ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 -345-

                                                                ಆ XVIII

20.ಕೋಟಲೆಯಲ್ಲಿ ಅಶುಭಸೂಚನೆ

        ಮಸೂರದ್ವಿದಲಪ್ರಖ್ಯಾಸ್ತಧಾ ವಿದ್ರುಮಸನ್ನಿಭಾಃ | 
        ಅಂತರ್ವಕ್ತ್ರಾಃ ಕಿಣಾಭಾಶ್ಚ ವಿಸ್ಪೋಟಾ ದೇಹನಾಶನಾಃ ||
                                                   (ವಾ. 176.)
 ಗುಳ್ಳೆಗಳು ಚಾಣಂಗಿ ಬೇಳೆಯ ಆಕಾರವಾಗಿಯೂ, ಹವಳದ ವರ್ಣವಾಗಿಯೂ, ಒಳ ಮುಖವಾಗಿಯೂ, ದಡ್ಡಿಗೆ ಸದೃಶವಾಗಿಯೂ ಇದ್ದರೆ, ಆ ಗುಳ್ಳೆ (ಕೋಟಲೆ) ರೋಗವು ದೇಹವನ್ನು ನಾಶಮಾಡುವದು.

21.ಅಷ್ಠೀಲಾ ವ್ಯಾಧಿಯಲ್ಲಿ ಅಶುಭಸೂಚನೆ

        ವಾತಾಷ್ಠೀಲಾತಿಸಂವೃದ್ದಾ ತಿಷ್ಠಂತೀ ದಾರುಣಾ ಹೃದಿ | 
        ತೃಷ್ಣಯಾ ತು ಪರೀತಸ್ಯ ಸದ್ಯೋ ಮುಷ್ಣಾತಿ ಜೀವಿತಂ ||
                                                 (ವಾ. 175 )
 ವಾತ ಅಷ್ಠೀಲವು ಅತಿಯಾಗಿ ಬೆಳೆದು ಎದೆಯಲ್ಲಿ ಕರಿಣವಾಗಿ ನಿಂತಿದ್ದು, ಬಾಯಾರಿಕೆ ಯುಂಟಾದರೆ ಆ ಮನುಷ್ಯನು ಸದ್ಯದಲ್ಲಿ ಪ್ರಾಣವನ್ನು ಬಿಡುವನು.

22.ಶೋಫೆ ಮತ್ತು ಜ್ವರಾತಿಸಾರ

        ಜ್ವರಾತಿಸಾರೌ ಶೋಫಾಂತೇ ಶ್ವಯಧುರ್ವಾ ತಯೋಃ ಕ್ಷಯೇ | 
        ದುರ್ಬಲಸ್ಯ ವಿಶೇಷೇಣ ಬಾಯಂತೇTಂತಾಯ ದೇಹಿನಃ || (ವಾ. 174.)

 ಶೋಫೆಯ ಅಂತ್ಯದಲ್ಲಿ ಜ್ವರಾತಿಸಾರಗಳು ಅಧವಾ ಜರಾತಿಸಾರಗಳ ಅಂತ್ಯದಲ್ಲ

ಶೋಫೆ ಉಂಟಾದರ, ಮುಖ್ಯವಾಗಿ ರೋಗಿಯು ದುರ್ಬಲನಾಗಿದ್ದರೆ, ಆತನ ಅಂತ್ಯವು ಸಮಿಾಪಿಸಿತೆಂದು ತಿಳಿಯುವದು.

23.ಇಂದ್ರಿಯಗಳ ದುರ್ಬಲತೆ

        ನಾಸಾಗ್ರಂ ಭ್ರೂಯುಗಂ ಜಿಹ್ವಾಂ ಮುಖಂ ಚೈವ ನ ಪಶ್ಯತಿ ||  
        ಕರ್ಣಘೋಷಂ ನ ಜಾನಾತಿ ಸ ಗಚ್ಛೇದ್ಯಮಮಂದಿರಂ ||
 ಮೂಗಿನ ತುದಿ, ಎರಡು ಹುಬ್ಬುಗಳು, ನಾಲಿಗೆ, ಮುಖ, ಇವು ಯಾವ ರೋಗಿಗೆ 

ಕಾಣುವದಿಲ್ಲ ವೋ ಮತ್ತು ಯಾವನಿಗೆ ಕಿವಿಯೊಳಗಿನ ಘೋಷವು ಕೇಳುವದಿಲ್ಲ ವೋ, ಅವನು ಮೃತಿ ಹೊಂದುವನು.

24.ಶ್ವಾಸವಿರುವ ವರೆಗೆ ಚಿಕಿತ್ಸಾವಶ್ಯಕ

        ಯಾವಚ್ಚ ಶ್ವಸತೇ ಜೀವೋ ಯಾವತ್ಕ್ರಮತಿ ಭೇಷಜಂ |  
        ತಾವತ್ಕ್ರಿಯಾ ಪ್ರಕರ್ತವ್ಯಾ ದೈವಸ್ಯ ಕುಟಿಲಾ ಗತಿಃ | ( ನಿ ರ)
 ಯಾವ ವರೆಗೆ ಜೀವಶ್ವಾಸ ಇರುತ್ತದೋ ಮತ್ತು ಔಷಧವು ಕೆಳಗೆ ಇಳಿಯುತ್ತದೋ, 

ಆ ವರೆಗೆ ಪ್ರತಿಕ್ರಿಯೆಗಳನ್ನು ನಡಿಸತಕ್ಕದ್ದು. ದೈವಗತಿಯು ಕುಟಿಲವಾಗಿದೆ.

25.ಸರಿಯಾದ ಚಿಕಿತ್ಸೆ ನಿಷ್ಠಲವಾಗುವದು

        ಚಿಕಿತ್ಸ್ಯಮಾನಃ ಸಮ್ಯಕ್ಚ ವಿಕಾರೋ ಯೋSಭಿವರ್ಧತೇ |  
        ಪ್ರಕ್ಷೀಣಬಲಮಾಂಸಸ್ಯ ಲಕ್ಷಣಂ ತದ್ಗತಾಯುಷಃ | (ಸು. 122.)