ಪುಟ:ಅರಮನೆ.pdf/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಸಿಸುಪಾಲನ ರುಂಡವನ್ನು ಕತ್ತರಿಸಲೋಸುಗ ಕೃಷ್ಣ ಪರಮಾತುಮನೆಸೆದ ಮಾಯಾವಿ ತಳಿಗೆ ಅಲ್ಲಿ ಬಿದ್ದಿತ್ತಂತ.. ಅಲ್ಲಿ ವಂದೆರಡು ಯುದ್ಧಗಳಾಗಿದ್ದವಂತ. ಅಲ್ಲಿ ರಣ ಭಯವನಾಯಕ ವಾಯುಸೇವನೆಗೆಂದೇ ಕಟ್ಟಿಸಿದ್ದ ಮೂರುಪ್ಪರಿಗೆ ಮಹಲು ಯಿತ್ತಂತ.. ಯೇಕರಿಕೆ ದೇಕರಿಕೆ ಮಾಡೋರಿಲ್ಲದಾಗಿ ಯರಡು ಮಹಡಿಗಳುದುರಿ ಆಗ್ಗೆ ವುಳಕೊಂಡಿದ್ದು ನೆಲ ಮಹಲು ಮಾತ್ರ.. ಅಂಥ ಘಟನಾವಳಿಗಳಿಂದಾಗಿ ಪ್ರಾಪ್ತವಾಗಿರುವ ರಣಬಯಲೊಳಗ.. ಅಂತರ್ ಪಿಚಾಚಿಯಂಥ ಮಹಲೊಳಗ ವುಳುಕೊಳ್ಳೋದು ವತ್ತಟ್ಟಿಗಿರಲಿ.. ಅದರತ್ತ ನೋಡುದಕ ಯಂಟೆದೆ ಯಿರಬೇಕು.. ಅರಮನೆಯಿಂದ ಪರಿತ್ಯಕ್ತಳಾದ ಕಾಲಕ್ಕೆ ವರಮಾನ ಬಲು ಬೇಸರವೆಂದು ಕಂಡು ಬಂದು ರಾಜಮಾತೆಯು ಪರಂಪರಾಗತ ಪಿಚಾಚಿಗಳು ತಮ್ಮನ್ನು ವ೦ದು ಕಡೇಲಿಂದ ಅಮೂಲಾಗ್ರತಿಂಬಲೆಂದೋ.. ಕುಂಪಣಿ ಸರಕಾರದ ಕರುಳಿಗೆ ಸುರುಕು ಮುಟ್ಟಿಸಲೇಂದೋ ಅಲ್ಲಿ ವಸ್ತಿ ಮಾಡಿದ್ದಳು.. ಮರವರು ಬಂದು ವಪ್ಪತ್ತಾದರೂ ವುಂಡಿರಾ ಯಂದು ಕೇಳಲಿಲ್ಲ. ವುಪಾಸಯಿದ್ದೀರಾ ಯಂದು ಕೇಳಲಿಲ್ಲ.. ಯೇಸು ವರಸು ದಿನಮಾನ ತಮ್ಮ ವಂಶಸ್ತರಿಂದ ಆಳಿಸಿಕೊಂಡಂಥಾ ಪ್ರಜೆಗಳಿಗೆ ರಾಜರೆಂಬ ದರಕಾರುಯಿಲ್ಲ, ಯಿವರಿಗೆ ಕುಂಪಣಿ ಸರಕಾರದಿಂದ ತಕ್ಕ ಪಾಠ ಕಲಿಸಬೇಕೆಂ “ಅನ್ನೋ ತಾಯಿ.. ಭಯಮಾಂಬೆ.. ಯಿದಾ ನ್ಯಾಯವೇನು? ಕುಂಪಣಿ ಸರಕಾರಕ್ಕೆ ಬುಲಾವು ಕೊಟ್ಟಿರೋದು ಸಯ್ಯಾ...” ಯಂದು ಮುಕ್ಕರಿದ್ದ ಜನರು ಕೂಗಿದರು. ಅದಕ್ಕೆ ಪ್ರತ್ಯುತ್ತರ ವಳಗಿನಿಂದ ಬರಲಿಲ್ಲ.. ಆಗಿದ್ದು ಜನರ ಪಯ್ಕೆ ವಂದಿಬ್ಬರು ಯಾರಿದ್ದೀರವ್ವಾ.. ಯಾರಿದ್ದೀರವ್ವಾss' ಯಂದನಕಂತ ವಂದೊಂದು ಮೆಟ್ಟಿಲೇರುವುದಕು.. ಮಹಲು ಹಿಂದಕು ಮುಂದಕು ಅಳ್ಳಾಡುದಕು.. ವಬ್ದಾರಿ ವಳಗಿನಿಂದ ತಲಬಾಕಲಿಗೆ ಬಂದು ನಿಲ್ಲುವುದಕು ಸರಿಹೋತು.. ಆಕೆ ಯೀಕೆ ಯಿದ್ದಂಗದಾಳ. ಆಕೆ ಯಿದ್ದಂಗದಾಳ.. ಯಾವಾಕೆಯಾದರೂ ಆಗಿರಲಿ ಯಂದು ಜನರು ಕೇಳಲಕಂತ ಬಾಯಿ ತೆರೆಯುತ್ತಲೆ ಆಕೆಯಿದ್ದು ರಾಜಮಾತೇನ ನೀವು ಮರೆತೀರಪ್ಪಾ.. ನಿಮ್ಮನ್ನು ರಾಜಮಾತೆ ಮರೆತಾಳರಪ್ಪಾ.. ಆಕೆ ತನ್ನ ವಲವು ಮಯ್ಯನು ನೀಗಿಕೊಳ್ಳಲಕ ಕಾಸೀಗೋಗಿರಬೌದು.. ರಾಮೇಸುರಕ ಹೋಗಿರಬೌದು.. ಚವುಕಾಸಿ ಮಾಡಲಕ ಕೂಡ್ಲಿಗೀಗೆ ಹೋಗಿದ್ದರೂ ಹೋಗಿರಬೌದು ಕನರಪ್ಪಾ.. ಹೋಗಿಲ್ಲಿರೋದು ಬಾಯಿಸತ್ತ ನಾವು ನಾಕಯ್ದು