ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ವಿಂಬ, ನಾ }ಣವನ್ನೆ ತೆಗೆದ,ಕೊಳ್ಳಬೇಕು! ಹೇಗೆಂದರೆ :=ನಿನ್ನದಿನ ಸಾಯಂಕಾಲ ದಲ್ಲಿ, ನಾನು ಅಂಗಡಿಯಲ್ಲಿ ವಿನೋದವಾಗಿ ಕುಳಿತುಕೊಂಡಿರುವ ಕಾಲದ ಈ ಮನನು ಬಂದು, ನನ್ನ ಎದಿರಿಗೆ ನಿಂತು, ಮನೋಹರವಾಗಿ ಹಾಡಿ ದನು. ನಾನು ಮನೆಗೆ ಕರೆದುಕೊಂಡುಹೋಗುವುದಕ್ಕೆ ಆತನು ಸಮ್ಮತಿಸಿ ದುದರಿಂದ, ನಾವಿಬ್ಬರೂ ಮನೆಗೆ ಹೋಗಿ, ರಾತ್ರಿ ಭೋಜನಮಾಡುವಾಗ ಆತನಿಗೂ ಒಂದು ತಟ್ಟಿಯಲ್ಲಿ ಕೆಲವು ವಿಾನುಗಳನ್ನು ತಂದುಕೊಟ್ಟನು. ಆತನು ಅದನ್ನು ತಿನ್ನುವಾಗ, ಒಂದು ಮೂಳೆಯು ಗಂಟಲಿನಲ್ಲಿ ಸಿಕ್ಕಿಕೊಂ ಡಿತು, ಅದನ್ನು ತೆಗೆಯಬೇಕೆಂದು, ನಾನೂ ನನ್ನ ಹೆಂಡತಿಯ, ನಿಮ್ಮ ಪ್ರಯತ್ನ ಮಾಡಿದರೂ, ಪ್ರಯೋಜನವಿಲ್ಲದೆ, ಈತನು ಸತ್ತುಹೋದನು. ಬಳಿಕ ನಾವು ಹೆದರಿ ಈ ಅಪರಾಧವು ನಮ್ಮಗಳಮೇಲೆ ಬಾರ ದಂತೆ ಮಾಡಬೇಕೆಂದು, ನಾನೂ ನನ್ನ ಹೆಂಡತಿಯ ಸಹ, ಈತನನ್ನು ತೆಗೆದುಕೊ ಡುಬಂದು, ಈ ವೈದ್ಯನ ಮನೆಯಬಾಗಿಲಲ್ಲಿ ಕುಳಿತಿರುವಾಗ, ಈತನ ದಾದಿಯು, ಹೊರಗೆ ಬಂದಳು. ಆಕೆಯನ್ನು ನೋಡಿ, ಅಮಾ ! ನಿಮ್ಮ ವೈದ್ಯರನ್ನು ಬರಹೇಳಿ, ಅವರಿಂದ ಚಿಕಿತ್ಸೆ ಮಾಡಿಸುವುದಕ್ಕಾಗಿ ಒಬ್ಬ ರೋಗಿಯನ್ನು ಕರೆದುತಂದಿರುವೆವೆಂದು ಹೇಳಿ, ಒಂದು ಮೊಹರಿ ನಾಣ್ಯವನ್ನು ಕೊಟ್ಟನು. ಆಕೆಯು ಒಳಗೆ ಹೋದಕೂಡಲೆ, ನಾವು ಈ ಹಣವನ್ನು ಹಂತದವೆಲೆ ಮಲಗಿಸಿ ಯಾರಿಗೂ ತಿಳಿಯದಂತೆ ಹೊರಟು ಹೋದೆವು. ಬಕ ವೈದ್ಯನು ಒಂದು ಹಂತದವೇಲಿದ್ದ ಈ ಹಣವನ್ನು ತಾನು ತುಲ್ಲದುದರಿಂದ, ತಾನೆ ಕೊಂದನೆಂದು ತಿದುಕೊಂಡನು. ಆದುದರಿಂದ ಈ ವೈದ್ಯನನ್ನು ಕೊಲ್ಲದೆ, ನನ್ನ ಪ್ರಾಣವನ್ನು ಮಾತ್ರ ) ತೆಗೆದುಕೊಳ್ಳ ಬೇಕಾಗಿರುವುದು ಎಂದು ಹೇಳಲು, ಅಲ್ಲಿ ನೆರೆದಿದ್ದವರೆಲ್ಲರೂ, ಆ ಗೂನು ಮನುಷ್ಯನ ಮರಣಕಾರಣಗಳೆನ್ನು ಕುರಿತು, ಆಶ್ರಯುಕರದದು. ನ್ಯಾಯಾಧಿಪತಿಯು, ತಾನು ಮಾಡಿದ ತಪ್ಪನ್ನು ತಾನೇ ಒಪ್ಪಿಕೊಳ್ಳು ತಿರುವುದರಿಂದ, ವೈದ್ಯನನ್ನು ಬಿಟ್ಟು, ಈ ದರ್ಜೆಯವನನ್ನು ಗಲ್ಲಿಗೆ ಹಾಕೆಂದು ಹೇಳಿದನು. ಕೂಡಲೆ, ಕೊಲೆಗಾರನು ಆತನನ್ನು ಗಲ್ಲಿಗೆ ಎತ್ತುವುದಕ್ಕೆ ಸಿದ್ಧನಾದನೆಂದು ಹೇಳಿ, ಬೆಳಗಾದಡಲೆ ಕಥೆಯನ್ನು ನಿಲ್ಲಿಸಿ, ಬೆಳಗಿನ ಜೆವದಲ್ಲಿ ಪುನಹ ಹೇಳಲಾರಂಭಿಸಿದಳು. - **