ಪುಟ:ಉಮರನ ಒಸಗೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಕಾಗಿ ಆ ಸಂಘದ ಅಧಿಕಾರಿಗಳಿಗೆ ಮಾತ್ರವೇ ಅಲ್ಲದೆ, ಇತರ ರೀತಿಗಳಲ್ಲಿಯೂ ನನಗೆ ಪ್ರೋತ್ಸಾಹ ಸಹಾಯಗಳನ್ನು ಕೊಟ್ಟರುವುದಕ್ಕಾಗಿ ಅವರಲ್ಲೊಬ್ಬರಾದ ನನ್ನ ಮಿತ್ರರು ಶ್ರೀ ಮಾನ್ ಎ. ಆರ್. ಕೃಷ್ಣಶಾಸ್ತ್ರಿಗಳವರಿಗೆ ನನ್ನ ಮನಃಪೂರ್ವಕವಾದ ವಂದನೆಗಳು ಸಲ್ಲತಕ್ಕುವಾಗಿವೆ.

⁠ಈ ಪುಸ್ತಕದ ವಿಶೇಷ ಆಕರ್ಷಣೆಯು ಇದರ ಚಿತ್ರಗಳ ಸೌಂಧರ್ಯದಲ್ಲಿರತಕ್ಕುದು. ಇವುಗಳನ್ನೊದಗಿಸಿರುವವರು ಮೂವರು ಮಹಾಶಯರು : ಕರ್ಣಾಟಕ ಶಿಲ್ಪವೈಭವ ಪ್ರಕಾಶಕರೂ ನನ್ನ ಮಿತ್ರರೂ ಆದ ಶ್ರೀಮಾನ್ ಜಿ. ವೆಂಕೋಬರಾಯರವರ, ಉಮರನ ಭಾವಚಿತ್ರವನ್ನೂ , ಮುಖಪತ್ರದ ಚಿತ್ರವನ್ನೂ ತಯಾರುಮಾಡಿಕೊಟ್ಟಿದ್ದಾರೆ. ಬೊಂಬಾಯಿ ಪಟ್ಟಣದ "ಟೈಮ್ಸ್ ಆಫ಼್ ಇಂಡಿಯಾ" (The Times of India) ಎಂಬ ಪ್ರಸಿದ್ದ ಇಂಗ್ಲಿಷ್ ವೃತ್ತ ಪತ್ರಿಕೆಯ ಅಧಿಪತಿಗಳು ತಮ್ಮ ಸುಂದರಗಳಾದ ವಾರ್ಷಿಕ ಸಂಚಿಕೆಗಳಲ್ಲಿ ಪ್ರಚುರವಾಗಿರುವ ಮೂರು ಚಿತ್ರಪಟಗಳ ಪಡಿಯಚ್ಚನ್ನು ತಯಾರುಮಾಡಿಸಿ ಉಪಯೋಗಿಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ. ಬೊಂಬಾಯಿ ಪಟ್ಟಣದಲ್ಲಿರುವ ಉಮರ್ ಕಾವ್ಯಾಭಿಮಾನಿಗಳಾದ ಶ್ರೀಮಾನ್ ಜೆ. ಇ. ಸಕ್ಲತ್‌ವಾಲ (Mr. J. E. Saklatwalla) ಮಹಾಶಯರು ತಮ್ಮ ಬಳಿ ಇರುವ ಚಿತ್ರಗಳನ್ನು ತೋರಿಸಿ ಅವುಗಳಲ್ಲಿ ಕೆಲವನ್ನು ಉಪಯೋಗಿಸಿಕೊಳ್ಳಲು ನನಗೆ ಅನುಮತಿ ಕೊಟ್ಟಿದ್ದಾರೆ; ಇವುಗಳಲ್ಲಿ ಎರಡನ್ನು ತೆಗೆದುಕೊಂಡಿದೆ. ಈ ಮೂವರ ಉಪಕಾರಗಳೂ ನನ್ನ ಅತ್ಯಂತ ಕೃತಜ್ಞತೆಯನ್ನು ಸಂಪಾದಿಸಿರತಕ್ಕುವು.

ಪ್ರಮೋದೂತ ಸಂ|| ಯುಗಾದಿ,

ಏಪ್ರಿಲ್, ೧೯೩೦.

ಡಿ. ವಿ. ಜಿ.