ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXI - 416 -

6. ಅಯೋಗ (ಔಷಧ ಕಡಿಮೆಯಾಗಿ ಕೊಟ್ಟದ್ದು ), 7. ಅತಿಯೋಗ, 8. ಜೀವ ತೆಗೆಯು ವದು, 9. ಆಧ್ಮಾನ, 10. ಪರಿಕರ್ತಿಕಾ (ಕತ್ತರಿಸಿದ ಹಾಗಿನ ನೋವು), 11. ಪರಿಸ್ರಾವ (ನೀರು ಊಜುವದು), 12. ಪ್ರವಾಹಿಕಾ (ಅತಿಸಾರ), 13. ಹೃದಯ ಸೇರುವದು, 14. ಮಲಬದ್ಧತೆ, ಹೀಗೆ ಹದಿನಾಲ್ಕು.

30. ವಮನದ ಅಧೋ ಗತಿಗೆ ಕಾರಣ ಮತ್ತು ಪರಿಹಾರ

ತತ್ರ ಬುಭುಕ್ಷಾಪೀಡಿತಸ್ಯಾತಿತೀಕ್ಷ್ಣಗ್ನೇರ್ಮೃದುಕೊಷ್ಠಸ್ಯ ಚಾವತಿಷ್ಠ ಮಾನಂ ದುರ್ಬಲಸ್ಯ ವಾ ಗುಣಸಾಮಾನ್ಯಭಾವಾದ್ವಮನಮಧೋ ಗಚ್ಛತಿ | ತತ್ರೇಪ್ಸಿತಾನವಾಪ್ತಿರ್ದೋಷೋತ್ಕರ್ಷಶ್ಚ | ತಮಾಶು ಸ್ನೇಹ ಯಿತ್ವಾ ಭೂಯಸ್ತೀಕ್ಷ್ಲತರೈರ್ವಾಮಯೇತ್ | (ಸು. 552-53.)

ಅವುಗಳೊಳಗೆ, ಹಸಿವೆಯಿಂದ ಪೀಡಿತನಾದವನಿಗೆ, ಅತಿತೀಕ್ಷವಾದ ಅಗ್ನಿಯುಳ್ಳವ ನಿಗೆ, ಮೃದು ಹೊಟ್ಟೆಯವನಿಗೆ, ಅಧವಾ ದುರ್ಬಲನಿಗೆ, (ಕಫವಿಲ್ಲದಿರುವಿಕೆ) ಗುಣವು ಸಾಮಾನ್ಯವಾಗಿರುವದರಿಂದ, ಕೂಡಲ್ಪಟ್ಟ ವಮನೌಷಧವ್ರ ನಿಂತಿದ್ದು (ಪಾಕವಾಗಿ) ಕೆಳಗೆ ಹೋಗುತ್ತದೆ. ಅದರಿಂದ ಈಪ್ಸಿತವು ಪೂರೈಸದೆ ಹೋಗುವದಲ್ಲದೆ, ದೋಷವು ವೃದ್ಧಿ ಯಾಗುತ್ತದೆ. ಅಂಧವರಿಗೆ ಬೇಗನೇ ಸ್ನೇಹಕ್ರಮವನ್ನು ನಡಿಸಿ, ಇನ್ನೂ ತೀಕ್ಷ್ಲವಾದ ಔಷಧಗಳಿಂದ ಪುನಃ ವಾಂತಿಮಾಡಿಸಬೇಕು.

