ಈ ಪುಟವನ್ನು ಪರಿಶೀಲಿಸಲಾಗಿಲ್ಲ.
-325- ಅಗ್ನಿ ಮಂದವಾದಾಗ್ಗೆ ನಾಡಿಯು ಕ್ಷೀಣವಾಗಿ ಹಂಸಪಕ್ಷಿಯಂತೆ ಮೆಲ್ಲಮೆಲ್ಲನೆ ನಡೆಯುವದು.
(IV) ಸುಖಿತಸ್ಯ ಸ್ಥಿರಾ ಜ್ಞೇಯಾ ಚಪಲಾ ಕ್ಷುಧಿತಸ್ಯ ಸಾ |
ಹಸಿವು-ಮಂದಾಗ್ನಿ ಮತ್ತು ಮಂದಾಗ್ನೇಃ ಕ್ಷೀಣಧಾತೋಶ್ಚ ನಾಡೀ ಮಂದತರಾ ಭವೇತ್ || ಧಾತುಕ್ಷೀಣತೆಗಳಲ್ಲಿ
(ನಾ. ಪ್ರ. 37.) ಸುಖವಂತನ ನಾಡಿಯು ಸ್ಥಿರವಾಗಿಯೂ, ಹಸಿದವನ ನಾಡಿಯು ಚಪಲವಾಗಿಯೂ, ಅಗ್ನಿಮಾಂದ್ಯವಾದವನ ಮತ್ತು ಧಾತುಕ್ಷೀಣವಾದವನ ನಾಡಿಯು ಹೆಚ್ಚು ಮಂದವಾಗಿಯೂ, ಇರುವದೆಂದು ತಿಳಿಯಬೇಕು.
(x) ಜ್ವರಕೂಪೇನ ಧಮನೀ ಸೋಷ್ಣಾ ವೇಗವತೀ ಭವೇತ್ |
ಜ್ವರದ ಬಿಸಿಗೆ ಕಾರಣ ಉಷ್ಣಂ ಪಿತ್ತಾದೃತೇ ನಾಸ್ತಿ ಜ್ವರೋ ನಾಸ್ತ್ಯುಷ್ಮಣಾ ವಿನಾ || ( ಧ.7)
ಜ್ವರದಲ್ಲಿ ನಾಡಿಯು ಬಿಸಿಯಾಗಿಯೂ ವೇಗವುಳ್ಳದ್ದಾಗಿಯೂ ಇರುವದು. ಪಿತ್ತವಿಲ್ಲದೆ ಬಿಸಿಯಿಲ್ಲ; ಮತ್ತು ಬಿಸಿಯಿಲ್ಲದೆ ಜ್ವರವಿಲ್ಲ.
(y) ಸೌಮ್ಯಾ ಸೂಕ್ಷ್ಮಾಸ್ಥಿರಾ ಮಂದಾ ನಾಡೀ ಸಹಜವಾತಚಾ |
ವಾತಜ್ವರದ ನಾಡಿ ಸ್ಕೂಲಾ ಚ ಕರಿನಾ ಶೀಘ್ರೂ ಸ್ಪಂದತೇ ತೀವ್ರಮಾರುತೇ || (ಗ್ರಂಧಾಂತರ) ವಕ್ರಾ ಚ ಚಪಲಾ ಶೀತಸ್ಪರ್ಶಾ ವಾತಜ್ವರೇ ಭವೇತ್ | (ಧ. 7.)
ವಾತನಾಡಿಯು ಸಹಜವಾಗಿ ಸೌಮ್ಯ, ಸೂಕ್ಷ್ಮ, ಸ್ಥಿರ ಮತ್ತು ಮಂದ. ವಾತವು ಹೆಚ್ಚು ಪ್ರಕೋಪಗೊಂಡಾಗ್ಗೆ ನಾಡಿಯು ಸ್ಧೂಲವಾಗಿಯೂ, ಕರಿಣವಾಗಿಯೂ, ಶೀಘ್ರವಾಗಿಯೂ, ಆಡುವದು, ಮತ್ತು ವಾತಜ್ವರದಲ್ಲಿ ವಕ್ರವಾಗಿಯೂ, ಚಪಲವಾಗಿಯೂ, ಸ್ಪರ್ಶಕ್ಕೆ ಶೀತವಾಗಿಯೂ, ಇರುವದು (z) ದ್ರುತಾ ಚ ಸರಲಾ ದೀರ್ಘಾ ಶೀಘ್ರಾ ಪಿತ್ತಜ್ಜರೇ ಭವೇತ್| ಪಿತ್ತಜ್ವರದ ನಾಡಿ ಶೀಘ್ರಮಾಹನನಂ ನಾಡ್ಯಾಃ ಕಾರಿನ್ಯಾಚ್ಚಲತೇ ತಧಾ || (ಧ.7.) ಪಿತ್ತಜ್ವರದಲ್ಲಿ ನಾಡಿಯು ಸರಲವಾಗಿಯೂ, ಉದ್ದವಾಗಿಯೂ, ವೇಗವುಳ್ಳದ್ದಾಗಿಯೂ, ಅವಸರದಿಂದ ನಡೆಯುವದಲ್ಲದೆ, ನಾಡಿಯ ಪೆಟ್ಟು ಶೀಘ್ರವಾಗಿಯೂ ಕರಿನವಾಗಿಯೂ ಇರುವದು.
(aa) ನಾಡೀ ತಂತುಸಮಾ ಮಂದಾ ಶೀತಲಾ ಶ್ರೇಷ್ಮದೋಷಜಾ |
ಕಫಜ್ವರದ ನಾಡಿ (ಧ. 7.)
ಕಫಜ್ವರದಲ್ಲಿ ನಾಡಿಯು ನೂಲಿಗೆ ಸದೃಶವಾಗಿಯೂ, ಮಂದವಾಗಿಯೂ, ಸ್ವಲ್ಪ ಶೀತವಾಗಿಯೂ ಇರುವದು.
(bb) ಚಂಚಲಾ ತರಲಾ ಸ್ಧೂಲಾ ಕರಿನಾ ವಾತಪಿತ್ತಜಾ| ವಾತಪಿತ್ತದ ನಾಡಿ (ಧ. 7.)