ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆ XVII -326-
ವಾತಪಿತ್ತದಲ್ಲಿ ನಾಡಿಯು ಚಂಚಲವಾಗಿಯೂ, ನಡುಕು ಉಳ್ಳದ್ದಾಗಿಯೂ, ಸ್ಧೂಲವಾಗಿಯೂ, ಕರಿಣವಾಗಿಯೂ, ಇರುವದು. (CC) ಈಷಚ್ಚ ದೃಶ್ಯತೇ ತೂಷ್ಣಾ ಮಂದಾ ಸ್ಯಾಚ್ಭ್ಲೇಷ್ಮವಾತಜಾ |
ಕಫವಾತದ ನಾಡಿ ನಿರಂತರಂ ಖರಂ ಸೂಕ್ಷ್ಮಂ ಮಂದಶ್ಲೇಷ್ಮಾ ವಿನಾಬಲಂ* ||
ರೂಕ್ಷವಾತೇ ಭವೇತ್ತಸ್ಯ ನಾಡೀ ಸ್ಯಾತ್ಸಿತ್ತಸನ್ನಿಭಾ || (ಧ. 7.) 'ವಿನಾಬಲಂ' ಎಂಬಲ್ಲಿ 'ತಿವಾತಲಂ' ಎಂಬ ಪಾರಾ೦ತರ ಕಾಣುತ್ತದೆ ಕಫವಾತದಲ್ಲಿ ನಾಡಿಯು ಅಲ್ಪ ಉಷ್ಣತೆಯುಳ್ಳದ್ದಾಗಿಯೂ, ಮಂದವಾಗಿಯೂ ಇರುವದು; ಕಫವು ಮಂದವಾಗಿ, ವಾತವು ಬಲವಾದಾಗ್ಗೆ, ನಿರಂತರವಾಗಿಯೂ, ಖರ, ಸೂಕ್ಷ್ಮ ಮತ್ತು ಬಲಹೀನವಾಗಿರುವದು. ವಾತವ್ರ ರೂಕ್ಷವಾದಾಗ್ಗೆ ನಾಡಿಯು ಪಿತ್ತನಾಡಿಗೆ ಹೋಲುವದು (dd) ಸೂಕ್ಷ್ಮಾಶೀತಾ ಸ್ಥಿರಾ ನಾಡೀ ಪಿತ್ತಶ್ಲೇಷ್ಮಸಮುದ್ಭವಾ || ಕಫಪಿತ್ತದಲ್ಲಿ. (ಧ 7.) ಕಫಪಿತ್ತದಲ್ಲಿ ನಾಡಿಯು ಸೂಕ್ಷ್ಮವಾಗಿಯೂ, ಶೀತವಾಗಿಯೂ, ಸ್ಥಿರವಾಗಿಯೂ ಇರುವದು. (ee) ಭೂತಜ್ಞರೇ ಸೇಕ ಇವಾತಿವೇಗಾತ್ ಭೂತಜ್ವರದಲ್ಲಿ ಧಾವಂತಿ ನದ್ಯೋಹಿ ಯಧಾಬ್ಧಿಗಾಮಾಃ || (ನಾ. ಪ್ರ. 31.) ಭೂತಜ್ವರದಲ್ಲಿ ನಾಡಿಗಳು ಸಮುದ್ರಕ್ಕೆ ಹೋಗುವ ನದಿಗಳಂತೆ ಅತಿವೇಗದಿಂದ ಧಾರೆಯಾಗಿ ಓಡುವವು. (ff) ಐಕಾಹಿಕೇನ ಕ್ವಚನ ಪ್ರದೂರೇ ಕ್ಷಣಾಂತಗಾಮಾ ವಿಷಮಜ್ವರೇಣ |
ವಿಷಮಜ್ವರದಲ್ಲಿ ದ್ವಿತೀಯಕೇ ವಾಪಿ ತೃತೀಯತುರ್ಯೇ ಗಚ್ಛಂತಿ ತಪ್ತಾ ಭ್ರಮಿವತ್ಕ್ರಮೇಣ ||
(ಧ. 7.) ಏಕಾಹಿಕ ವಿಷಮಜ್ವರದಲ್ಲಿ ನಾಡಿಗಳು ತಮ್ಮ ಸ್ಥಾನ ಬಿಟ್ಟು ಸ್ವಲ್ಪ ದೂರದಲ್ಲಿ ಕ್ಷಣಕಾಲ ನಿಂತು ನಡೆಯುವವು. ದ್ವಿತೀಯಕ, ತೃತೀಯಕ, ಚಾತುರ್ಧಿಕ ಜ್ವರಗಳಲ್ಲಿ ನಾಡಿಗಳು ಬಿಸಿಯಾಗಿ ಚಕ್ರದಂತೆ ಸುತ್ತುತ್ತಾ ಚಲಿಸುವವು. (gg) ಉದ್ವೇಗಕ್ರೋಧಕಾಮೇಷು ಭಯಚಿಂತಾಶ್ರಮೇಷು ಚ |
ಉದ್ವೇಗ,ಸಿಟ್ಟು,ಮುಂ ಭವೇತ್ಕ್ಷೀಣಗತಿನಾ೯ಡೀ ಜ್ಞಾತವ್ಯಾ ವೈದ್ಯಸತ್ತಮೈಃ || (ಧ. 7.) ತಾದ ಭಾವಗಳಲ್ಲಿ
ಉದ್ವೇಗ (ಗಾಬರಿ), ಸಿಟ್ಟು, ಕಾಮ, ಭಯ, ಚಿಂತೆ, ದಣಿಕೆ, ಇವುಗಳಿಂದ ನಾಡಿಗೆ ಕ್ಷೀಣಗತಿ ಉಂಟಾಗುವದೆಂದು ವೈದ್ಯೋತ್ತಮರು ತಿಳಿಯತಕ್ಕದ್ದು