- 267 - O XIV ಧಾನ್ಯ ಕಂ ತುವರಂ ಸಿಗ್ಗಮವೃಷ್ಯಂ ಮೂತ್ರಲಂ ಲಘು | ತಿಕ್ರಂ ಕಟೂಷ್ಣವೀರ್ಯಂ ಚ ದೀಪನಂ ಪಾಚನಂ ಸ್ಮತಂ || ಜ್ವರಪ್ಪಂ ರೋಚಕಂ ಗ್ರಾಹಿ ಸ್ವಾದುಪಾಕಿ ತ್ರಿದೋಷನುತ್ | ತೃಷ್ಣಾ ದಾಹವಮಿಶಾಸಕಾಸಕಾರ್ಶ್ಯಕೃಮಪ್ರಣುತ್ || ಆದ್ರ್ರಂ ತು ತದ್ಗುಣಂ ಸ್ವಾದು ವಿಶೇಷಾತ್ಪತ್ತನಾಶಿ ತತ್ || (ಭಾ ಪ್ರ 82.) ಕೊತ್ತಂಬರಿಯು ಚೊಗರು, ಸ್ನಿಗ್ಧ, ಲಘು, ಮೂತ್ರಕಾರಿ, ವೃಷ್ಯವಲ್ಲದ್ದು, ಕಹಿ, ಖಾರ, ಉಷ್ಣ ವೀರ್ಯವುಳ್ಳದ್ದು, ದೀಪನಪಾಚನಗುಣವುಳ್ಳದ್ದು, ರುಚಿಕರ, ಗ್ರಾಹಿ. ಪಾಕದಲ್ಲಿ ಸ್ವಾದು, ಜ್ವರಹರ, ತ್ರಿದೋಷಹರ ಮತ್ತು ಬಾಯಾರಿಕೆ, ಉರಿ, ವಾಂತಿ, ಉಬ್ಬಸ, ಕೆಮ್ಮು, ಕೃಶತೆ ಕ್ರಿಮಿ, ಈ ದೋಷಗಳನ್ನು ಜಯಿಸತಕ್ಕಂಧಾದ್ದು. ಹಸಿಯಾದದ್ದು ಅದೇ ಗುಣ ಗಳುಳ್ಳದ್ದು, ಸ್ವಾದು ಮತ್ತು ವಿಶೇಷವಾಗಿ ಪಿತ್ತವನ್ನು ನಾಶಮಾಡತಕ್ಕಂಧಾದ್ದು ಆಗಿರುತ್ತದೆ. ಎರಡು ಜಾತಿ ಸಾಸಿವೆಗಳ ಗುಣ 53. ಪಾಕೇ ರಸೇ ಚಾಪಿ ಕಟುಃ ಪ್ರದೀಷ್ಟ ಸಿದ್ದಾರ್ಥಕ ಶೋಣಿತಪಿತ್ತ ಕೋಪೀ | ಎರಡು ಜಾತಿ ತೀಕ್ಟೋಷ್ಣ ರೂಕ್ಷ ಕಫಮಾರುತವ್ಯಸ್ತವಾಗುಣಲ್ಲಾಸಿತಸರ್ಷವೋಪಿ || (ಸು. 198 ) ಬಿಳೇ ಸಾಸಿವೆಯು ರಸದಲ್ಲಿಯೂ ಪಾಕದಲ್ಲಿಯೂ ಖಾರ ಮತ್ತು ರಕ್ತ ಪ್ರಕೋಪ ಕರ ಎಂತ ಹೇಳಲ್ಪಟ್ಟಿದೆ, ತೀಕ, ಉಷ್ಣ, ರೂಕ್ಷ ಮತ್ತು ಕಫವಾತಹರ ಕೆಂಪು ಅಥವಾ ಕರೀ ಸಾಸಿವೆಯ ಅದೇ ಗುಣವುಳ್ಳದ್ದು ಆಗಿರುತ್ತದೆ ಯ ಮತ್ತು ನೀರಿನ ಗುಣ
- 54. ನಾರಿಕೇರಫಲಂ ಶೀತಂ ದುರ್ಬರಂ ವಸ್ತಿಶೋಧನಂ |
ಎಷ್ಟಂಭಿ ಬೃಂಹಣಂ ಬಲ್ಯಂ ವಾತಪಿತ್ತಾಶ್ರದಾಹನುತೇ || ತೆಂಗಿನಕಾಯಿ ವಿಶೇಷತಃ ಕೋಮಲನಾರಿಕೇರಂ ನಿಹಂತಿ ಪಿತ್ತಜ್ಜರಪಿತ್ತದೋಷಾನ್ || ತದೇವ ಜೀರ್ಣಂ ಗುರುಪಿತ್ತಕಾರಿ ವಿದಾಹಿ ಎಷ್ಟಂಭ ಮತಂ ಭಿಷ೬ || ತಸ್ಯಾಂಭಃ ಶೀತಲಂ ಹೃದ್ಯಂ ದೀಪನಂ ಶುಕ್ರಲಂ ಲಘು | ಪಿಪಾಸಾಪಿತ್ತಜಿತ್ಸಾದುವಸ್ತಿಶುದ್ಧಿಕರಂ ಪರಂ || (ಭಾ. ಪ್ರ. 126 ) ತೆಂಗಿನಕಾಯಿಯು ಶೀತ, ಜೀರ್ಣಕ್ಕೆ ಕಷ್ಟವಾದದ್ದು, ಮೂತ್ರ ಶೋಧನೆಮಾಡತಕ್ಕ ಧಾದ್ದು, ವಿಶೇಷವಾಗಿ ಸ್ತಂಭನಗುಣವುಳ್ಳದ್ದು, ಪುಷ್ಟಿ ಕರ, ಬಲಕರ, ವಾತ ಪಿತ್ತ, ರಕ್ತ, ಉರಿ ಸಹ ಶಮನಮಾಡತಕ್ಕಂಧಾದ್ದು ಆಗಿರುತ್ತದೆ. ವಿಶೇಷವಾಗಿ ಎಳೆದಾದ ತೆಂಗಿನಕಾಯಿ ಯು ಪಿತ್ತಜ್ವರವನ್ನೂ, ಪಿತ್ತದೋಷಗಳನ್ನೂ ಪರಿಹರಿಸುತ್ತದೆ. ಆದರೆ ಬೆಳೆದು ಒಣಗಿದ ಕಾಯಿಯು ಗುರು, ಪಿತ್ತಕಾರಿ ಮತ್ತು ಉರಿಯನ್ನೂ, ವಿಷ್ಟಂಭನವನ್ನೂ ಉಂಟುಮಾಡ ತಕ್ಕಂಧಾದ್ದೆಂತ ವೈದ್ಯರು ನಿಶ್ಚಯಿಸಿದ್ದಾರೆ ಅದರ (ಸೀಯಾಳದ) ನೀರು ಶೀತಲ, ಮನೋಹರ ವಾದದ್ದು, ಲಘು, ಅಗ್ನಿದೀಪನಕಾರಿ, ಶುಕ್ರವನ್ನು ವೃದ್ಧಿ ಮಾಡತಕ್ಕಂಧಾದ್ದು, ಬಾಯಾರಿಕೆ ಯನ್ನೂ ಪಿತ್ತವನ್ನೂ ಪರಿಹರಿಸತಕ್ಕಂಧಾದ್ದು, ಸ್ವಾದು ಮತ್ತು ಮೂತ್ರಾಶಯದ ಶುದ್ದಿ ಮಾಡು ವದಕ್ಕೆ ಉತ್ತಮವಾದದ್ದು ಆಗಿರುತ್ತದೆ. 34 *