್ನು ಕುರಿತು, ಮತಿಂತಂದನು :..ಹೀಗೆ ಹೇಳಿದ ಬದರೋದೀನ ನನ್ನು ನೋಡಿ ಏಜೇಬನು ಅಯಾ ! ನೀನು ನನ್ನಲ್ಲಿ ತೋರಿಸುವ ಕರು ಣವು ಸಾಮಾನ್ಯವಾದುದಕ್ಕಿಂತಲೂ, ಅತಿಶಯವಾಗಿರುವುದರಿಂದ, ನನ್ನ ಬೆನ್ನುಹತ್ತಿ ಬರುವದಿಲ್ಲವೆಂದು, ನೀನು ಹೇಳಿದರು ನಾನು ಅಂಗಡಿ ಯೊಳಕ್ಕೆ ಬರುವುದಿಲ್ಲ. ನನ್ನ ತಾತನಾದ ಮಂತ್ರಿಯು, ಈಜಿಫ್ಟ್ ದೇಶದ ಸುಲ್ತಾನರಿಗೆ, ಬೇಕಾಗುವ ಸಾಮಾನುಗಳನ್ನು ಕೊಳ್ಳುವುದಕ್ಕಾಗಿ ಇನ್ನು ಮೂರು ದಿನಗಳು ಇ ಇರುವನು, ಆದುದರಿಂದ ಪುನಹ ನಾನು ನಿನ್ನನ್ನು ನೋಡುವೆನೆಂದು ಹೇಳಲು, ಬದರೊಟೀನನು, ನಿನ್ನ ಇಷ್ಟಾನುಸಾರವಾಗಿ, ನಡೆವುದಕ್ಕೆ ಸಿದ್ಧನಾಗಿರುವೆನೆಂದುಹೇಳಲು ಕೂಡಲೆ ಅವರಿಬ್ಬರೂ ಅಂಗಡಿಗೆ ಹೋದರು. ಬಳಕ ಒದರೋದೀನನು ಅವರ ಮುಂದೆ ಮಿಠಾಯಿಗಳನ್ನು ತಂದಿಟ್ಟರು. ಅವರು ಅದನ್ನು ತಿನ್ನುತ್ತಾ