ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-247-

                                                        ಆ XII
   ಚಾ ಎಲೆಯನ್ನಾಗಲಿ, ಕಾಫಿ ಬೀಜವನ್ನಾಗಲಿ, ಅತಿಯಾಗಿ ಉಪಯೋಗಿಸಿ ತಯಾರಿಸಿದ ಪಾನಕವನ್ನು ಸೇವಿಸುವದರಿಂದ ಅಮಲು ಉಂಟಾಗುತ್ತದೆ. ಚಾ ಎಲೆಯಲ್ಲಿ ಶತಾಂಶ 3ರಿಂದ 6ರ ವರೆಗೆ 'ಧೇಯಿನ್' ಎಂಬ ವಿಷವಸ್ತು ಇರುತ್ತದೆ. ಒಂದು ಚಾ ಚಮಚೆ ಎಲೆಯಲ್ಲಿ 2 ಗುಲುಗುಂಜೀ ತೂಕದಿಂದ 3.5- ಗುಲುಗುಂಜೀ ತೂಕದ ವರೆಗಿನಷ್ಟು ಆ ವಿಷ ಇರುತ್ತದೆ. ಎರಡು ತಟ್ಟೆ ಚಾ ಪಾನಕದಲ್ಲಿ ಸುಮಾರು 5 ಗುಲುಗುಂಜಿಯಷ್ಟು ವಿಷವಿರುವದು; ಈ ವಿಷ ಬೆಕ್ಕು, ಮೊಲ ಮುಂತಾದ ಚಿಕ್ಕ ಪ್ರಾಣಿಯನ್ನು ಕೊಲ್ಲುವದಕ್ಕೆ ಸಾಕು. ಆರು ತಟ್ಟೆ ಪಾನಕದಲ್ಲಿರುವ ವಿಷವು ಒಬ್ಬ ಮನುಷ್ಯನಲ್ಲಿ ಮೂರ್ಛಯನ್ನುಂಟುಮಾಡುವದಕ್ಕೆ ಸಾಕು. ಅದಕ್ಕೆ ಸ್ವಲ್ಪ ಕಡಿಮೆಯಾಗಿ ಸೇವಿಸಿದರೆ, ನರಗಳು ಕೆದರಿ, ನಿದ್ರೆಯಿಲ್ಲದಿರುವಿಕೆ, ಹರಟುತ್ತಿರುವದು, ಇತ್ಯಾದಿ ದೋಷಗಳು ಕಾಣುವವು ಕಾಫಿಯಲ್ಲಿ 'ಧೇಯಿನ್' ಎಂಬದಕ್ಕೆ ತುಲ್ಯಗುಣವಿರುವ 'ಕಾಫೀಯಿನ್' ಎಂಬ ವಿಷವಿರುತ್ತದೆ ಈ ವಿಷ ಶತಾಂಶ ಪ್ರಮಾಣದಲ್ಲಿ ಧೇಯಿನಿನಷ್ಟು ಇಲ್ಲದಿದ್ದಾಗ್ಯೂ. ಪಾನಕಕ್ಕೆ ಚಾ ಎಲೆಗಿಂತಲೂ ಕಾಫಿಪುಡಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರಾದ್ದರಿಂದ, ಸಾಧಾರಣವಾಗಿ ಒಂದು ತಟ್ಟೆ ಪಾನಕದಲ್ಲಿರುವ ವಿಷವು, ಯಾವದಾದರೂ, ಸಮತೂಕವಾಗಿರುವದು. ಇದಲ್ಲದೆ, ಕಾಫಿಬೀಜದಲ್ಲಿಯೂ, ಚಾ ಎಲೆಯಲ್ಲಿಯೂ, 'ಟ್ಯೇನಿನ್' ಎಂಬ ವಸ್ತುವು ಇರುತ್ತದೆ; ಅದು ಆಮಾಶಯದಲ್ಲಿ ಜೀರ್ಣಕ್ಕೆ ಬೇಕಾದ ಹುಳಿರಸವು ಸಾಕಷ್ಟು ಹೊರಡದಂತಯೂ, ಹೊರಟ ರಸವು ಬಲ ಹೀನವಾಗುವಂತೆಯೂ ಮಾಡುವ ಗುಣವುಳ್ಳದ್ದಾಗಿರುತ್ತದೆ ಒಟ್ಟಾರ ಈ ಎರಡು ಜಾತಿಯ ಪಾನಕಗಳಿಂದಲೂ ಜೀರ್ಣಶಕ್ತಿಗೂ, ನರಗಳಿಗೂ, ಮೆದುಳಿಗೂ, ಬಹಳ ಬಾಧಕವಿರುತ್ತದೆ; ಮತ್ತು ಆ ಪಾನಕಗಳಿಗೆ ಕೂಡಿಸುವ ಹಾಲು, ಸಕ್ಕರೆ, ಅಧವಾ ಬೆಲ್ಲ ಅಲ್ಲದೆ ಬೇರೆ ಆಹಾರ ಭೂತವಾದದ್ದು ಯಾವದೂ ಅವುಗಳಲ್ಲಿ ರುವದಿಲ್ಲ 'ಕೋಕೋ' ಎಂಒದರಲ್ಲಿಯೂ 'ಧಿಯೊ ಬ್ರೊಮೈನ್' ಎಂಬ ಧೇಯಿನಿಗೂ, ಕಾಫೇಯಿನಿಗೂ ಸದೃಶವಾದ ವಿಷವಿರುತ್ತದೆ. ಆದರೆ ಅದರೊಂದಿಗೆ ಸ್ನಿಗ್ಧ ಪದಾರ್ಧವಿರುವದರಿಂದ, ಅದು ಸ್ವಲ್ಪಮಟ್ಟಿಗೆ ಆಹಾರವಾಗಿ ಪರಿಣಮಿಸು ವದೆಂತಲೂ, ಕಾಫಿ ಮತ್ತು ಚಾಯೊಲೆಯಷ್ಟು ಬಾಧಕಕರವಲ್ಲವೆಂತಲೂ ಕೆಲವರ ಮತವಿದೆ
  ಈ ಹೊಸ ಪಾನೀಯಗಳಿಗೆ ಮರುಳಾಗಿ, ದ್ರವ್ಯವನ್ನೂ ಆರೋಗ್ಯವನ್ನೂ ಕಳಕೊಳ್ಳದಂತೆ, ಜೀರಿಗೆಯನ್ನಾಗಲಿ, ಕೊತ್ತುಂಬರಿಯನ್ನಾಗಲಿ ಹುರಿದು, ಕಾಫಿಯಂತೆ ಪಾನಕವನ್ನು ತಯಾರಿಸಿ ಸೇವಿಸುವ ಅಭ್ಯಾಸಮಾಡುವದು ಒಳ್ಳೇದೆಂತ ಕಾಣುತ್ತದೆ. ಕೊತ್ತುಂಬರಿ ಅಧವಾ ಜೀರಿಗೆಯು ಪಿತ್ತವನ್ನು ಬಲ ಪಡಿಸಿ, ಜೀರ್ಣದ ಕೆಲಸವನ್ನು ಪೂರೈಸಿ, ವಾಯುವನ್ನು ಸಡಿಲಿಸಿ, ಆರೋಗ್ಯವನ್ನು ಕೊಡುವದು. ಕಫದೋಷವುಳ್ಳವರು ಶುಂಠಿಯನ್ನಾಗಲಿ, ಲವಂಗಪಟ್ಟೆಯನ್ನಾಗಲಿ, ಲವಂಗವನ್ನಾಗಲಿ, ಅಲ್ಪವಾಗಿ ಕೂಡಿಸಿಕೊಳ್ಳಬಹುದು.