ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

u XIV -- 266 ಯಲ್ಲಿ ಆ ಗುಣಗಳು ಇರುವದು ಮಾತ್ರವಲ್ಲದೆ, ಸ್ವರಕೊಡುವ ಮತ್ತು ಮಲಬದ್ಧತೆಯನ್ನೂ, ಆನಾಹವನ್ನೂ, ಶೂಲೆಯನ್ನೂ ಪರಿಹರಿಸುವ ಗುಣಗಳು ಇವೆ ಎಂತ ತಿಳಿದಿದ್ದಾರೆ. 49. ತೇಷಾಂ ಗುರ್ಮೀ ಸ್ವಾದುಶೀತಾ ಪಿಪ್ಪಲ್ಯಾದ್ರ್ರಾ ಕಫಾವಹಾ | ಹಿಪ್ಪಲಿಯ ಗುಣ ಶುಷ್ಕಾ ಕಫಾನಿಲಮೀ ಸಾ ವೃಹ್ಯಾ ಪಿತ್ತಾ ವಿರೋಧಿನೀ || (ಸು. 214.) ಖಾರ ಪದಾರ್ಥಗಳೊಳಗೆ ಹಸಿ ಹಿಪ್ಪಲಿಯು ಗುರು, ಸ್ವಾದು, ಶೀತ, ಮತ್ತು ಕಫ ವೃದ್ಧಿಕರ. ಒಣಗಿದ ಹಿಪ್ಪಲಿಯು ಕಫವಾಯುಹರ, ಪಿತ್ತಕ್ಕೆ ವಿರೋಧವಿಲ್ಲದ್ದು ಮತ್ತು ವೃಷ್ಯ ಆಗಿರುತ್ತದೆ 50. ಲಘಷ್ಠಂ ಪಾಚನಂ ಹಿಂಗು ದೀಪನಂ ಕಫವಾತಜಿತ್ | ಹಿಂಗಿನ ಗುಣ ಕಟು ೩ಗ್ನಂ ಸರಂ ತೀಕ್ಷಂ ಶೂಲಾಜೀರ್ಣವಿಬಂಧನುತ್ || (ಸು. 214 ) ಹಿಂಗು ಲಘು, ಉಷ್ಣ, ಖಾರ, ಸಿಗ್ಗ, ತೀಕ್ಷ, ಸರ, ದೀಪನ, ಪಾಚನ, ಕಫವಾತಹರ ಮತ್ತು ಶೂಲೆಯನ್ನೂ ಅಜೀರ್ಣವನ್ನೂ, ಮಲಬದ್ಧತೆಯನ್ನೂ ಪರಿಹರಿಸತಕ್ಕಂಧಾದ್ದು. 51. ತೀಕ್ಟೋಷ್ಣಂ ಕಟುಕಂ ಪಾಕೇ ರುಚ್ಯಂ ಪಿತ್ತಾಗ್ನಿವರ್ಧನಂ | ಜೀರಿಗೆಯ ಗುಣ ಕಟು ಶ್ಲೇಷ್ಯಾನಿಲಹರಂ ಗಂಧಾಧ್ಯಂ ಜೀರಕದ್ವಯಂ || (ಸು 214.) ಜೀರಿಗೆಗಳೆರಡು- (ಜೀರಿಗೆ ಮತ್ತು ಕರಿಜೀರಿಗೆ*) ತೀಕ್ಷ, ಉಷ್ಣ, ಪಾಕದಲ್ಲಿ ಕಟು, ರುಚಿ ಕರ, ಕಟುರುಚಿಯುಳ್ಳವು, ಪಿತ್ತವನ್ನೂ ಅಗ್ನಿಯನ್ನೂ ವೃದ್ಧಿ ಮಾಡತಕ್ಕಂಧವು, ಕಫವಾತ ವನ್ನು ಪರಿಹರಿಸತಕ್ಕಂಧವು ಮತ್ತು ಪರಿಮಳವುಳ್ಳವು

  • ಷರಾ ಬಿಭೇದು ಮತ್ತು ಅರಸಿನ ವರ್ಣದ್ದು ಎಂತ ಸಿ ಸಂ ವ್ಯಾ

ಗಣ 52 ಭಕ್ಷವ್ಯಂಜನಭೋಜೇಷು ವಿವಿಧೇಷ್ಠ ವಚಾರಿತಾ | ಆದ್ರ್ರಾ ಕುಸ್ತುಂಬರೀ ಕುರ್ಯಾತ್ ಸ್ವಾದುಸೌಗಂಧ ಹೃದ್ಯತಾಂ || ಕೊತ್ತಂಬರಿಯ ಸಾ ಶುಷ್ಕಾ ಮಧುರಾ ಪಾಕೇ ಸಿಗ್ತಾ ತೃಟ್ ದಾಹನಾಶಿನೀ | ದೋಷಮೀ ಕಟುಕಾ ಕಿಂಚಿತ್ತಿಕಾ ಸೋತೋವಿಶೋದನೀ || (ಸು. 214-15.) ಹಸಿ ಕೊತ್ತಂಬರಿಯು ನಾನಾ ವಿಧವಾದ ಮೇಲೋಗರ ಭಕ್ತಾದಿಗಳಲ್ಲಿ ಉಪಯೋಗಿಸ ಲ್ಪಟ್ಟಲ್ಲಿ ರುಚಿ, ಪರಿಮಳ ಮತ್ತು ಮನೋಹರತ್ವವನ್ನು ಕೊಡುತ್ತದೆ. ಅದು ಒಣಗಿದ್ದಾದರೆ, ಪಾಕದಲ್ಲಿ ಸೀ. ಸ್ಮಗ್ಗ, ಕಿಂಚಿತ್ ಕಹಿ ಮಿಶ್ರವಾಗಿ ಖಾರವಾಗಿದ್ದು, ಬಾಯಾರಿಕೆಯನ್ನೂ, ಉರಿಯನ್ನೂ, ಮೂರು ದೋಷಗಳನ್ನೂ ನಾಶಮಾಡುತ್ತದೆ ಮತ್ತು ಪ್ರೋತಸ್ಸುಗಳನ್ನು ಶೋಧಿಸತಕ್ಕಂಧಾದ್ದಾಗಿರುತ್ತದೆ.