ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-327- XVII

     (hh)    ಅಜೀಣೇ೯ತು ಭವೇನ್ಮಾಡೀ ಕರಿನಾ ಪರಿತೋ ಜಡಾ | 

ಅಜೀರ್ಣದಲ್ಲಿ ಪ್ರಸನ್ನಾತು ದ್ರುತಾ ಶುದ್ಧಾ ತ್ವರಿತಾ ಚಪ್ರವರ್ತತೇ || (ನಾ. ಪ್ರ. 36.)

   ಅಜೀರ್ಣರೋಗದಲ್ಲಿ ನಾಡಿಯು ಸಾಧಾರಣವಾಗಿ ಕಠಿಣವಾಗಿಯೂ, ಜಡವಾಗಿಯೂ ಇರುತ್ತದಾದರೂ, ಕೆಲವು ವೇಳೆ ಬೇಗಬೇಗನೇ ಬಡದು ಪ್ರಸನ್ನವಾಗಿಯೂ, ಶುದ್ದವಾಗಿಯೂ, ತ್ವರಿತವಾಗಿಯೂ ಚಲಿಸುವದು
     (ii) ಪಕ್ವಾಜೀಣೇ೯ ಪುಷ್ಟಿಹೀನಾ ಮಂದಂ ಮಂದಂ ವಹೇಜ್ವದಾ | 

ಪಕ್ಕಾಜೀರ್ಣದಲ್ಲಿ (ಧ 8)

   ಪಕ್ವಾಜೀಣ೯ರೋಗದಲ್ಲಿ ನಾಡಿಯು ಸಪೂರವಾಗಿಯೂ, ಜಡವಾಗಿಯೂ, ಮೆಲ್ಲ ಮೆಲ್ಲನೆ ಚಲಿಸುವದು
      (jj)   ಅಸೃಕ್ಪೂಣಾ೯ ಭವೇತ್ಕೋಷ್ಲಾ ಗುವೀ೯ ಸಾಮಾ
ರಕ್ತಾಧಿಕ್ಯದಲ್ಲಿ     ಗರೀಯಸೀ |                                            (ಧ 8)

ಮತ್ತು ಸಾಮದಲ್ಲಿ

  ರಕ್ತದಿಂದ ತುಂಬಿದಾಗ್ಗೆ ನಾಡಿಯು ಸ್ವಲ್ಪ ಬಿಸಿಯಾಗಿಯೂ, ಗುರುವಾಗಿಯೂ, ಇರುವದು ಸಾಮದೋಷದಲ್ಲಿ ಮತ್ತಷ್ಟು ಗುರುವಾಗಿರುವದು
      (kk) ಲಘ್ವೀ ಭವತಿ ದೀಪ್ತಾಗ್ನೇಸ್ತಧಾ ವೇಗವತೀ ಮತಾ |                       (ಧ. 8 ) ದೀಪ್ತಾಗ್ನಿಯಲ್ಲಿ
   ಅಗ್ನಿಯು ಚುರುಕಾದಾಗ್ಗೆ ನಾಡಿಯು ಲಘುವಾಗಿ, ವೇಗದಿಂದ ಚಲಿಸುವದು.
      (ll)          ನಿರೋಧೇ ಮೂತ್ರಶಕೃತೋರ್ವಿಡ್ಗ್ರಹೇ ತ್ವತಿಗುವಿ೯ಣೀ | 

ಮಲಮೂತ್ರಗಳ ತಡೆಯಲ್ಲಿ ವಿಷೂಚಿಕಾಭಭೂತೇ ಚ ಭವಂತಿ ಛೇಕವತ ಕ್ರಮಾಃ | (ಧ. 8.)

ಮತ್ತು ವಿಷೂಚಿಯಲ್ಲಿ
   ಮಲಮೂತ್ರಗಳನ್ನು ತಡೆದರ, ಅಧವಾ ಮಲಬದ್ದದಲ್ಲಿ ನಾಡಿಯು ಅತಿಗುರುವಾಗಿರುವದು. ವಿಷೂಪೀಡೆಯಲ್ಲಿ ನಾಡಿಗತಿಗಳು ಕಪ್ಪೆಯಂತ ಆಗಿರುವವು
      (mm) ಆನಾಹೇ ಮೂತ್ರಕೃಛ್ರೇ ಚ ಭವೇನ್ನಾಡೀ ಗರಿಷ್ಠ ತಾ |
ಆನಾಹ ಮತ್ತು                                 (ನಾ ಪ್ರ. 38 ) 

ಮೂತ್ರಕೃಭ್ರಗಳಲ್ಲಿ

      ಆನಾಹದಲ್ಲಿಯೂ, ಮೂತ್ರಕೃಛ್ರದಲ್ಲಿಯೂ, ನಾಡಿಯು ಅತ್ಯಂತ ಗುರುವಾಗಿರುವದು.
     (nn)    ವಾತೇನ ಶೂಲೇನ ಮರುತ್ಪ್ಲವೇನ |
ವಾತಶೂಲೆಯಲ್ಲಿ   ಸದೈವ ವಕ್ರಾ ಹಿ ಶಿರಾ ವಹಂತಿ !!                     (ಧ. 8.) 
       ವಾತದಲ್ಲಿಯೂ, ವಾತದ ಶೂಲೆಯಲ್ಲಿಯೂ, ನಾಡಿಯು ಯಾವಾಗಲೂ ವಕ್ರವಾಗಿ ಚಲಿಸುವದು.