ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 415 - ಆ XXI.

26. ಶೋಧನವನ್ನು ಮೊದಲು ಸೇವಿಸದವನ ವಿಚಾರ

ಪ್ರಾಗಪೀತಂ ನರಂ ಶೋಧ್ಯಂ ಪಾಯಯೇತೌಷಧಂ ಮೃದು | ತತೋ ವಿಜ್ಞಾತಕೋಷ್ಠಸ್ಯ ಕಾರ್ಯಂ ಸಂಶೋಧನಂ ಪುನಃ ||(ಸು. 552.)

ಶೋಧನದ ಔಷಧವನ್ನು ಮೊದಲು ಸೇವಿಸದ ಮನುಷ್ಯನಿಗೆ ಶೋಧನ ಮಾಡಿಸಬೇಕಾದ್ದಲ್ಲಿ ಮೃದುವಾದ ಔಷಧವನ್ನು ಕುಡಿಸಿ, ಹೊಟ್ಟೆಯ ಸ್ವಭಾವವನ್ನು ತಿಳಿದುಕೊಂಡು, ಅನಂತರ ಅವಶ್ಯವಿದ್ದರೆ ಪುನಃ ಚೆನ್ನಾಗಿ ಶೋಧನ ಮಾಡಿಸಬಹುದು.

27. ಪ್ರಶಸ್ತ ವಿರೇಚನೌ ಪಧದ ಲಕ್ಷಣ

ಸುಖಂ ದೃಷ್ಟಫಲಂ ಹೃದ್ಯಮಲ್ಪಮಾತ್ರಂ ಮಹಾಗುಣಂ | ವ್ಯಾಪತ್ಸ್ವಲ್ಪಾತ್ಯಯಂ ಚಾಪಿ ಪಿಬೇನ್ನೃಪತಿರೌಷಧಂ || (ಸು. 552.)

ಅರಸನಿಗೆ ಕೊಡುವ ಔಷಧವು ಸುಖಕರವಾಗಿಯೂ, ಮನೋಹರವಾಗಿಯೂ, ಮಹಾ ಗುಣವುಳ್ಳದ್ದಾಗಿಯೂ, ಪ್ರಮಾಣದಲ್ಲಿ ಅಲ್ಪವಾಗಿಯೂ, ಇರಬೇಕು ಮಾತ್ರವಲ್ಲದೆ, ಅದನ್ನು ಮೊದಲು ಕೊಟ್ಟು ಫಲ ನೋಡಿರಬೇಕು ಮತ್ತು ಅದು ಸರಿಯಾಗಿ ಕೆಲಸ ಮಾಡದೆ ಹೋದರೆ ಉಂಟಾಗತಕ್ಕ ದೋಷವು ಅಲ್ಪವಾಗಿರಬೇಕು

28. ಶೋಧನಕ್ಕೆ ಸ್ನೇಹಸ್ವೇದಗಳ ಅವಶ್ಯಕತೆ

ಸ್ನೇಹಸ್ವೇದಾವನಭ್ಯಸ್ಯ ಯಸ್ತು ಸಂಶೋಧನಂ ಪಿಬೇತ್ | ದಾರುಶುಷ್ಕಮಿವಾನಾಮೇ ದೇಹಸ್ತಸ್ಯ ವಿಶೀರ್ಯತೇ || (ಸು. 552.)

ಸ್ನೇಹಸ್ವೇದಗಳನ್ನು ಅಭ್ಯಾಸಮಾಡದೆ ಯಾವನು ಸಂಶೋಧನದ ಔಷಧವನ್ನು ಕುಡಿ ಯುತ್ತಾನೋ, ಒಣಗಿದ ಮರದ ತುಂಡು ಬೊಗ್ಗಿ ಸುವಾಗ ಮುರಿದು ಹೋಗುವಂತೆ, ಅವನ ದೇಹವು ಕೆಡಕನ್ನು ಹೊಂದುತ್ತದೆ.

29. ಶೋಧನ ಸಂಬಂಧ ಉಂಟಾಗಬಹುದಾದ ದೋಷಗಳು

ವೈದ್ಯಾತುರನಿಮಿತ್ತಂ ವಮನಂ ವಿರೇಚನಂ ಚ ಪಂಚದಶಧಾ ವ್ಯಾಪ ದ್ಯತೇ | ತತ್ರ ವಮನಸ್ಯಾಧೋಗತಿರೂರ್ಧ್ವಂ ವಿರೇಚನಸ್ಯೇತಿ ಪೃಧಕ್ | ಸಾಮಾನ್ಯಮುಭಯೋಃ ಸಾವಶೇಪೌಷಧತ್ವಂ ಜೀರ್ಣೌಷಧತ್ವಂ ಹೀನಾಧಿಕದೋಷಾಪಹೃತತ್ವಂ ವಾತಶೂಲವಯೋಗೋsತಿಯೋ ಗೋ ಜೀವಾಧಾನಮಾಧ್ಮಾನಂ ಪರಿಕರ್ತಿಕಾ ಪರಿಸ್ರಾವಃ ಪ್ರವಾ ಹಿಕಾ ಹೃದಯೋಪಸರಣಂ ವಿಬಂಧ ಇತಿ | (ಸು. 532.)

ವೈದ್ಯನ ನಿಮಿತ್ತ ಮತ್ತು ರೋಗಿಯ ನಿಮಿತ್ತ ಸೇರಿ, ವಮನ ಮತ್ತು ವಿರೇಚನ ಹದಿನೈದು ವಿಧವಾಗಿ ಕೆಡಕನ್ನುಂಟುಮಾಡುತ್ತವೆ. ಅವುಗಳೊಳಗೆ ವಮನವು ಕೆಳಗೆ ಹೋಗುವದು ಮತ್ತು ವಿರೇಚನವು ಮೇಲೆ ಹೋಗುವದೆಂಬದು ಅದದಕ್ಕೆ ಪ್ರತ್ಯೇಕ ಉಳಿದ ಎರಡಕ್ಕೂ ಸಾಮಾನ್ಯವಾದ ದೋಷಗಳು ಯಾವವೆಂದರೆ 1. ಔಷಧದ ಶೇಷ ಹೊಟ್ಟೆಯೊಳಗುಳಿದುಹೋಗುವದು, 2. ಔಷಧವು ಜೀರ್ಣವಾಗಿ ಹೋಗುವದು, 3. ದೋಷಾಪಹಾರ ಕಡಿಮೆಯಾಗುವದು, 4.ದೋಷಾಪಹಾರ ಅಧಿಕವಾಗುವದು, 5. ವಾತಶೂಲ,