ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- 340 -

XVII ನೇ ಅಧ್ಯಾಯ. ಜಯಿಸಲಶಕ್ಯವಾದ ಉಪದ್ರವಗಳು

 1.   ಮಹಾರೋಗ ಗಳು
       (a)  ವಾತವ್ಯಾಧಿಃ ಪ್ರಮೇಹಶ್ಚ ಕುಷ್ಠ ಮರ್ಶೋ ಭಗಂದರಃ |
              ಅಶ್ಮರೀ ಮೂಢಗರ್ಭಶ್ಚ ತಧೈವೋದರಮಷ್ಟಮಂ || 
              ಅಷ್ಟಾವೇತೇ ಪ್ರಕೃ ತ್ಯೈವ ದುಶ್ಚಿಕಿತ್ಸಾ ಮಹಾಗದಾ ಃ|| 
              ಪ್ರಾಣಮಾಂಸಕ್ಷಯಶ್ವಾಸತೃಷ್ಣಾ ಶೋಷವಿೂಜ್ವರೈಃ || 
              ಮರ್ಚ್ಛಾತಿಸಾರಹಿಕ್ಕಾಭಃ ಪುನಶ್ವೇತೈರುಪದ್ರುತಾಃ ||
              ವರ್ಜನೀಯಾ ವಿಶೇಷೇಣ ಭಷಬಾ ಸಿದ್ದಿ ಮಿಚೃತಾ || (ಸು. 129 ) 
  
  ವಾತವ್ಯಾಧಿ, ಪ್ರಮೇಹ, ಕುಷ್ಠ, ಮೂಲವ್ಯಾಧಿ, ಭಗಂದರ, ಅಶ್ಮರೀ (ಕಲ್ಲು ಮೂತ್ರ), ಮೂಢಗರ್ಭ (ಗರ್ಭದಲ್ಲಿ ಯೇ ಶಿಶು ಸತ್ತಿರುವದು), ಉದರವ್ಯಾಧಿ (ಜಲೋದರ ಇತ್ಯಾದಿ), ಇವು ಎಂಟು ಸ್ವಾಭಾವಿಕವಾಗಿಯೇ ಚಿಕಿತ್ಸೆಗೆ ಕಷ್ಟವಾದ ಮಹಾರೋಗಗಳಾಗಿರುತ್ತವೆ ಅವುಗಳೊಂದಿಗೆ ಬಲಕ್ಷಯ, ಮಾಂಸಕ್ಷಯ, ಉಬ್ಬಸ, ಬಾಯಾರಿಕೆ, ಯಕ್ಷ್ಮ ,ವಾಂತಿ, ಜ್ವರ, ಮೂರ್ಚ್ಛೆ, ಅತಿಸಾರ, ಬಿಕ್ಕಟ್ಟು, ಈ ಉಪದ್ರವಗಳು ಕಂಡರೆ, ಸಿದ್ದಿಯನ್ನ ಪೇಕ್ಷಿ ಸುವ ವೈದ್ಯನು ಅವುಗಳನ್ನು ಅಗತ್ಯವಾಗಿ ವರ್ಜಿಸತಕ್ಕದ್ದು.
   
         (b) ವಾತವ್ಯಾಧಿರಪಸ್ಮಾರೀ ಕುಷ್ಠೀ ಶೋಫೀ ತಧೋದರೀ |
               ಗುಲ್ಮೀ ಚ ಮಧುಮೇಹೀ ಚ ರಾಜಯಕ್ಷ್ಮೀ ಚ ಯೋ ನರಃ || 
               ಅಚಿಕಿತ್ಸಾ಼ ಭವಂತ್ಯೇತೇ ಬಲಮಾಂಸಕ್ಷಯೇ ಸತಿ ||
               ಅನ್ಯೇಷ್ವಪಿ ವಿಕಾರೇಷು ತಾನ್ ಭಿಷಕ್ ಪರಿವರ್ಜಯೇತ್ || (ಚ. 395.) 
 
   ವಾತವ್ಯಾಧಿ, ಅಪಸ್ಮಾರ, ಕುಷ್ಠ, ಶೋಫ, ಉದರವ್ಯಾಧಿ, ಗುಲ್ಮ, ಮಧುಮೇಹ, ರಾಜ ಯಕ್ಷ್ಮ, ಈ ವ್ಯಾಧಿಗಳುಳ್ಳ ಮನುಷ್ಯರ ಬಲ ಮತ್ತು ಮಾಂಸ ಕ್ಷಯವಾಗಿದ್ದರೆ, ಅವರು ಚಿಕಿತ್ಸೆಗೆ ಅರ್ಹರಲ್ಲ. ಆ ರೋಗಗಳಿಂದ ಪೀಡಿತರಾದವರಲ್ಲಿ ಬೇರೆ ವಿಕಾರಗಳು ಉಂಟಾದರ ಸಹ ಅವರ ಚಿಕಿತ್ಸೆಯನ್ನು ವೈದ್ಯನು ಬಿಟ್ಟುಬಿಡಬೇಕು.
   
        (c)  ವಾತವ್ಯಾಧಿರಪಸ್ಮಾರೀ ಕುಷ್ಠೀ ರಕ್ತುದರೀ ಕ್ಷಯಿಾ |  
              ಗುಲ್ಮೀ ಮೇಹೀ ಚ ತಾನ್ ಕೀಣಾನ್ ವಿಕಾರೇsಲ್ಪೇs ವರ್ಜಯೇತ್ |
                                                                                              (ವಾ 175.) 
 
     ವಾತ, ಅಪಸ್ಮಾರ, ಕುಷ್ಠ, ರಕ್ತಪಿತ್ತ, ಉದರ, ಕ್ಷಯ, ಗುಲ್ಮ, ಮೇಹ, ಈ ವ್ಯಾಧಿ ಗಳಿಂದ ಪೀಡಿತರಾದವರು ಕ್ಷೀಣವಾಗಿದ್ದರೆ, ರೋಗವು ಅಲ್ಪವಾಗಿದ್ದರೂ, ಅವರನ್ನು ವೈದ್ಯನು ವರ್ಜಿಸತಕ್ಕದ್ದು.

೨. ವಾತವ್ಯಾಧಿಯಲ್ಲಿ ಅಶುಭಸೂಚನೆ

                       ಶೂನಂ ಸುಪ್ತತ್ವಚಂ ಭಗ್ನಂ ಕಂಪಾಧಾನನಿಪೀಡಿತಂ |   
                ನರಂರುಜಾರ್ತಿಮಂತಂ ಚ ವಾತವ್ಯಾಧಿರ್ವಿನಾಶಯೇತ್ || (ಸು. 122.)