ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೇದ ಪುರಾಣಗಳಲ್ಲಿ ಭಾರತದ ಹೆಸರು.

೧೧


ಜನ್ಮವೆತ್ತಿ ಬಾಳಿ ಬರಕುವ ಜನರು ಧನ್ಯರೆ೦ದೂ, ಸ್ವರ್ಗ, ಮುಕ್ತಿ ಮೊದಲಾದವುಗಳು ಅವರಿಗೆ ಅ೦ಗೈಯೊಳಗಣ ನೆಲ್ಲೀಕಾಯಿಯ೦ತೆ ಸುಲಭ ಎಂದೂ ನಲಿನಲಿದು ಹಾಡಿದ್ದಾರೆ. ಯಾವ ಭರತಖಂಡದೊಳಗೆ ಅವ್ಯಕ್ತನೂ ಆದ ಭಗವಂತನೇ ಅಸಂಖ್ಯಾತವಾದ ಅವತಾರಗಳನ್ನೆತ್ತಿ ಅವತರಿಸಿದನೋ ಯಾವಾತನಿಗೆ ಭಾರತವು ಪ್ರಾಣಕ್ಕಿಂತ ಪ್ರಿಯವಾಗಿರುವದೋ, ಯಾವ ಜನಾ೦ಗದೊಳಗಿನ ಧರ್ಮಕ್ಕಾಗಿ ತಾನು ತಪ್ಪದೆ ಯುಗ ಯುಗಳಲ್ಲಿಯ ಮನುಷ್ಯ ರೂ ಪವನ್ನು ತಾಳಿ ಹುಟ್ಟಿ ಬರುವೆನೆಂದು ಮಾತು ಕೊಟ್ಟಿರುವನೋ, ಆ ಭರತಖಂಡಕ್ಕೆ ಭೂಲೋಕದ ಮೇಲಿನ 'ದೇವಲೋಕ' ವೆಂಬ ದಿವ್ಯವಾದ ಹೆಸರಿನಿಂದ ಕರೆಯಲಿಕ್ಕೆ ಅಡ್ಡಿಯೇನು? ಮತ್ತು ನಾವು ನಮ್ಮ ಪುರಾತನ ಇತಿಹಾಸ ಪುರಾಣಗಳನ್ನು ತೆರೆದರೂ, ಅದರೊಳಗೆ ಇ೦ಥ ಹಲವು ಗೌತವಯುಕ್ತವಾದ ಹೆಸರುಗಳಿಂದ ಭಾರತಕ್ಕೆ ಧನ್ಯವಾದಗಳನ್ನರ್ಪಿಸಿದ್ದಾರೆ. ಮನುಷ್ಯತ್ಯಾದಿಗಳಲ್ಲಿ ಭರತಖಂಡವು ಜಗತ್ತಿನ ಮೇಲಿರುವ ಮಿಕ್ಕ ಜನಾಂಗಗಳಿಗೆ 'ಗುರು' ವೆಂದೂ, ಎಲ್ಲರೂ ಈ ದೇಶದವರಿಂದಲೇ ತಮ್ಮ ತಮ್ಮ ಆಚಾರ ವಿಚಾರಗಳನ್ನು ಕಲಿಯತಕ್ಕದ್ದೆಂದೂ ಮನುಋಷಿಯ ಅಜ್ಜಿ. ಈ ಉಪನಿಷದಾದಿಗಳಲ್ಲಿ ಇಣಕಿ ಹಾಕಿದರ೦ತೂ, ಭಾರತಿಯರಿಗೆ ಹಲವೆಡೆಯಲ್ಲಿ 'ಅಮೃತಪುತ್ರ' ರೆಂದು ಸಂಬೋಧಿಸಿದ್ದನ್ನು ಕ೦ಡರಂತೂ ಸಾತ್ವಿಕ ಆವೇಶ ವಿಶೇಷದಿ೦ದ ಮೈ ಪುಲಕಿತವಾಗುತ್ತದೆ. 'ಅಮೃತ ಪುತ್ರ' ರೆಂದರೆ 'ಸಾವಿಲ್ಲದವರೆಂದರ್ಥ', ಮನುಷ್ಯನ ದೇಹಕ್ಕೆ ಸಾವು; ಆತ್ಮಕ್ಕಲ್ಲವೆಂಬ ಅಮೃತತತ್ವವನ್ನು ಕಂಡು ಹಿಡಿದು, ಅದನ್ನು ಪ್ರಚುರಗೊಳಿಸಿದ ಭಾರತ ಜನಾ೦ಗಕ್ಕೆ ಈ ಹೆಸರು ಸಲ್ಲದೆ ಇನ್ನಾರಿಗೆ ಸಲ್ಲಬೇಕು? ಅರ್ಥಾತ್, ಭರತಖಂಡವೆಂದರೆ ದೇವಲೋಕವು; ಭರತಖಂಡವೆಂದರೆ ಮುಕ್ತಿಕಾ೦ತೆಕೈಗೂಡುವ ಬೀಡು; ಭರತಖ೦ಡವೆಂದರೆ ಜಗತ್ತಿನ ಗುರುವು; ಅಮೃತಪುತ್ರರ ತವರ್ಮನೆಯು !