e XIV - 268 - ಗುಣ 55. ಮೇಥಿಕಾ ವಾತಶಮನೀ ಶ್ಲೇಷ್ಮ ಜ್ವರನಾಶಿನೀ || ಮಂತಯ ಗುಣ
- (ಭಾ. ಪ್ರ. 82.) ಮೆಂತೆಯು ವಾತಶಮನ ಮಾಡುತ್ತದೆ ಮತ್ತು ಕಫವನ್ನೂ ಜ್ವರವನ್ನೂ ನಾಶಮಾಡುತ್ತದೆ.
ಮೇಧಿಕಾ ಕಟುರುಷ್ಣಾ ಚ ರಕ್ತಪಿತ್ತಪ್ರಕೋಪಿನೀ || ಅರೋಚಕಹರಾ ದೀಪ್ತಿ ಕರೀ ವಾತಪ್ರಣಾಶಿನೀ || (ಧ. ನಿ. 231.) ಮೆಂತೆಯು ಖಾರ, ಉಷ್ಣ, ಅರುಚಿಹರ, ಅಗ್ನಿದೀಪನಕಾರಿ ಮತ್ತು ವಾತನಾಶನವನ್ನು ಮಾಡುತ್ತದೆ; ಆದರೆ ರಕ್ತಪಿತ್ತವನ್ನು ಪ್ರಕೋಪಿಸತಕ್ಕಂಧಾದ್ದಾಗಿರುತ್ತದೆ. 56. ತೃಷ್ಣಾಶೂಲಕಫೋಶಛರ್ದಿಶ್ವಾಸನಿವಾರಣಂ || ಲಿಂಬೆಹಣ್ಣಿನ ವಾತಶ್ಲೇಷ್ಮವಿಬಂಧಘ್ನಂ ಜಂಬೀರಂ ಗುರು ಪಿತ್ತಕೃತ್ || ಐರಾವತಂ ದಶರಮಮ್ಮಂ ಶೋಣಿತಪಿತ್ತಕೃತ್ | (ಸು. 208-09 ) ಲಿಂಬೆಹಣ್ಣು ಗುರು, ಪಿತ್ತಕಾರಿ, ಬಾಯಾರಿಕೆ, ಶೂಲೆ, ಕಫ, ಅನ್ನದ್ವೇಷ, ವಾಂತಿ, ಉಬ್ಬಸ, ಕಫವಾತ, ಮತ್ತು ಮಲಬದ್ಧತೆ, ಇವುಗಳನ್ನು ಪರಿಹರಿಸುತ್ತದೆ. ಗಜಲಿಂಬೆಯು ಹುಳಿ ಮತ್ತು ರಕ್ತಪಿತ್ತವನ್ನುಂಟುಮಾಡುವಂಥಾದ್ದು ಷರಾ ಭಾ ಪ್ರ ದಲ್ಲಿ ಜಂಬೀರದಲ್ಲಿ ಸಣ್ಣದು, ದೊಡ್ಡದೆಂಬ ಭೇದಗಳಲ್ಲದೆ, ನಿಂಬೂಕ ಎಂಬದು ಬೇರೆಯಾಗಿ ಕಾಣಿಸಿಯದೆ ಬೃ ನಿ ನಲ್ಲಿ ಜಂಜೀರವು ದೊಡು ಎಂತಲೂ, ನಿಂಬೂಕವು ಲಂಬೆ ಎಂತಲೂ, ಕಾಣಿಸಲ್ಪಟ್ಟಿದೆ ಸುಶ್ರುತನ ಹುಳಿಹಣ್ಣುಗಳ ಪಟ್ಟಿಯಲ್ಲಿ ನಿಂಬೂಕ ಬೇರೆ ಕಾಣುವದಿಲ್ಲ ಇಲ್ಲಿ ಜಂಬೀರ ಎಂಬದು ಲಿಂಬೆ ಎಂಬದರಲ್ಲಿ ಸಂದೇಹ ಕಾಣುವದಿಲ್ಲ 57. ಪಿತ್ತಷ್ಟಂ ತೇಷು ಕುಷ್ಮಾಂಡಂ ಬಾಲಂ ಮಧ್ಯಂ ಕಫಾವಹಂ | ಬೂದಿಕುಂಬಳ ಪಕ್ಕ೦ ಲಘಷ್ಣಂ ಸಕ್ಷಾರಂ ದೀಸನಂ ವಸ್ತಿ ಶೋಧನಂ || ಸರ್ವದೋಷಹರಂ ಹೃದ್ಯಂ ವಧ್ಯಂ ಚೇತೋವಿಕಾರಿಣಾಂ | (ಸು. 213.) ಎಳೇ ಬೂದಿಕುಂಬಳಕಾಯಿಯು ಪಿತ್ತವನ್ನು ನಾಶಮಾಡುತ್ತದೆ, ಅರ್ಧ ಬೆಳೆದದ್ದು ಕಫ ವೃದ್ಧಿ ಮಾಡುತ್ತದೆ; ಪಕ್ವವಾದದ್ದು ಲಘು, ಉಷ್ಣ, ಕ್ಷಾರವುಳ್ಳದ್ದು, ಅಗ್ನಿದೀಪನಕರ, ಮೂತ್ರಾ ಶಯವನ್ನು ಶೋಧಿಸತಕ್ಕಂಧಾದ್ದು, ಸರ್ವದೋಷಹರ, ಮನೋಹರವಾದದ್ದು ಮತ್ತು ಮನೋ ವಿಕಾರವುಳ್ಳವರಿಗೆ ಪದ್ಧವಾದದ್ದು ಆಗಿರುತ್ತದೆ. 58. ಅಲಾಬುರ್ಭಿನ್ನ ವಿದ್ಯಾ ತು ರೂಕ್ಷಾ ಗುರ್ವತಿಶೀತಲಾ | ಸೊರೆಕಾಯಿ ಗುಣ ತಿಕ್ಕಾಲಾಬುರಹೃದ್ಯಾ ತು ವಾಮನೀ ವಾತಪಿತ್ತಜಿತ || (ಸು. 213.) ಸೀ ಸೋರೆಕಾಯಿಯು ರೂಕ್ಷ, ಗುರು, ಶೀತ ಮತ್ತು ಮಲವನ್ನು ಸಡಿಲಿಸುತ್ತದೆ. ಕಹಿ ಸೋರೆಯು ವಾಂತಿಮಾಡಿಸುವ ಗುಣವುಳ್ಳದ್ದು, ಹಿತವಲ್ಲದ್ದು ಮತ್ತು ವಾತಪಿತ್ತಗಳನ್ನು ಜಯಿಸತಕ್ಕಂಧಾದ್ದು ಆಗಿರುತ್ತದೆ. 59. ಉರ್ವಾರುಕಂ ಪಿತ್ತಹರಂ ಸುಶೀತಲಂ ಮೂತ್ರಾಮಯಘ್ನಂ ಮಧುರಂ ರುಚಿಪ್ರದಂ || ಕಾಯಿಯ ಗುಣ