ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XVIII - 342 8. ಅಶುಭಸೂಚನೆ ಗರ್ಭಕೋಶವರಾಸಂಗೀ ಮಕ್ಕಲ್ಲೂ ಯೋನಿಸಂವೃತಿಃ | ಮೂಢಗರ್ಭದಲ್ಲಿ ಹನ್ಯಾತ್ ಸಿಯಂ ಮೂಢಗರ್ಭೇ ಯಥೋಕ್ತಾಶ್ಚಾತ್ಯ ಪದ್ರವಾಃ | (ಸು. 123. ಮೂಢಗರ್ಭದಲ್ಲಿ ಉಕ್ತವಾದ ಉಪದ್ರವಗಳೊಂದಿಗೆ ಯೋನಿಸಂವೃತಿ (ಯೋನಿ ಮುಚ್ಚಿಕೊಳ್ಳೋಣ) ಎಂಬ ರೋಗ, ಗರ್ಭಕೋಶದಲ್ಲಿ (ಕೈಕಾಲುಗಳು ಅಥವಾ ಶಿರಸ್ಸು) ಸಿಕ್ಕಿಕೊಳ್ಳೋಣ ಮತ್ತು ಮಕ್ಕಲ್ಲ ಎಂಬ ಶೂಲೆ ಸಹಿತವಾದ ಬಾಣಂತಿರೋಗ ಕೂಡಿಕೊಂಡಿ ದ್ದರೆ, ಆ ಸ್ತ್ರೀಯು ಬದುಕಲಾರಳು. 9. - - ಪಾರ್ಶ್ವಭಂಗಾನ್ನ ವಿದ್ವೇಷಶೋಫಾತಿಸಾರಪೀಡಿತಂ | ಉದರವ್ಯಾಧಿಯಲ್ಲಿ ವಿರಿಕ್ಯಂ ಪೂರ್ಯಮಾಣಂ ಚ ವರ್ಜಯೇದುದರಾರ್ದಿತಂ || (ಸು. 123.) ಉದರವಾಧಿಯಲ್ಲಿ ಆಶುಭಸೂಚನೆ ಪಾರ್ಶ್ವಗಳಲ್ಲಿ ಭಾಗವಾದ ಹಾನ ಶೂಲೆ, ಅನ್ನದ್ವೇಷ, ಶೋಭೆ, ಅತಿಸಾರ, ವಿರೇಚಿಸ ಅಟ್ಟ ಹಾಗೆ ಪುನಃ ತುಂಬುತ್ತಿರೋಣ, ಈ ಲಕ್ಷಣಗಳಿಂದ ಕೂಡಿದ ಉದರರೋಗಿಯನ್ನು ಬಿಟ್ಟು ಬಿಡಬೇಕು. ಅಶುಭಸೂಚನೆ 10. ಯಸ್ತಾಮೃತಿ ವಿಸಂಜ್ಞಶ್ವ ಶೇತೇ ನಿಪತಿತೋSಪಿ ವಾ | ಶೀತಾರ್ದಿತೋಂತರುದ್ಧ. ಜ್ವರೇಣ ಪ್ರಿಯತೇ ನರಃ || ಯೋ ಹೃಷ್ಟ ರೋಮಾ ರಕ್ತಾಕೋ ಹೃದಿ ಸಂಘಾತಶೂಲವಾನ್ | ನಿತ್ಯಂ ವಕ್ರೋಣ ಚೋಚ್ಛಸ್ಯಾತ್ ತಂ ರೋ ಹಂತಿ ಮಾನವಂ || ಜ್ವರದಲ್ಲಿ ಹಿಕ್ಯಾಶಾಸಪಿಪಾಸಾರ್ತಂ ಮೂಢಂ ವಿಭ್ರಾಂತಲೋಚನಂ | ಸಂತತೋಚ್ಚಾಸಿನಂ ಕ್ಷೀಣಂ ನರಂ ಕ್ಷಸಯತಿ ಜ್ವರಃ || ಆವಿಲಾಕ್ಷಂ ಪ್ರತಾಮ್ಯಸ್ತಂ ನಿದ್ರಾಯುಕ್ತಮತೀವ ಚ || ಕ್ಷೀಣಶೋಣಿತ ಮಾಂಸಂ ಚ ನರಂ ಕೃಪಯತಿ ಜ್ವರಃ || (ಸು. 123.) (1) ಸಂಕಟದಿಂದ ನರಳುತ್ತಾ, ಎಚ್ಚರಿಕೆಯಿಲ್ಲದೆ, ಬಿದ್ದ ಹಾಗೆ ಇದ್ದು, ನಿದ್ರೆ ಮಾಡುತ್ತಾ, ಒಳಗೆ ಬಿಸಿ ಇರುವಾಗ್ಗೆ ಹೊರಗೆ ಶೀತದಿಂದ ಪೀಡಿತನಾಗಿ, ಯಾವ ರೋಗಿ ಇರುತ್ತಾನೋ ಅವನು ಆ ಜ್ವರದಿಂದ ಸಾಯುತ್ತಾನೆ (2) ರೋಮಾಂಚ, ಕೆಂಪು ಕಣ್ಣು, ಎದೆಯಲ್ಲಿ ಬಡ ತದ ಶೂಲೆ, ಸದಾಕಾಲ ಬಾಯಿಯಿಂದಲೇ ಶ್ವಾಸ ಬಿಡೋಣ, ಈ ಲಕ್ಷಣಗಳುಳ್ಳ ಮನುಷ್ಯ ನನ್ನು ಜ್ವರವು ಕೊಲ್ಲುವದು. (3) ಬಿಕ್ಕಟ್ಟು, ಉಬ್ಬಸ, ಬಾಯಾರಿಕೆ, ಇವುಗಳಿಂದ ಪೀಡಿತ ನಾಗಿಯೂ, ಜ್ಞಾನವಿಲ್ಲದವನಾಗಿಯೂ, ಭ್ರಮೆಗೊಂಡ ಕಣ್ಣುಗಳುಳ್ಳವನಾಗಿಯೂ, ಅಧಿಕ ವಾಗಿ ಹೊರಗೆ ಗ್ರಾಸಬಿಡುವವನಾಗಿಯೂ, ಕ್ಷೀಣನಾಗಿಯೂ ಇರುವ ಮನುಷ್ಯನು ಜ್ವರ ದಿಂದ ಸಾಯುವನು. () ಸಂಕಟಪಡುವದು ವಿಶೇಷವಾಗಿ, ಕಣ್ಣು ಕಲಂಕವಾಗಿ, ನಿದ್ರೆಯು ಅತಿಯಾಗಿ ಮತ್ತು ರಕ್ತಮಾಂಸಗಳು ಕ್ಷೀಣವಾಗಿ, ಯಾವನಲ್ಲಿರುತ್ತವೋ ಆತನು ಜ್ವರದಿಂದ ನಷ್ಟವಾಗುವನು. - -