31. ಎರೇಚನದ ಊರ್ಧ್ವಗತಿಗೆ ಕಾರಣ ಮತ್ತು ಪರಿಹಾರ

ಅಪರಿಶುದ್ದಾಮಾಶಯಸ್ಯೋತ್ಕೃಷ್ಟಶ್ಲೇಷ್ಮಣಃ ಸಶೇಷಾನ್ನಸ್ಯ ವಾsಹೃ ದ್ಯಮತಿಪ್ರಭೂತವಿರೇಚನಂ ಪೀತಮೂರ್ಧ್ವಂ ಗಚ್ಚತಿ | ತತ್ರಾಶುದ್ಧಾ ಮಾಶಯಮುಲ್ಬಣಶ್ಲೇಷ್ಮಾಣಮಾಶು ವಾಮಯಿತ್ವಾ ಭೂಯಸ್ತ್ರೀಕ್ಷ್ಣತ ರೈರ್ವಿರೇಚಯೇತ್ | ಆಮಾಶಯೇ ತ್ವಾಮವತ್ ಸಂವಿಧಾನಂ | ಅಹೃ ದ್ಯೇsತಿಪ್ರಭೂತೇ ಚ ಹೃದ್ಯಂ ಪ್ರಮಾಣಂ ಯುಕ್ತಂ ಚ | ಅತ ಊರ್ಧ್ವ ಮುತ್ತಿಷ್ಠತ್ಯೌಷಧೇ ನತೃತೀಯಂ ಪಾಯಯೇತ್ | ತತಸ್ತ್ವೇನಂ ಮಧು ಘೃತಫಾಣಿತಯುಕ್ತೈರ್ಲೇಹೈರ್ವಿರೇಚಯೇತ್ | (ಸು 553.)

ಆಮಾಶಯ ಶುದ್ಧ ಮಾಡಲ್ಪಡದವನಿಗೆ, ಅತಿಯಾಗಿ ಕಫವಿದ್ದವನಿಗೆ, ಅಧವಾ ಉಂಡ ಅನ್ನದ ಶೇಷ ಪಚನವಾಗದೆ ಉಳಿದವನಿಗೆ, ಮನಸ್ಸಿಗೆ ಒಪ್ಪದ ರೀತಿಯಲ್ಲಿ , ಅಧವಾ ಪ್ರಮಾಣದಲ್ಲಿ ಹೆಚ್ಚಾಗಿ, ಕೊಡಲ್ಪಟ್ಟ ವಿರೇಚನವು ಮೇಲಕ್ಕೆ ಹೋಗುತ್ತದೆ. ಆ ಸಂಗತಿಯಲ್ಲಿ ಆಮಾ ಶಯ ಶುದ್ಧವಿಲ್ಲದವನನ್ನೂ, ಕಫ ಹೆಚ್ಚಾದವನನ್ನೂ, ಬೇಗನೆ ವಾಂತಿಮಾಡಿಸಿ, ಪುನಃ ಇನ್ನೂ ತೀಕ್ಷ್ಲವಾದ ಔಷಧಗಳನ್ನು ಕೊಟ್ಟು ವಿರೇಚನ ಮಾಡಿಸಬೇಕು. ಆಮಾಶಯದ ವಿಷಯದಲ್ಲಿ ಆಮಕ್ಕೆ ಹೇಳಿರುವ (ಪಾಚನಾದಿ) ವಿಧಿ ಯುಕ್ತವಾದದ್ದು. ಮೊದಲು ಕೊಟ್ಟ ಔಷಧವು ಮನಸ್ಸಿಗೆ ಒಗ್ಗ (ಹಿತವಾಗದ)ದ ಸಂಗತಿಯಲ್ಲಿ, ಒಗ್ಗುವ ಹಾಗಿನ ಔಷಧವನ್ನು ಕೊಡ ತಕ್ಕದ್ದು; ಮತ್ತು ಪ್ರಮಾಣ ಹೆಚ್ಚಾದ ಸಂಗತಿಯಲ್ಲಿ, ಯುಕ್ತಪ್ರಮಾಣವನ್ನು ಕಲ್ಪಿಸಬೇಕು; ಆ ಮೇಲೆಯೂ ಔಷಧವು ನಿಂತದ್ದಾದರೆ, ಮೂರನೆ ಸರ್ತಿ ವಿರೇಚನವನ್ನು ಕೊಡಕೂಡದು; ಆದರೆ ಆ ಮೇಲೆ ಅಂಧವನಿಗೆ ಜೇನು, ತುಪ್ಪ, ಮತ್ತು ರವೆ ಬೆಲ್ಲ, ಇವುಗಳಿಂದ ಕೂಡಿದ ಲೇಹ ಗಳನ್ನು ಕೊಟ್ಟು ಹಿರೇಚನ ಮಾಡಿಸಬೇಕು