ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XXI -414-

22. ದುರ್ಬಲಸ್ಯ ಚಲಾನ್ ದೋಷಾನಲ್ಪಾನಲ್ಪಾನ್ ಪುನಃ ಪುನಃ | ಹರೇತ್ಪ್ರಭೂತಾನಲ್ಪಾಂಸ್ತು ಶಮಯೇತ್ಪ್ರಚ್ಯುತಾನಪಿ || ದುರ್ಬಲನ ದೋಷಗಳನ್ನು ಪರಿಹರಿಸುವ ಹರೇದ್ದೋಷಾಂಶ್ಚಲಾನ್ ಪಕ್ವಾನ್ ಬಲಿನೋ ದುಬ೯ಲಸ್ಯ ಚ | ಣಣ್ಣಣ್ಣಚಲಾ ಹ್ಯುಪೇಕ್ಷಿತಾ ದೋಷಾಃ ಕ್ಲೇಶಯೇಯುಶ್ಚಿರಂ ನರಂ ||

                                (ಸು.551.)
 ದುರ್ಬಲನಾಗಿರುವವನ ದೋಷಗಳು ಮಹತ್ವದ್ದಾಗಿ, ಚಲನವಾಗಿದ್ದರೆ, ಅವುಗಳನ್ನು ಅಲ್ಪ ಅಲ್ಪವಾಗಿ ಪುನಃ ಪುನಃ ತೆಗೆದುಬಿಡಬೇಕು, ಆದರೆ ದೋಷಗಳು ಚಲನವಾಗಿದ್ದರೂ, ಅಲ್ಪವಾಗಿದ್ದರೆ, ಅವುಗಳನ್ನು ಶಮನಕ್ರಮಗಳಿಂದ ಜಯಿಸತಕ್ಕದ್ದು; ಮತ್ತು ಚಲನವಾದ ದೋಷಗಳು ಪಕ್ವವಾಗಿದ್ದರೆ, ರೋಗಿಯು ಬಲಿಷ್ಠನಾಗಲಿ ದುರ್ಬಲನಾಗಲಿ, ಅವುಗಳನ್ನು ತೆಗೆದುಬಿಡಬೇಕು, ಯಾಕಂದರೆ ಚಲಿಸಿದಂಧಾ ದೋಷಗಳು ಉಪೇಕ್ಷಿಸಲ್ಪಟ್ಟರೆ ಮನುಷ್ಯನನ್ನು ಬಹುಕಾಲ ದುಃಖಿಸುವವು.

23. ಮಂದಾಗ್ನಿಂ ಕ್ರೂರಕೋಷ್ಠಂ ಚ ಸಕ್ಷಾರಲವಣೈಘೃ೯ತೈಃ | ವಿರೇಚನಕ್ಕೆ ಮುಂದಾಗಿ ಅಗ್ನಿಯನ್ನೂ ಕೋಷ್ಠವನ್ನೂ ಸರಿಪಡಿಸಿಕೊಳ್ಳುವದು ಸಂಧುಕ್ಷಿತಾಗ್ನಿಂ ಸ್ನಿಗ್ದಂ ಚ ಸ್ವಿನ್ನಂ ಚೈವ ವಿರೇಚಯೇತ್ ||

                                  (ಸು.551.)
   ಅಗ್ನಿಯು ಮಂದವಾಗಿ ಹೊಟ್ಟೆಯು ಕ್ರೂರಸ್ವಭಾವದ್ದಾಗಿರುವವನಿಗೆ  ಕ್ಷಾರ ಲವಣ ಗಳಿಂದ ಕೂಡಿದ ತುಪ್ಪಗಳನ್ನು ಕೊಟ್ಟು ಅಗ್ನಿಯನ್ನು

ಚುರುಕುಮಾಡಿ,ಸ್ನಿಗ್ಧನನ್ನಾಗಿ ಮಾಡಿ, ಸ್ವೇದಕ್ರಮದಿಂದ ಬೆವರಿಸಿದ ಮೇಲೆಯೇ ವಿರೇಚನ ಔಷಧವನ್ನು ಕೊಡತಕ್ಕದ್ದಾಗಿರುತ್ತದೆ.

24. ನ ಚಾತಿಸ್ನೇಹಪೀತಸ್ತು ಪಿಬೇತ್ಸ್ನೇಹವಿರೇಚನಂ | ಸ್ನೇಹ ವಿರೇಚನಕ್ಕೆ ಅಯೋಗ್ಯರು ದೋಷಾಃಮ ಪ್ರಚಲಿತಾಃ ಸ್ಧಾನಾದ್ಭೂಯಃ ಶ್ಲಿಷ್ಯಂತಿ ವರ್ತ್ಮಸು ||

                               (ಸು.551-52.)
  ಆದರೆ ಅತಿಯಾಗಿ ಸ್ನೇಹಪಾನಮಾಡಿದವನಿಗೆ ಸ್ನೇಹರೂಪವಾದ ವಿರೇಚನವನ್ನು ಕೊಡಬಾರದು, ಯಾಕೆಂದರೆ, (ಮೊದಲಿನ ಸ್ನೇಹನದಿಂದ) ಸ್ಥಾನಗಳನ್ನು ಬಿಟ್ಟಿರುವ ದೋಷಗಳು ಪುನಃ ಮಾರ್ಗಗಳಲ್ಲಿ ತಡೆದು ಹಿಡಕೊಳ್ಳುತ್ತವೆ.

25. ವಿಷಾಭಿಘಾತಪಿಡಕಾಶೋಫಪಾಂಡುವಿಸರ್ಪಿಣಃ | ಸ್ನೇಹ ವಿರೇಚನ ದಲ್ಲಿ ರೋಗ ಒಚಾರ ನಾತಿಸ್ನಿಗ್ಧಾ ವಿಶೋಧ್ಯಾಃ ಸ್ಯುಸ್ತಧಾ ಕುಷ್ಠ ಪ್ರಮೇಹಿಣಃ || (ಸು.552.)

 ವಿಷ, ಅಭಿಘಾತ, ಪಿಟಕ, ಶೋಫ, ಪಾಂಡು, ವಿಸರ್ಪ, ಕುಷ್ಠ, ಪ್ರಮೇಹ, ಇವುಗಳಿಂದ ಪೀಡಿತರಾದವರನ್ನು ಅತಿಸ್ನಿಗ್ದರನ್ನಾಗಿ ಮಾಡಿ ಶೋಧನ ಮಾಡಿಸಬಾರದು.